ನನ್ನ ಹನಿಮೂನ್ ಪ್ಲಾನ್​ ಸಹ ರೆಡಿ... ಮದುವೆ ಸುದ್ದಿ ಬೆನ್ನಲ್ಲೇ ನಟಿ ತ್ರಿಷಾ ಹೇಳಿಕೆ ವೈರಲ್​! Actress Trisha

Actress Trisha
Published on

Actress Trisha : ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಮದುವೆ ಕುರಿತಾಗಿ ಹರಿದಾಡುತ್ತಿರುವ ವದಂತಿಗಳಿಗೆ ಸ್ಪಷ್ಟನೆ ನೀಡುವ ಮೂಲಕ ಬಹುಭಾಷಾ ತಾರಾ ತ್ರಿಷಾ ತೆರೆ ಎಳೆದಿದ್ದಾರೆ.

ಅಂದಹಾಗೆ, ತ್ರಿಷಾ ಅವರನ್ನು ಪರಿಚಯಿಸುವ ಅಗತ್ಯವಿಲ್ಲ. ತಮಿಳು, ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಸ್ಟಾರ್​ ನಟಿಯಾಗಿರುವ ತ್ರಿಷಾ, ಇಳಯದಳಪತಿ ವಿಜಯ್​, ಸೂರ್ಯ, ವಿಕ್ರಮ್, ಪ್ರಭಾಸ್​, ಚಿರಂಜೀವಿ, ಅಜಿತ್​, ಸಿಂಬು ಸೇರಿದಂತೆ ಸ್ಟಾರ್​ ನಟರ ಜೊತೆ ಅಭಿನಯಿಸಿದ್ದಾರೆ. ಕನ್ನಡದಲ್ಲೂ ದಿವಂಗತ ನಟ ಪುನೀತ್​ ರಾಜ್​ಕುಮಾರ್​ ಅಭಿನಯದ ಪವರ್​ಸ್ಟಾರ್​ ಸಿನಿಮಾದಲ್ಲಿ ನಾಯಕಿಯಾಗುವ ಮೂಲಕ ಕನ್ನಡಿಗರಿಗೂ ಪರಿಚಿತರಾಗಿದ್ದಾರೆ.

Trisha 2

ತ್ರಿಷಾ ಭಾರತದ ಚಿತ್ರರಂಗದ ಸಾರ್ವಕಾಲಿಕ ರಾಣಿ. ಹೆಚ್ಚು ಗಾಸಿಪ್‌ಗಳಲ್ಲಿ ಕಾಣಿಸಿಕೊಳ್ಳದ ನಟಿ. ಸದ್ಯ ಸಾಕಷ್ಟು ಸಿನಿಮಾಗಳಲ್ಲಿ ಬಿಜಿಯಾಗಿರುವ ತ್ರಿಷಾ, 41 ವರ್ಷ ವಯಸ್ಸಾದರೂ ಇನ್ನೂ ಬ್ಯಾಚುಲರ್​ ಆಗಿಯೇ ಉಳಿದಿದ್ದಾರೆ.ಈ ಹಿಂದೆ ನಟ ಸಿಂಬು ಮತ್ತು ರಾಣ ದಗ್ಗುಬಾಟಿ ಅವರ ಜೊತೆ ತ್ರಿಷಾ ಡೇಟಿಂಗ್​ ಮಾಡುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ, ಇದು ವದಂತಿಯಾಗಿಯೇ ಉಳಿಯಿತು. ಇದರ ನಡುವೆ ತ್ರಿಷಾ ಅವರು 2015ರಲ್ಲಿ ಉದ್ಯಮಿ ವರುಣ್ ಮಣಿಯನ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು. ಇದು ಬಹಳ ಸುದ್ದಿಯಾಗಿತ್ತು. ಅಲ್ಲದೆ, ನಿಶ್ಚಿತಾರ್ಥದ ಫೋಟೋಗಳು ಸಹ ಅಂತರ್ಜಾಲದಲ್ಲಿ ವೈರಲ್ ಆಗಿದ್ದವು. ಆದರೆ, ಇಬ್ಬರ ನಡುವೆ ಏನಾಯಿತೋ ಗೊತ್ತಿಲ್ಲ, ಏಕಾಏಕಿ ಇಬ್ಬರೂ ಬೇರ್ಪಟ್ಟರು! ಮದುವೆಯೂ ನಿಂತುಹೋಯಿತು.

