ಉಪ್ಪಳ: ತುಳುನಾಡಿನ ಭೂಮಿಪುತ್ರರಾದ ಮೊಗೇರ ಜನಾಂಗದ ದೈವಾರಾಧನೆ ಮತ್ತು ಇನ್ನಿತರ ಆಚರಣೆಗಳಲ್ಲಿ ಪರಂಪರಾಗತ ರೀತಿನೀತಿಗಳನ್ನು ಅನುಸರಿಸುವ ಅನಿವಾರ್ಯತೆ ಇದೆ ಎಂದು ಸಂಶೋಧಕ, ಸಂಸ್ಕೃತಿ ಚಿಂತಕ ವಿಜಯವಿಕ್ರಮ್ ರಾಮಕುಂಜ ಹೇಳಿದರು.
ಕಾಸರಗೋಡು ಜಿಲ್ಲಾ ಮೊಗೇರ ದೈವಾರಾಧಕರ ಒಕ್ಕೂಟದ ಆಶ್ರಯದಲ್ಲಿ, ಉಪ್ಪಳ ಪಚ್ಲಂಪಾರೆ ಬ್ರಹ್ಮಶ್ರೀ ಮೊಗೇರ ಮಹಾಕಾಳಿ ದೈವಸ್ಥಾನ ಪರಿಸರದಲ್ಲಿ ಜರುಗಿದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.
ಹಿರಿಯ ದೈವಪಾತ್ರಿಗಳು ಚಾಲನೆ ನೀಡಿದರು. ಒಕ್ಕೂಟದ ಸದಸ್ಯರಾದ ಹರಿರಾಮ ಕುಳೂರು, ರವಿಚಂದ್ರ ಕನ್ನಟಿಪಾರೆ, ಸುಧಾಕರ ಬೆಳ್ಳಿಗೆ, ಸಮನ್ವಯಕಾರರಾಗಿ ಭಾಗವಹಿಸಿದರು. ಗೌರವಾಧ್ಯಕ್ಷ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಸಮಾರೋಪ ನುಡಿಗಳನ್ನಾಡಿದರು.
ಒಕ್ಕೂಟದ ಅಧ್ಯಕ್ಷ ರಾಮಪ್ಪ ಮಂಜೇಶ್ವರ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಬಾಲಕೃಷ್ಣ ಕೇಪುಳು, ಧರ್ಮದರ್ಶಿ ಬಾಬು ಅನ್ನೆಪಲ್ಲಡ್ಕ, ಕಿಟ್ಟ ಕುಂಜತ್ತೂರು ಮಾತನಾಡಿದರು.
ಆದರ್ಶ ಪಟ್ಟತ್ತಮೊಗರು ಕಾರ್ಯಕ್ರಮ ನಿರೂಪಿಸಿದರು. ಒಕ್ಕೂಟದ ಪ್ರಧಾನ ಸಂಚಾಲಕ ಬಾಬು ಯು.ಪಚ್ಲಂಪಾರೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕೋಶಾಧಿಕಾರಿ ಗೋಪಾಲ ಡಿ.ದರ್ಬೆತ್ತಡ್ಕ ವಂದಿಸಿದರು. ಕಾಸರಗೋಡು ಜಿಲ್ಲೆಯ ವಿವಿಧೆಡೆಗಳಿಂದ ಇನ್ನೂರಕ್ಕೂ ಹೆಚ್ಚು ಮಂದಿ ದೈವಾರಾಧಕರು, ಸಮುದಾಯದವರು ಚರ್ಚೆಯಲ್ಲಿ ಭಾಗವಹಿಸಿದ್ದರು.