ಸುಂದರ ಯುವತಿಗಾಗಿ ಆಕೆ ಕಳುಹಿಸಿದ ಲೊಕೇಶನ್​ಗೆ ಹೋದ ಯುವಕ: ಬಾಗಿಲು ತೆರೆದ ಕೂಡಲೇ ಕಾದಿತ್ತು ಬಿಗ್​ ಶಾಕ್​! Young man

Young man
Published on

Young man : ಸುಂದರವಾದ ಯುವತಿಯನ್ನು ಹುಡುಕಿ ಹೊರಟ ಯುವಕನೊಬ್ಬ ತೃತೀಯ ಲಿಂಗಿಯ ಬಲೆಯಲ್ಲಿ ಸಿಲುಕಿ ಪರದಾಡಿದ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ.

ಘಟನೆಯ ವಿವರಕ್ಕೆ ಬರುವುದಾದರೆ, ಉದಯಕುಮಾರ್ (21) ಎಂಬ ಯುವಕ ವಿಲ್ಲುಪುರಂ ಜಿಲ್ಲೆಯ ನಿವಾಸಿ. ಆತ ಚೆನ್ನೈನ ಕೊರಟ್ಟೂರು ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ ಮತ್ತು ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಈತ ಸುಂದರ ಮಹಿಳೆಯರೊಂದಿಗೆ ಮೋಜು ಮಾಡಲು ಬಯಸಿದ್ದ. ಇದಕ್ಕಾಗಿ ಆತ ಮೊಬೈಲ್ ಫೋನ್ ಅಪ್ಲಿಕೇಶನ್ ಮೂಲಕ ಸುಂದರ ಮಹಿಳೆಯರಿಗಾಗಿ ಹುಡುಕಾಡಿದ.

ಹೀಗಿರುವಾಗ, ಅಶ್ವಿತಾ ಹೆಸರಿನಿಂದ ಮಹಿಳೆಯೊಬ್ಬರು ಆತನಿಗೆ ಸುಂದರವಾದ ಫೋಟೋ ಕಳುಹಿಸಿ ಲೈಂಗಿಕ ಕ್ರಿಯೆಗೆ ಆಹ್ವಾನಿಸಿದ್ದಳು. ಅದನ್ನು ನೋಡಿದ ಉದಯಕುಮಾರ್, ಸ್ವಲ್ಪವೂ ಯೋಚನೆ ಮಾಡದೇ ಆಕೆ ಕಳುಹಿಸಿದ್ದ ಲೊಕೇಶನ್​ಗೆ ಹೋದನು. ಚೆನ್ನೈನ ವಲಸರವಕ್ಕಂನ ಮುರಳಿ ಕೃಷ್ಣ ನಗರ ಪ್ರದೇಶದಲ್ಲಿರುವ ಆಕೆಯ ಮನೆಗೆ ಉದಯ್​ ಕುಮಾರ್​ ಹೋದನು.

ಅಶ್ವಿತಾ ಹೆಸರಿನ ಸುಂದರ ಮಹಿಳೆ ಇರುತ್ತಾಳೆ ಎಂದು ಭಾವಿಸಿ ಮನೆಗೆ ಹೋಗಿದ್ದ ಉದಯಕುಮಾರ್​ಗೆ ಒಂದು ಶಾಕ್​ ಎದುರಾಗಿತ್ತು. ಅದೇನೆಂದರೆ, ಅಲ್ಲಿ ಕಂಡಿದ್ದು ತೃತೀಯ ಲಿಂಗಿ ಮಹಿಳೆಯನ್ನ. ಆಕೆಯನ್ನು ನೋಡಿ ಉದಯಕುಮಾರ್​ಆಘಾತಕ್ಕೊಳಗಾಗಿದ್ದ. ಈ ವೇಳೆ ತೃತೀಯ ಲಿಂಗಿ ಮತ್ತು ಆಕೆಯ ಜೊತೆಗಿದ್ದ ಮತ್ತೊಬ್ಬ ಯುವಕ ಸೇರಿ ಉದಯಕುಮಾರ್​ನನ್ನು ಥಳಿಸಿ, ಚಾಕುವಿನಿಂದ ಬೆದರಿಸಿ, ಆತನ ಮೊಬೈಲ್ ಫೋನ್ ಮತ್ತು ಹಣವನ್ನು ಕಸಿದುಕೊಂಡಿದ್ದಾರೆ.

ಈ ಬಗ್ಗೆ ಯಾರಿಗಾದರೂ ಹೇಳಿದರೆ ಕೊಲ್ಲುವುದಾಗಿ ಬೆದರಿಸಿ ಆತನನ್ನು ಬಿಟ್ಟು ಕಳುಹಿಸಿದ್ದಾರೆ. ಇದೀಗ ಉದಯಕುಮಾರ್ ನೀಡಿದ ದೂರಿನ ಆಧಾರದ ಮೇಲೆ, ವಲಸರವಕ್ಕಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಘಟನೆಯಲ್ಲಿ ಭಾಗಿಯಾಗಿದ ಇಬ್ಬರು ವ್ಯಕ್ತಿಗಳಾದ ಮುಸ್ತಫಾ ಅಲಿಯಾಸ್ ಅಶ್ವಿತಾ (30) ಮತ್ತು ಆಕೆಯ ಸ್ನೇಹಿತ ದಿನೇಶ್ ಕುಮಾರ್ (28) ಎಂಬುವನ್ನು ಬಂಧಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net