ಕೃಪಾ ಶಾಲೆಯಲ್ಲಿ ಶಿಕ್ಷಕರ ದಿನ

krupa
ಯುಬಿಎಂಸಿ ಮತ್ತು ಸಿಎಸ್‌ಐ ಕೃಪಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರ ದಿನ ಆಚರಿಸಲಾಯಿತು
Published on

ಕುಂದಾಪುರ: ಯುಬಿಎಂಸಿ ಮತ್ತು ಸಿಎಸ್‌ಐ ಕೃಪಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇತ್ತೀಚೆಗೆ ಶಿಕ್ಷಕರ ದಿನ ಆಚರಿಸಲಾಯಿತು. ಪ್ರಾಂಶುಪಾಲೆ ಅನಿತಾ ಅಲಿಸ್ ಡಿಸೋಜ ಮತ್ತು ಶಿಶು ವಿಹಾರದ ಮುಖ್ಯಶಿಕ್ಷಕಿ ಸವಿತಾ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಶಿಕ್ಷಕರಿಗೆ ಕಾರ್ಯಕ್ರಮ ಆಯೋಜಿಸಿದರು. ಹಳೇ ವಿದ್ಯಾರ್ಥಿ ಡಿ.ಕೆ ಗಣೇಶ್, ಸಂಚಾಲಕ ಐರಿನ್ ಸಾಲಿನ್ಸ್, ಶಿಕ್ಷಕರು, ವಿದ್ಯಾರ್ಥಿ ನಾಯಕ ಮತ್ತು ಉಪನಾಯಕ ಕಾರ್ಯಕ್ರಮಕ್ಕೆ ಜಂಟಿ ಚಾಲನೆ ನೀಡಿದರು. ಇದೇ ವೇಳೆ ಡಿ.ಕೆ ಗಣೇಶ್ ಶಾಲೆಗೆ ಪ್ರೊಜೆಕ್ಟರ್ ಕೊಡುಗೆ ನೀಡಿದರು. ಪವಿತ್ರಾ ಮತ್ತು ರಾಜೇಶ್ವರಿ ವಿದ್ಯಾರ್ಥಿಗಳಿಗೆ ಕೃತಜ್ಞತೆ ಸಲ್ಲಿಸಿದರು. ವಿದ್ಯಾರ್ಥಿ ನಾಯಕ ಸೋಹನ್ ವಂದಿಸಿದರು. ರಾಯಣ್ಣ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net