ವಿಜಯವಾಣಿ ಸುದ್ದಿಜಾಲ ಬ್ರಹ್ಮಾವರ
ಇಂದು ತಂತ್ರಜ್ಞಾನ ಮತ್ತು ಕೌಶಲದ ಬದುಕಿನೊಂದಿಗೆ ಸ್ಫರ್ಧೆ ನಡೆಸಬೇಕಾದ ಅನಿವಾರ್ಯತೆ ಇದೆ ಎಂದು ಮಾನವ ಸಂಪನ್ಮೂಲ ತರಬೇತುದಾರ ಜೈ ಕಿಶನ್ ಭಟ್ ಹೇಳಿದರು.
ಸೋಮವಾರ ಬಾರಕೂರು ಹನೆಹಳ್ಳಿ ಗ್ರಾಮ ಪಂಚಾಯಿತಿ ಅರಿವು ಕೇಂದ್ರ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದಿಂದ ಯುವ ಉದ್ಯಮ ಆಸಕ್ತರು ಹಾಗೂ ಸ್ವಸಹಾಯ ಸಂಘದ ಯುವ ಮಹಿಳೆಯರಿಗೆ ಉದ್ಯಮಶೀಲತಾ ಕೌಶಲಾಭಿವೃದ್ಧಿ ಮತ್ತು ಸಣ್ಣ ಸಾಹಸೋಧ್ಯಮ ನಿರ್ವಹಣೆ ಕುರಿತ ಹತ್ತು ದಿನದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹನೆಹಳ್ಳಿ ಗ್ರಾಪಂ ಅಧ್ಯಕ್ಷೆ ಮಲ್ಲಿಕಾ, ಉಪಾಧ್ಯಕ್ಷ ಚಂದ್ರ ಮರಕಾಲ, ಬ್ರಹ್ಮಾವರ ತಾಪಂ ಕಾರ್ಯನಿರ್ವಣಾಧಿಕಾರಿ ಎಚ್.ವಿ ಇಬ್ರಾಹಿಂಪುರ, ಶಿಕ್ಷಣ ಫೌಂಡೇಶನ್ ಜಿಲ್ಲಾ ವ್ಯವಸ್ಥಾಪಕಿ ರೀನಾ ಎಸ್. ಹೆಗ್ಡೆ, ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರದ ಜಂಟಿ ನಿರ್ದೇಶಕ ಅರವಿಂದ ಬಾಲೇರಿ, ಹನೆಹಳ್ಳಿ ಪಿಡಿಒ ಅರುಂಧತಿ ಏಸುಮನೆ, ಗ್ರಂಥಾಲಯ ಮೇಲ್ವಿಚಾರಕಿ ರತ್ನಾ ಉಪಸ್ಥಿತರಿದ್ದರು.30 ಮಂದಿ ಮಹಿಳೆಯರು ತರಬೇತಿಯಲ್ಲಿ ಭಾಗವಹಿಸಿದ್ದರು. ಉಮೇಶ್ ಕಲ್ಯಾಣಪುರ ಸ್ವಾಗತಿಸಿದರು. ಶ್ರುತಿ ವಂದಿಸಿದರು.