ಏರ್​ಲಿಫ್ಟ್ ಮೂಲಕ ಅಫ್ಘಾನ್​​ನಿಂದ ಭಾರತಕ್ಕೆ ಬಂದ 'ಸ್ನೈಫರ್ ಡಾಗ್ಸ್'

pic dog
Published on

ಗಾಜಿಯಾಬಾದ್: ತಾಲಿಬಾನಿಗಳ ಕಪಿಮುಷ್ಠಿಗೆ ಸಿಲುಕಿರುವ ಅಫ್ಘಾನಿಸ್ತಾನದಿಂದ ಇಂದು ಮೂರು ಭಾರತೀಯ ಭದ್ರತಾ ಶ್ವಾನಗಳು ಹಾಗೂ ರಾಯಭಾರಿ ಕಚೇರಿ ಸಿಬ್ಬಂದಿಯನ್ನು ವಿಶೇಷ ವಿಮಾನದ ಮೂಲಕ ಭಾರತಕ್ಕೆ ಕರೆತರಲಾಗಿದೆ.

ಕಾಬೂಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಐಟಿಬಿಪಿ ಯೋಧರ ಜೊತೆಗೆ ಕಾರ್ಯನಿರ್ವಹಿಸುತ್ತಿದ್ದ ಸ್ನೈಫರ್‌ ಶ್ವಾನಗಳಾದ ಮಾಯಾ, ರೂಬಿ ಮತ್ತು ಬಾಬಿಯನ್ನು ಏರ್‌ಲಿಫ್ಟ್‌ ಮಾಡಲಾಗಿದೆ.

30 ರಾಯಭಾರಿ ಕಚೇರಿಯ ಅಧಿಕಾರಿಗಳು, 21 ನಾಗರೀಕರು, 99 ಯೋಧರು ಹಾಗು ಮೂರು ಶ್ವಾನಗಳಿದ್ದ ಭಾರತೀಯ ವಾಯುಸೇನೆಯ (IAF) C-17 ವಿಶೇಷ ವಿಮಾನ ನಿನ್ನೆ ಬೆಳಿಗ್ಗೆ ಗಾಜಿಯಾಬಾದ್‌ನ ಹಿಂಡನ್ ವಾಯುನೆಲೆಗೆ ಬಂದಿಳಿದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net