ಟೆಲಿಗ್ರಾಮ್​ಗೆ ದಶಕದ ಸಂಭ್ರಮ: ಇವತ್ತಿನಿಂದಲೇ ಹಂತಹಂತವಾಗಿ ಎಲ್ಲ ಬಳಕೆದಾರರಿಗೆ ಹೊಸದೊಂದು ಫೀಚರ್

Telegram F
Published on

ಬೆಂಗಳೂರು: ಮೆಸೇಜಿಂಗ್ ಆ್ಯಪ್​ಗಳ ಪೈಕಿ ಅತ್ಯಾಧುನಿಕ ಹಾಗೂ ಈಗಾಗಲೇ ಹಲವು ಹೊಸ ಹೊಸ ಫೀಚರ್​ಗಳನ್ನು ನೀಡಿರುವ ಟೆಲಿಗ್ರಾಮ್ ಆ್ಯಪ್ ಈಗ ಹತ್ತು ವರ್ಷಗಳ ಸಂಭ್ರಮದಲ್ಲಿದೆ. ಮಾತ್ರವಲ್ಲ, ಇದೇ ಖುಷಿಗೆ ಅಂದು ಇಂದಿನಿಂದಲೇ ಬಳಕೆದಾರರಿಗೆ ಹಂತಹಂತವಾಗಿ ಹೊಸದೊಂದು ಫೀಚರ್ ನೀಡಲು ಮುಂದಾಗಿದೆ.

ಈ ಕುರಿತು ಟೆಲಿಗ್ರಾಮ್ ಸಂಸ್ಥಾಪಕ ಹಾಗೂ ಸಿಇಒ ಪಾವೆಲ್ ದುರೊವ್ ಸಂತಸ ಹಂಚಿಕೊಂಡಿದ್ದು, ಈ ಹತ್ತು ವರ್ಷಗಳಲ್ಲಿ ಬರೀ ಜನರ ಬಾಯ್ಮಾತಿನಲ್ಲೇ ಟೆಲಿಗ್ರಾಂ ಜನಪ್ರಿಯವಾಗಿದ್ದು, 80 ಕೋಟಿಗೂ ಅಧಿಕ ಬಳಕೆದಾರರನ್ನು ಹೊಂದಿದೆ ಎಂದಿದ್ದಾರೆ.

ಅತ್ಯಾಧುನಿಕ ಮೆಸೇಜಿಂಗ್ ಆ್ಯಪ್ ಹೇಗಿರಬೇಕು ಎಂಬುದನ್ನು ಟೆಲಿಗ್ರಾಂ ತೋರಿಸಿದೆ ಎಂದಿರುವ ಮುಂದೆ ಮೆಸೇಜಿಂಗನ್ನೂ ಮೀರಿ ಸೋಷಿಯಲ್ ಮೀಡಿಯಾ ಅನುಭವ ನೀಡುವತ್ತ ಆ್ಯಪ್ ಗಮನಹರಿಸಲಿದೆ ಎಂದಿದ್ದಾರೆ.

ಹತ್ತು ವರ್ಷಗಳ ಖುಷಿಗೆ ಟೆಲಿಗ್ರಾಮ್​ನ ಬಹುನಿರೀಕ್ಷಿತ ಫೀಚರ್ ಆಗಿರುವ ಸ್ಟೇಟಸ್​/ಸ್ಟೋರಿಯನ್ನು ಇಂದಿನಿಂದ ಹಂತಹಂತವಾಗಿ ಎಲ್ಲ ಬಳಕೆದಾರರಿಗೂ ನೀಡಲಾಗುತ್ತದೆ. ಮುಂದಿನ ಹತ್ತು ವರ್ಷಗಳಲ್ಲಿ ಟೆಲಿಗ್ರಾಂ ತನ್ನ ನೈಜ ಸಾಮರ್ಥ್ಯವನ್ನು ಸಾಧಿಸಲಿದೆ ಎಂದಿದ್ದಾರೆ. ಇದುವರೆಗೆ ಟೆಲಿಗ್ರಾಂ ಪ್ರೀಮಿಯಂ ಬಳಕೆದಾರರಿಗಷ್ಟೇ ಸ್ಟೋರಿ/ಸ್ಟೇಟಸ್​ ಆಪ್ಷನ್ ಇತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net