ಇತ್ತೀಚೆಗೆ ಹರಿದಾಡಿದ ವದಂತಿ

ಕಳೆದ ಕೆಲವು ದಿನಗಳಿಂದ ತ್ರಿಷಾ ಮತ್ತು ನಟ ವಿಜಯ್ ಪ್ರೀತಿಸುತ್ತಿದ್ದಾರೆ ಎಂಬ ವದಂತಿಗಳು ಹರಡುತ್ತಿವೆ. ಆದರೆ, ತ್ರಿಷಾ ಆಗಲಿ ಅಥವಾ ವಿಜಯ್​ ಆಗಲಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅವರಿಬ್ಬರು ಆಪ್ತ ಸ್ನೇಹಿತರು ಎಂಬ ಮಾತಿದೆ. ಇದರ ನಡುವೆ ಇತ್ತೀಚೆಗೆ ಮತ್ತೊಂದು ಸುದ್ದಿ ಭಾರಿ ಚರ್ಚೆಯಾಯಿತು. ಅದೇನೆಂದರೆ, ತ್ರಿಷಾ ಅವರು ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂದು ವರದಿಯಾಯಿತು. ಈ ಸುದ್ದಿಯನ್ನು ಸಿಯಾಸತ್ ಎಂಬ ಜಾಲತಾಣ ವರದಿ ಮಾಡಿತು. ತ್ರಿಷಾ ಅವರನ್ನು ವರಿಸುವ ವರ ಚಂಡೀಗಢ ಮೂಲದ ಉದ್ಯಮಿ ಎಂದು ಹೇಳಲಾಗಿತ್ತು. ತ್ರಿಷಾ ಅವರ ಕುಟುಂಬವು ವರ್ಷಗಳಿಂದಲೂ ವರನ ಕುಟುಂಬದೊಂದಿಗೆ ಆತ್ಮೀಯವಾಗಿದ್ದು, ಇದೀಗ ತ್ರಿಷಾ ಅವರು ಮದುವೆಗೆ ರೆಡಿಯಾಗಿದ್ದಾರೆ ಎಂಬ ಸುದ್ದಿ ಕೆಲ ದಿನಗಳಿಂದ ಹರಿದಾಡಿತು. ಈ ಸುದ್ದಿಯ ಬಗ್ಗೆ ತ್ರಿಷಾ ಅವರ ತಾಯಿಯನ್ನು ಸ್ಥಳೀಯ ಮಾಧ್ಯಮಗಳು ಸಂಪರ್ಕಿಸಿದಾಗ, "ಇದು ಆಗಾಗ್ಗೆ ಹರಡುವ ವದಂತಿ. ಇದರಲ್ಲಿ ಯಾವುದೇ ಸತ್ಯವಿಲ್ಲ. ತ್ರಿಷಾ ಮದುವೆಯಾದರೆ ಸಂತೋಷವಾಗುತ್ತದೆ" ಎಂದು ಹೇಳಿದರು.

Trisha 1

ಹನಿಮೂನ್​ ಪ್ಲಾನ್​ ರೆಡಿ ಮಾಡ್ತಿದ್ದಾರೆ ಎಂದ ತ್ರಿಷಾ

ಇದೀಗ ತ್ರಿಷಾ ಕೂಡ ವದಂತಿಗಳಿಗೆ ಪ್ರತಿಕ್ರಿಯಿಸಿದ್ದಾರೆ. ತಮ್ಮ ಇನ್‌ಸ್ಟಾ ಸ್ಟೋರಿಯಲ್ಲಿ ಒಂದು ಪೋಸ್ಟ್​ ಮಾಡಿರುವ ತ್ರಿಷಾ, ಇತರರು ನನ್ನ ಜೀವನದ ಬಗ್ಗೆ ಯೋಜಿಸುವುದು ನನಗೆ ತುಂಬಾ ಇಷ್ಟ. ಅವರು ನನ್ನ ಹನಿಮೂನ್ ಪ್ಲಾನ್ ಕೂಡ ರೆಡಿ ಮಾಡ್ತಿದ್ದಾರೆ​ ಎಂದು ನಾನು ಭಾವಿಸುತ್ತೇನೆ ಎನ್ನುವ ಮೂಲಕ ವದಂತಿಯ ಬಗ್ಗೆ ವ್ಯಂಗ್ಯವಾಡಿದ್ದಾರೆ. ಈ ಮೂಲಕ ಮದುವೆಯ ವದಂತಿಗಳಿಗೆ ತ್ರಿಷಾ ಅವರು ಮತ್ತೊಮ್ಮೆ ಅಂತ್ಯ ಹಾಡಿದ್ದಾರೆ.

Tirsha 1

ಅಂದಹಾಗೆ, ತ್ರಿಷಾ ಅವರು 2015 ರಲ್ಲಿ ಉದ್ಯಮಿ ವರುಣ್ ಮಣಿ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು ಆದರೆ, ಅವರ ಮದುವೆ ನಡೆಯಲಿಲ್ಲ. ಮದುವೆಯ ನಂತರವೂ ನಟನೆಯನ್ನು ಮುಂದುವರಿಸುವ ತ್ರಿಷಾ ಅವರ ಬಯಕೆಯನ್ನು ವರುಣ್ ವಿರೋಧಿಸಿದರು ಎನ್ನಲಾಗಿದೆ. ಈ ವಿಚಾರವಾಗಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾದವು ಎಂದು ಆ ಸಮಯದಲ್ಲಿ ಮಾಧ್ಯಮಗಳು ವರದಿ ಮಾಡಿದ್ದವು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net