

ಕೋಟ: ಕೋಟತಟ್ಟು ಬಾರಿಕೆರೆಯ ಹತ್ತು ವರ್ಷದ ಬಾಲಕ ಕೃತಿಕ್ ಗಾಣಿಗ ಎಲುಬು ಕ್ಯಾನ್ಸರ್ಗೆ ತುತ್ತಾಗಿದ್ದು,ಚಿಕಿತ್ಸೆಗೆ 25ರಿಂದ 28ಲಕ್ಷ ರೂ.ವೆಚ್ಚ ತಗಲುವ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದಾರೆ.
ಅಶಕ್ತ ಕುಟುಂಬದ ಮಗುವಿನ ನೆರವಿಗೆ ಮಣೂರಿನ ಅಪ್ಪು ಅಟ್ಯಾಕರ್ಸ್ ಸಂಸ್ಥೆ ಗಣೇಶ ಚತುರ್ಥಿಯಂದು ಶ್ರೀ ಆನೆಗುಡ್ಡೆ ದೇವಸ್ಥಾನ ಕುಂಭಾಶಿ, ಕೊಳಲು ಕಲ್ಲು ದೇವಸ್ಥಾನ, ಗುಡ್ಡಟ್ಟುವಿನಾಯಕ ದೇವಸ್ಥಾನ, ಗುರು ನರಸಿಂಹ ದೇವಸ್ಥಾನ ಸಾಲಿಗ್ರಾಮದಲ್ಲಿ ವಿವಿಧ ವೇಷ ಧರಿಸಿ ಜನರನ್ನು ರಂಜಿಸಿ ಹಣ ಸಂಗ್ರಹಿಸಿದ್ದು, ಮಗುವಿನ ಕುಟುಂಬಕ್ಕೆ ನೆರವಿನ ಹಸ್ತ ಚಾಚಿದ್ದಾರೆ. ಸಂಸ್ಥೆ ಸಂಗ್ರಹಿಸಿದ 35,261 ರೂ.ವನ್ನು ಮಣೂರು ಮಹಾಲಿಂಗೇಶ್ವರ ದೇವಸ್ಥಾನ ಅಧ್ಯಕ್ಷ ಸತೀಶ್ ಎಚ್.ಕುಂದರ್ ಸಮ್ಮುಖದಲ್ಲಿ ಕೃತಿಕ್ ಗಾಣಿಗ ಕುಟುಂಬಕ್ಕೆ ಹಸ್ತಾಂತರಿಸಿದರು. ತಂಡದ ಪ್ರಮುಖರು ಉಪಸ್ಥಿತರಿದ್ದರು.