More

    ‘ತೇಲುವ ಚಿನ್ನ ಖ್ಯಾತಿಯ’ ಅಂಬೇಗ್ರೀಸ್ ಮಾರಾಟಕ್ಕೆ ಯತ್ನ, ನಾಲ್ವರ ಬಂಧನ

    ಬೆಂಗಳೂರು: ತೇಲುವ ಚಿನ್ನ ಖ್ಯಾತಿಯ ನಿಷೇಧಿತ ಅಂಬೇಗ್ರೀಸ್ (ತಿಮಿಂಗಿಲ ವಾಂತಿ) ಮಾರಾಟ ಮಾಡಲು ಯತ್ನಿಸಿದ ನಾಲ್ವರು ಆರೋಪಿಗಳನ್ನು ಎಸ್​ಜೆ ಪಾರ್ಕ್ ಪೊಲೀಸರು ಬಂಧಿಸಿದ್ದಾರೆ.

    ಅಂದಾಜು 20 ಕೋಟಿ ರೂ. ಬೆಲೆ ಬಾಳುವ 20 ಕೆಜಿ ಅಂಬೇಗ್ರೀಸ್ ವಸ್ತುವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮೊದಲು ಇಬ್ಬರು ಆರೋಪಿಗಳನ್ನು ಬಂಧಿಸಿ 2.5 ಕೆಜಿ ತಿಮಿಂಗಿಲ ವಾಂತಿಯನ್ನು ವಶಪಡಿಸಿಕೊಂಡಿದ್ದಾರೆ. ನಂತರ ಹೆಚ್ಚಿನ ತನಿಖೆ ನಡೆಸಿದಾಗ ಮತ್ತಿಬ್ಬರ ಮಾಹಿತಿ ಹೊರಬಿದ್ದಿದ್ದೆ. ಹೊಸಕೋಟೆ ಬಳಿ ಇದ್ದ ಆರೋಪಿಗಳ ಮನೆ ಮೇಲೆ ದಾಳಿ ನಡೆಸಿದ ಪೊಲೀಸರು 17.5 ಕೆಜಿ ಅಂಬೇಗ್ರೀಸ್ ಜಪ್ತಿ ಮಾಡಿದ್ದಾರೆ.

    ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಉಡುಪಿಯ ಮಲ್ಪೆ ಬೀಚ್​​ನಲ್ಲಿ ಆರೋಪಿಗಳಿಗೆ ಈ ವಸ್ತು ಸಿಕ್ಕಿದ್ದು, ಅದನ್ನು ಮಾರಾಟ ಮಾಡಲು ಬೆಂಗಳೂರಿಗೆ ತಂದಿದ್ದರು ಎನ್ನಲಾಗಿದೆ.

    ಏನಿದು ಅಂಬರ್ಗ್ರೀಸ್..?

    ಸ್ಪರ್ಮ್ ವೇಲ್ ಪ್ರಭೇದದ ತಿಮಿಂಗಿಲ ಹೊರಹಾಕುವ ವಾಂತಿಯನ್ನು ಅಂಬೇಗ್ರೀಸ್ ಎಂದು ಕರೆಯಾಗುತ್ತದೆ. ಘನ ಮೇಣದ ರೀತಿಯಲ್ಲಿದ್ದು, ವಾಸನೆಯಿಂದ ಕೂಡಿರಲಿದೆ‌‌. ಸುಗಂಧ ದ್ರವ್ಯ ಹಾಗೂ ಔಷಧಿ ತಯಾರಿಕೆಯಲ್ಲಿ ಇದನ್ನು ಬಳಸಲಾಗುತ್ತದೆ. ಅರಬ್, ಚೀನಾ ಹಾಗೂ ಪಾಶ್ಚಿಮಾತ್ಯ ದೇಶಗಳಲ್ಲಿ ಅಪಾರ ಬೇಡಿಕೆಯಿದೆ.

    ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಕೆ.ಜಿ.ಗೆ ಅಂಬೇಗ್ರೀಸ್ ಸುಮಾರು ಒಂದು ಕೋಟಿ ರೂಪಾಯಿ ಬೆಲೆಯಿದೆ. ಪರ್ಫ್ಯೂಮ್​​​​ಗಾಗಿ ಬಳಕೆಯಾಗುವ ಈ ಅಂಬರ್ಗ್ರೀಸ್ ಭಾರತದಲ್ಲಿ ಮಾರಾಟ ಮಾಡುವುದು ಕಾನೂನು ಪ್ರಕಾರ ಅಪರಾಧ. ಇದನ್ನು ಸಂಶೋಧನೆಗಾಗಿ ಮಾತ್ರ ಬಳಸಬಹುದಾಗಿದೆ.

    ಏರ್​ಲಿಫ್ಟ್ ಮೂಲಕ ಅಫ್ಘಾನ್​​ನಿಂದ ಭಾರತಕ್ಕೆ ಬಂದ ‘ಸ್ನೈಫರ್ ಡಾಗ್ಸ್’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts