ಹಳೆಯಂಗಡಿಯಲ್ಲಿ ಅಪಾಯಕಾರಿ ಮರಗಳ ತೆರವು ಕಾರ್ಯಾಚರಣೆ

web - mara theravu
ಇಂದಿರಾನಗರ ಹಾಗೂ ರೈಲ್ವೇ ಗೇಟ್ ಬಳಿ ಅಪಾಯಕಾರಿ ಮರಗಳ ಗೆಲ್ಲುಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಯಿತು.
Published on

ಮೂಲ್ಕಿ: ಹಳೆಯಂಗಡಿ ಗ್ರಾಮ ಪಂಚಾಯಿತಿ, ಮೆಸ್ಕಾಂ ಇಲಾಖೆ ಹಾಗೂ ಅರಣ್ಯ ಇಲಾಖೆ ಸಹಕಾರದಿಂದ ಹಳೆಯಂಗಡಿ ಕಿನ್ನಿಗೋಳಿ ಪ್ರಧಾನ ರಸ್ತೆಯ ಇಂದಿರಾನಗರ ಹಾಗೂ ರೈಲ್ವೇ ಗೇಟ್ ಬಳಿ ಅಪಾಯಕಾರಿ ಮರಗಳ ಗೆಲ್ಲುಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಯಿತು.

ರಸ್ತೆ ಸಂಚಾರ ಅಸ್ತವ್ಯಸ್ತ

ಈ ಸಂದರ್ಭ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಉತ್ತರ ಟ್ರಾಫಿಕ್ ಪೊಲೀಸರು, ಮೂಲ್ಕಿ ಪೊಲೀಸರ ಸಹಕಾರದೊಂದಿಗೆ ಸಂಚಾರ ನಿಯಂತ್ರಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೂರ್ಣಿಮಾ, ಸದಸ್ಯರಾದ ಅಬ್ದುಲ್ ಅಜೀಜ್, ಅಬ್ದುಲ್ ಖಾದರ್, ಪಿಡಿಒ ದೀಪ್ತಿ, ಅರಣ್ಯ ಇಲಾಖೆ ಅಧಿಕಾರಿ ನಾಗೇಶ್ ಬಿಲ್ಲವ, ಹಳೆಯಂಗಡಿ ಮೆಸ್ಕಾಂ ಇಲಾಖೆ ಅಧಿಕಾರಿ ಶೇಖರ ಆಚಾರ್ಯ, ಸಾಮಾಜಿಕ ಕಾರ್ಯಕರ್ತ ಮನೋಜ್ ಕೆಲೆಸಿಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net