

ಉತ್ತರಪ್ರದೇಶ: ಡ್ರೈವಿಂಗ್ ಲೈಸೆನ್ಸ್ ಕೊಡುವ ಮುನ್ನ ಲರ್ನಿಂಗ್ ಲೈಸೆನ್ಸ್ ಕೊಟ್ಟು, ಅವರು 'ಎಲ್' ಬೋರ್ಡ್ ಹಾಕಿಕೊಂಡು ವಾಹನ ಚಲಾಯಿಸುವುದನ್ನು ಪರೀಕ್ಷೆ ಮಾಡುವುದಿದೆಯಲ್ಲ ಅದೇ ರೀತಿಯ ಪರೀಕ್ಷೆಯೊಂದನ್ನು ಇಲ್ಲಿನ ಶಿಕ್ಷಕರಿಗೆ ಮಾಡಲಾಗುತ್ತದೆ.
ಉತ್ತರಪ್ರದೇಶದಲ್ಲಿ ತರಬೇತಿಯಲ್ಲಿರುವ ಶಿಕ್ಷಕರಿಗೆ ಒಂಥರ ಎಲ್ ಬೋರ್ಡ್ ಇದ್ದಂತೆಯೇ ಇರುತ್ತದೆ. ಅರ್ಥಾತ್ ಅವರು ಉದ್ಯೋಗಕ್ಕೆ ಸೇರುವ ಮುನ್ನ ಲ್ಯಾಬ್ ಸ್ಕೂಲ್ನಲ್ಲಿ ಪಾಠ ಮಾಡಬೇಕಾಗುತ್ತದೆ. ಅವರು ಅಲ್ಲಿ ಬಹುತೇಕ ಪರಿಣತರು ಎಂದು ನಿರ್ಧಾರವಾದ ಬಳಿಕವಷ್ಟೇ ನಿಜವಾದ ತರಗತಿಗೆ ತೆರಳಿ ಪಾಠ ಮಾಡುತ್ತಾರೆ.
ಪ್ರಾಥಮಿಕ ಶಿಕ್ಷಣದಲ್ಲಿ ಡಿಪ್ಲೊಮಾ ಅಂದರೆ D.El.Ed ಕೋರ್ಸ್ ಮಾಡುವ ಅಭ್ಯರ್ಥಿಗಳಿಗೆ ಈ ನಿಯಮ ಅನ್ವಯಿಸಲಾಗಿದೆ. ಅವರನ್ನು ಈ ರೀತಿ ಲ್ಯಾಬ್ ಸ್ಕೂಲ್ನಲ್ಲಿ ಪಾಠ ಮಾಡುವಂತೆ ಮಾಡುವುದರಿಂದ ಅವರು ನೇಮಕವಾದ ಸ್ಥಳದಲ್ಲಿ ಪಾಠ ಮಾಡುವ ಮುನ್ನವೇ ಅಲ್ಲಿನ ಪರಿಸ್ಥಿತಿ ಹೇಗಿರಬಹುದು ಎಂದು ಅಂದಾಜಿಸಲು ಸಾಧ್ಯವಾಗುತ್ತದೆ. ಉತ್ತರಪ್ರದೇಶದಲ್ಲಿ ಇಂಥದ್ದೊಂದು ಪದ್ಧತಿಯನ್ನು ಇದೇ ಮೊದಲ ಸಲ ತರಲಾಗಿದೆ.