More

    ಜೆಡಿಎಸ್ ಸಂಘಟನೆಗೆ ಮಹಿಳಾ ಮುಖಂಡರ ಸಭೆ

    ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆ ಹಾಗೂ ಬಿ.ಬಿ.ಎಂ.ಪಿ. ಚುನಾವಣೆಗೆ ಬೆಂಗಳೂರಿನಲ್ಲಿ ಜೆಡಿಎಸ್ ಸಂಘಟನೆ ಮಾಡುವ ನಿಟ್ಟಿನಲ್ಲಿ ಜೆ.ಪಿ. ಭವನದಲ್ಲಿ ನಗರ ಘಟಕದ ಅಧ್ಯಕ್ಷ ಎಚ್.ಎಂ. ರಮೇಶ್ ಗೌಡ ಅಧ್ಯಕ್ಷತೆಯಲ್ಲಿ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ಮಹಿಳಾ ಮುಖಂಡರ ಸಭೆ ನಡೆಯಿತು.

    ಮುಂಬರುವ ಚುನಾವಣೆಗಳ ದೃಷ್ಟಿಯಿಂದ ಪಕ್ಷದ ಸಂಘಟನೆಯನ್ನು ಬೂತ್ ಮಟ್ಟದಲ್ಲಿ ಬಲಪಡಿಸುವ ನಿಟ್ಟಿನಲ್ಲಿ ಈ ಸಭೆಯಲ್ಲಿ ಸಮಾಲೋಚನೆ ನಡೆಸಲಾಯಿತು. ಅಲ್ಲದೆ, ಮಹಿಳಾ ನಾಯಕಿಯರು ಹೆಚ್ಚೆಚ್ಚು ಪ್ರಮಾಣದಲ್ಲಿ ಸಂಘಟನೆಯಲ್ಲಿ ಭಾಗಿಯಾಗುವ ಬಗ್ಗೆ ರಮೇಶ್‌ಗೌಡ ಕೆಲ ಸೂಚನೆಗಳನ್ನು ನೀಡಿದರು.

    ಮಹಿಳೆಯರಿಗೆ ಶಾಸನ ಸಭೆಗಳಲ್ಲಿ ಶೇ.33 ರಷ್ಟು ಮೀಸಲಾತಿ ನೀಡಲು ಕಾರಣಕರ್ತರಾದ ಮಾಜಿ ಪ್ರಧಾನಿ ದೇವೇಗೌಡ ಅವರಿಗೆ ಮಹಿಳಾ ಮುಖಂಡರು ಕೃತಜ್ಞತೆ ಅರ್ಪಿಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ರಮೇಶ್ ಗೌಡ, 27 ವರ್ಷಗಳ ಹಿಂದೆ ದೇವೇಗೌಡರು ಮಹಿಳಾ ಮೀಸಲು ವಿಧೇಯಕವನ್ನು ರಾಜ್ಯಸಭೆಯಲ್ಲಿ ಮಂಡನೆ ಆಗುವಲ್ಲಿ ಯಶಸ್ವಿಯಾದರು. ಆನಂತರ ಲೋಕಸಭೆಯಲ್ಲಿ ಒಪ್ಪಿಗೆ ಸಿಗಲಿಲ್ಲ. ಮಾಜಿ ಪ್ರಧಾನಿಗಳ ಸಂಕಲ್ಪ ಮೋದಿ ಅವರ ಮೂಲಕ ಈಡೇರಿದೆ ಎಂದರು.

    ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಲೀಲಾದೇವಿ ಆರ್. ಪ್ರಸಾದ್, ಬೆಂಗಳೂರು ಮಹಿಳಾ ಘಟಕದ ಅಧ್ಯಕ್ಷೆ ರುತ್ ಮನೋರಮಾ, ತಾ.ಪಂ. ಸದಸ್ಯೆ ನಂದ ಸಿಂಗ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಗಳ ಗ್ರಾಪಂ ಮಾಜಿ ಸದಸ್ಯೆ ತಾರಾ ಲೋಕೇಶ್, ಮಾಜಿ ಕೌನ್ಸಿಲರ್ ರಜನಿ ಮೂರ್ತಿ ಹಾಗೂ ಸೀತಾ ಲಕ್ಷ್ಮಿ, ಕವಿತಾ ರೆಡ್ಡಿ, ಜಯಲಕ್ಷ್ಮಿ, ಪೂರ್ಣಿಮಾ ಗೌಡ, ಶೈಲಾ ಮತ್ತಿತರರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts