ಬೆಂಗಳೂರಿನಲ್ಲಿ ಇನ್ನೂ ನಿಂತಿಲ್ಲ ಮಂಗಳಮುಖಿಯರ ದಾಂಧಲೆ; ಗೃಹ ಪ್ರವೇಶದ ವೇಳೆ ಮಾಡಿದ್ದೇನು ಗೊತ್ತಾ?

transjender (1)
Published on


ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮುಂಗಳಮುಖಿಯರು ಟ್ರಾಫಿಕ್ ಸಿಗ್ನಲ್​​ಗಳ ಸಮೀಪ, ಬಸ್ ಸ್ಟ್ಯಾಂಡ್ ಬಳಿ ವಾಹನ ಸವಾರರು, ದಾರಿಹೋಕರ ಬಳಿ ದುಡ್ಡು ಕೇಳುವ ದೃಶ್ಯ ಅಲ್ಲಲ್ಲಿ ಕಾಣಸಿಗುತ್ತದೆ. ಆದರೆ ವಯಾಲಿಕಾವಲ್ ಸಮೀಪ ಇಂದು ಬುಧವಾರ ಮುಂಗಳಮುಖಿಯರು ನಡೆದುಕೊಂಡ ಘಟನೆ ಎಂಥವರನ್ನು ಚಕಿತಗೊಳಿಸುತ್ತದೆ. ಹೌದು, ಮನೆ ಗೃಹ ಪ್ರವೇಶದ ವೇಳೆ ಏಕಾಏಕಿ ನುಗ್ಗಿದ ಮುಂಗಳಮುಖಿಯರು ಅಸಭ್ಯ ವರ್ತನೆ ತೋರಿ ದಾಂಧಲೆ ನಡೆಸಿರುವ ಘಟನೆ ಬೆಂಗಳೂರಿನ ವಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಘಟನೆಯ ವಿವರ: ವಯಾಲಿಕಾವಲ್ ಸಮೀಪ ಕುಟುಂಬವೊಂದು ಇಂದು ಬುಧವಾರ (ಜೂ.28) ಶಾಸ್ತ್ರೋತ್ರವಾಗಿ ಗೃಹ ಪ್ರವೇಶಕ್ಕೆ ಸಜ್ಜಾಗುತ್ತಿತ್ತು. ಆಗ ಮಧ್ಯಾಹ್ನ 2:30ರ ಸುಮಾರಿಗೆ ಮುಂಗಳಮುಖಿಯರು ಏಕಾಏಕಿ ಮನೆಯೊಳಗೆ ನುಗ್ಗಿದ್ದಾರೆ. ಮಂಗಳಮುಖಿಯರನ್ನು ನೋಡಿ ಕುಟುಂಬದವರು ಊಟಕ್ಕೆ ಕರೆದಿದ್ದಾರೆ. ಆದರೆ 'ನಮಗೆ ಹಣ ಕೊಡಿ' ಎಂದು ಬಂದಿದ್ದ ಮೂವರು ಮಂಗಳಮುಖಿಯರು ಕಿರಿಕ್ ತೆಗೆದಿದ್ದಾರೆ. ನಂತರ ಐನೂರು ರೂಪಾಯಿ ನೀಡಲಾಗಿದೆ.

ಆದರೆ ಇಷ್ಟಕ್ಕೆ ಸುಮ್ಮನಾಗದ ಮುಂಗಳಮುಖಿಯರು ಒಬ್ಬೊಬ್ಬರಿಗೆ ಐದೈದು ಸಾವಿರ ನೀಡುವಂತೆ ಖ್ಯಾತೆ ತೆಗೆದಿದ್ದಕ್ಕೆ ಮತ್ತೆ ಮೂವರಿಗೂ ಐದು ಸಾವಿರ ನೀಡಲಾಗಿದೆ. ಇಷ್ಟಕ್ಕೆ ಸುಮ್ಮನಾಗದ ಮಂಗಳಮುಖಿಯರು ಹಣ ಪಡೆಯದೆ ದಾಂಧಲೆ ನಡೆಸಿದ್ದಾರೆ. ಅಷ್ಟೇ ಅಲ್ಲ, ಬಾಯಿಗೆ ಬಂದಂತೆ ಬೈದು, ಕುಟುಂಬಸ್ಥರ ಮುಂದೆ ಅಸಭ್ಯ ವರ್ತನೆ ತೋರಿದ್ದಾರೆ. ಈ ಹಿಂದೆಯೂ ಕೂಡ ಬೆಂಗಳೂರಿನಲ್ಲಿ ಇದೇ ರೀತಿ ಘಟನೆ ನಡೆದದ್ದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net