ಅವಳಿ ಮಕ್ಕಳು ಕೋರಿದ ಟಾಕ್ಸಿಕ್​​ ಹೀರೋಹಿನ್​; ಕರೀನಾ ಕಪೂರ್​ ಗುಣಗಳು ಮಗುವಿನಲ್ಲಿರಲಿ ಎಂದ ಕಿಯಾರಾ ಅಡ್ವಾಣಿ | Twins

dk - 2025-03-02T181220.460
Published on

Twins: ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಯಶ್​ ನಟನೆಯ ಟಾಕ್ಸಿಕ್​ ನಟಿ ಕಿಯಾರ ಅಡ್ವಾಣಿ ಮತ್ತು ಸಿದ್ದಾರ್ಥ್​ ಮಲ್ಹೋತ್ರ ಶೀಘ್ರದಲ್ಲಿಯೇ ತಂದೆ-ತಾಯಿಯಾಗಲಿದ್ದೇವೆ ಎಂದು ಇತ್ತೀಚಿಗೆ ಹೇಳಿದ್ದರು. ಈ ಸಂತೋಷದ ಸುದ್ದಿ ಅಭಿಮಾನಿಗಳಲ್ಲಿ ಮತ್ತು ಕುಟುಂಬಸ್ಥರಲ್ಲಿ ಸಂತೋಷವನ್ನು ಮೂಡಿಸಿತು.

ಈ ದಂಪತಿಯ ಸಿಹಿ ಸುದ್ದಿಗೆ ಅಲಿಯಾಭಟ್​, ಕರಣ್​ ಜೋಹರ್​, ಶಿಲ್ಪಾ ಶೆಟ್ಟಿ ಮತ್ತು ಕರೀನಾ ಕಪೂರ್ ಖಾನ್​ ಸೇರಿದಂತೆ ಅನೇಕ ಬಾಲಿವುಡ್​ ನಟರು ಶುಭಾಷಯಗಳನ್ನು ಕೋರಿದರು. ಇದೆಲ್ಲದರ ನಡುವೆ ಕಿಯಾರ ಇತ್ತೀಚಿಗೆ ನೀಡಿದ ಸಂದರ್ಶನವೊಂದರಲ್ಲಿ ''ನನಗೆ ಆರೋಗ್ಯವಂತ ಶಿಶುಗಳು'' ಬೇಕು ಎಂದು ಹೇಳುವ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಅಲ್ಲದೆ, ಈ ಹೇಳಿಕೆಯ ವಿಡಿಯೋ ತುಣುಕೊಂದು ಸಖತ್​ ವೈರಲ್​ ಆಗಿದೆ.

ಕಿಯಾರಾಗೆ ಯಾವ ಅವಳಿಗಳ ಮಕ್ಕಳನ್ನು ಬಯಸುತ್ತೀರಿ ಎಂದು ಸಂದರ್ಶಕಿ ಕೇಳಿದರು ಇದಕ್ಕೆ ಉತ್ತರಿಸಿದ ಕಿಯಾರ, "ದೇವರು ನನಗೆ ಉಡುಗೊರೆಯಾಗಿ ನೀಡಬಹುದಾದ ಎರಡು ಆರೋಗ್ಯವಂತ ಶಿಶುಗಳು ನನಗೆ ಬೇಕು" ಎಂದು ಕಿಯಾರಾ ಉತ್ತರಿಸಿದರು. ಕರೀನಾ ಕಪೂರ್ ಗುಣಗಳು ಇರಲಿ ಎಂದು ತಮಾಷೆಯಾಗಿ ಅವಳನ್ನು(ಕರೀನಾ) ಗೇಲಿ ಮಾಡಿದರು.

ಕರೀನಾನ ಯಾವ ಗುಣಗಳು ಇರಲಿ ಎಂಬ ಪ್ರಶ್ನೆಗೆ, "ಅವಳ ಆತ್ಮವಿಶ್ವಾಸ, ಅವಳ ಅಭಿವ್ಯಕ್ತಿಗಳು ಹಾಗೂ ಅವಳ ಎಲ್ಲಾ ಗುಣಗಳು ಇರಲಿ'' ಎಂದರು.

ಕಿಯಾರಾ, ಕರೀನಾ, ಅಕ್ಷಯ್ ಕುಮಾರ್ ಮತ್ತು ದಿಲ್ಜಿತ್ ದೋಸಾಂಜ್ ತಮ್ಮ "ಗುಡ್ ನ್ಯೂಸ್" ಚಿತ್ರದ ಪ್ರಚಾರದಲ್ಲಿದ್ದಾಗ ಈ ಸಂದರ್ಶನ ನಡೆಯಿತು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net