ಟ್ರ್ಯಾಕ್ಟರ್​ ಪಲ್ಟಿ; ಮದುವೆ ಮುಗಿಸಿಕೊಂಡು ಬರುತ್ತಿದ್ದ ಮೂವರು ಸ್ಥಳದಲ್ಲೇ ಸಾವು, 10ಕ್ಕೂ ಹೆಚ್ಚು ಜನರಿಗೆ ಗಾಯ

Accident 19 March 20
Published on

ಬಳ್ಳಾರಿ: ಹೂವಿನಹಡಗಲಿ ತಾಲೂಕಿನ ಹೊಳಲು ಪಟ್ಟಣದ ಬಳಿ ಟ್ರ್ಯಾಕ್ಟರ್​ ಪಲ್ಟಿಯಾಗಿ ಭೀಕರ ಅಪಘಾತ ನಡೆದಿದ್ದು ಸ್ಥಳದಲ್ಲೇ ಮೂವರು ಮೃತಪಟ್ಟಿದ್ದಾರೆ.

ಬೀರಬ್ಬಿ ಗ್ರಾಮದ ಮದುವೆಗೆಂದು ಸುಮಾರು 50ಕ್ಕೂ ಹೆಚ್ಚು ಮಂದಿ ಟ್ರ್ಯಾಕ್ಟರ್​ನಲ್ಲಿ ದಾಸರಳ್ಳಿಗೆ ಬರುತ್ತಿದ್ದರು. ಇವರೆಲ್ಲರೂ ದಾಸರಳ್ಳಿ ನಿವಾಸಿಗಳು. ಬೀರಬ್ಬಿ ಗ್ರಾಮದಿಂದ ಮೂರು ಕಿ.ಮೀ.ದೂರ ಸಾಗಿದ ಬಳಿಕ ಹೊಳಲು ಸಮೀಪ ಏಕಾಏಕಿ ಟ್ರ್ಯಾಕ್ಟರ್​ನ ಟೈಯರ್​ನಲ್ಲಿ ಸಮಸ್ಯೆಯಾಗಿ ಪಲ್ಟಿಯಾಗಿದೆ.

ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, 10ಕ್ಕೂ ಹೆಚ್ಚುಮಂದಿ ಗಾಯಗೊಂಡಿದ್ದಾರೆ. ಹಿರೇಹಡಗಲಿ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net