ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಅವಶ್ಯ

prathibha
ಕುಂದಾಪುರ ಸಂತ ಜೋಸೆಫ್ ಪ್ರೌಢಶಾಲೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಸಂಚಾಲಕಿ ಸಿಸ್ಟರ್ ಸುಪ್ರಿಯಾ ಉದ್ಘಾಟಿಸಿದರು.
Published on

ವಿಜಯವಾಣಿ ಸುದ್ದಿಜಾಲ ಕುಂದಾಪುರ

ಮಕ್ಕಳು ಕಷ್ಟಪಟ್ಟು ಮುಂದೆ ಬರಬೇಕು. ಪ್ರತಿಭಾ ಕಾರಂಜಿಯಂತಹ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಜತೆಗೆ ನಾಯಕತ್ವ ಗುಣಗಳನ್ನೂ ಬೆಳೆಸಿಕೊಳ್ಳಬೇಕು ಎಂದು ಸಂಚಾಲಕಿ ಸಿಸ್ಟರ್ ಸುಪ್ರಿಯಾ ಹೇಳಿದರು.

ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ, ಸಂತ ಜೋಸೆಫ್ ಪ್ರೌಢಶಾಲೆ ಆಶ್ರಯದಲ್ಲಿ ಸಂತ ಜೋಸೆಫ್ ಪ್ರೌಢಶಾಲೆಯಲ್ಲಿ ಸೋಮವಾರ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟಿಸಿ ಅವರು ಮಾತನಾಡಿದರು.

ಕುಂದಾಪುರ ಪುರಸಭಾ ಸದಸ್ಯೆ ಶ್ವೇತಾ ಸಂತೋಷ ಮತ್ತು ಕುಂದಾಪುರ ತಾಲೂಕು ಅನುದಾನಿತ ಪ್ರೌಢಶಾಲಾ ಸಂಘದ ಅಧ್ಯಕ್ಷ ಪ್ರದೀಪ್ ಶೆಟ್ಟಿ ಶುಭಾಶಂಸನೆಗೈದರು. ಸಮೂಹ ಸಂಪನ್ಮೂಲ ಸಮನ್ವಯ ಅಧಿಕಾರಿ ಅಶೋಕ್ ನಾಯ್ಕ, ನೋಡಲ್ ಅಧಿಕಾರಿ ಶೇಖರ್ ಪೂಜಾರಿ, ಶಿಕ್ಷಣ ಸಂಯೋಜಕ ರಾಜೇಶ್ ಖಾರ್ವಿ, ಸಂಪನ್ಮೂಲ ವ್ಯಕ್ತಿ ಉಮ್ಮೆ ಸಲ್ಮಾ, ಕುಂದಾಪುರ ರೋಟರಿ ರಿವರ್‌ಸೈಡ್‌ನ ಕಾರ್ಯದರ್ಶಿ ರೋನಾಲ್ಡ್ ಡಿಮೆಲ್ಲೋ, ಜಿಲ್ಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಕಿರಣ್ ಹೆಗ್ಡೆ, ಕುಂದಾಪುರ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾ ಅಧಿಕಾರಿ ಸತ್ಯನಾರಾಯಣ ಎಚ್., ಸಂತ ಜೋಸೆಫರ ಹಿರಿಯ ಪ್ರಾಥಮಿಕ ಶಾಲಾ ಮುಖ್ಯಸ್ಥೆ ಪ್ರೇಮಿಕಾ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಗ್ರೇಸಿ ಡಿಸೋಜ ಉಪಸ್ಥಿತರಿದ್ದರು.
ಐವಿ ಸ್ವಾಗತಿಸಿದರು. ಸಂತೋಷ್ ಕುಮಾರ್ ಶೆಟ್ಟಿ ಪ್ರಸ್ತಾವನೆಗೈದರು. ಶಿಕ್ಷಕಿ ಸರಸ್ವತಿ ವಂದಿಸಿದರು. ಮೈಕಲ್ ಪುಟಾರ್ಡೊ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net