ಮಗನ ಅಗಲಿಕೆ ತಾಳಲಾರದೆ, ಅವನ ದಾರಿಯಲ್ಲೇ ನಡೆದ ತಾಯಿ! ಇದು ಮನ ಕಲಕುವ ಘಟನೆ

woman
Published on

ಬೆಂಗಳೂರು: ಬೆಳೆದ ಮಗ ಆತ್ಮಹತ್ಯೆ ಮಾಡಿಕೊಂಡು ಸಾವಪ್ಪಿದ ನೋವು ತಾಳಲಾರದೆ ತಾಯಿ ಕೂಡ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಬೆಂಗಳೂರಿನ ವಿಜಯನಗರದ ಮಾರೇನಹಳ್ಳಿ ನಿವಾಸಿ ಲೀಲಾವತಿ ಎಂಬುವರು ಮೃತ ದುರ್ದೈವಿ.

ಮಂಗಳವಾರದಂದು ಲೀಲಾವತಿ ಅವರ ಮಗ ಮೋಹನ್ ಗೌಡ(20) ಬೈಕ್ ವಿಚಾರಕ್ಕೆ ಸ್ನೇಹಿತರ ಜೊತೆ ಜಗಳವಾದ ಹಿನ್ನೆಲೆಯಲ್ಲಿ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದ. ಆತನನ್ನು ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆದುಕೊಂಡು ಹೋದರೂ, ಚಿಕಿತ್ಸೆ ಫಲಿಸದೇ ಸಾವಪ್ಪಿದ ಎನ್ನಲಾಗಿದೆ.

ಮಗನ ಸಾವಿನ ಸುದ್ದಿ ತಿಳಿದ ತಾಯಿ ಲೀಲಾವತಿ ನೊಂದುಕೊಂಡು ಆಸ್ಪತ್ರೆಯಿಂದ ಹೊರಬಂದರು. ಆಸ್ಪತ್ರೆ ಮುಂಭಾಗ ಸಂಬಂಧಿಕರ ಎದುರೇ ಚಲಿಸುತ್ತಿದ್ದ ಕಾರಿಗೆ ಅಡ್ಡ ಹೋಗಿ ಆತ್ಮಹತ್ಯೆ ಮಾಡಿಕೊಂಡರು. ಕೂಡಲೇ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ತೀವ್ರ ರಕ್ತಸ್ರಾವದಿಂದ ಅವರು ಸಾವಪ್ಪಿದರು ಎನ್ನಲಾಗಿದೆ.

ಈ ಮುನ್ನ, ಲೀಲಾವತಿ ಅವರ ಸಾವು ಅಪಘಾತವೆಂದು ಭಾವಿಸಲಾಗಿತ್ತು. ಆದರೆ ಇದೀಗ ಅವರು ಮಗನ ಅಗಲಿಕೆಯ ದುಃಖ ತಾಳಲಾರದೆ ತೆಗೆದುಕೊಂಡ ವಿಪರೀತದ ಹೆಜ್ಜೆ ಎಂದು ಸಂಬಂಧಿಕರು ಹೇಳಿದ್ದಾರೆ ಎಂದು ವರದಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net