

ಗುಜರಾತ್: ಹೋಟೆಲ್‌ನಲ್ಲಿ ತಂಗಿದ್ದ ಜೋಡಿ, ಅಲ್ಲಿನ ವಾಸ, ಊಟ ಆನಂದಿಸಿದ ಬಳಿಕ ಬಂದ ಬಿಲ್ ಕಂಡು ಸ್ಥಳದಿಂದ ಕಾಲ್ಕಿತ್ತ ಘಟನೆ ರಾಜಸ್ಥಾನದ ಸಿರೋಹಿ ಜಿಲ್ಲೆಯಲ್ಲಿ ವರದಿಯಾಗಿದೆ (Viral).
ಗುಜರಾತ್ ಮೂಲದ ಪ್ರವಾಸಿಗರು ಎನ್ನಲಾಗಿದ್ದು, ಹಾಲಿಡೇ ಎಂಬ ರೆಸ್ಟೋರೆಂಟ್ನಲ್ಲಿ ಆಹಾರ, ಆತಿಥಿ ಸತ್ಕಾರ ಪಡೆದಿದ್ದಲ್ಲದೇ ರೂಮ್ಗಳಲ್ಲಿ ವಿಶ್ರಾಂತಿ ಪಡೆದು, ಕಡೆಗೆ ಬಿಲ್ ನೋಡ್ತಿದ್ದಂತೆ ಹೋಟೆಲ್ ಮಾಲೀಕನ ಕಣ್ತಪ್ಪಿಸಿ ಪರಾರಿಯಾಗಲು ಯತ್ನಿಸಿದರು. ತಕ್ಷಣವೇ ಎಚ್ಚೆತ್ತುಕೊಂಡ ಮಾಲೀಕ, ದೊಡ್ಡ ಮಂದಿಯಂತೆ ಪೋಸ್ ಕೊಟ್ಟವರನ್ನು ಕಡೆಗೂ ಹಣ ವಸೂಲಿ ಮಾಡದೆ ಬಿಟ್ಟಿಲ್ಲ. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸದ್ಯ ಜಾಲತಾಣಗಳಲ್ಲಿ ಹರಿದಾಡಿದೆ.
10,900 ರೂ. ಬಿಲ್ ಕೊಡದೆ, ಐಷಾರಾಮಿ ಕಾರಿನಲ್ಲಿ ಜೂಟ್ ಹೇಳಿದ ಜೋಡಿಯನ್ನು ಸ್ಥಳೀಯ ಪೊಲೀಸರು ಕಡೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಾಲೀಕನ ಒತ್ತಾಯದಂತೆ ಬಿಲ್ನ ಪೂರ್ತಿ ಹಣವನ್ನು ಪಾವತಿ ಮಾಡಿಸಿಕೊಂಡಿದ್ದಾರೆ. ಈ ಮಧ್ಯೆ, ವೈರಲ್ ವಿಡಿಯೋ ನೋಡಿದ ನೆಟ್ಟಿಗರು, ಚೆನ್ನಾಗಿ ತಿಂದು ಓಡಿ ಹೋದ ಮಂದಿಗೆ ನೊಬೆಲ್ ಪ್ರಶಸ್ತಿಯೇ ಕೊಡಬೇಕು ಎಂದು ಕಮೆಂಟ್ ಮಾಡಿದ್ದರೆ, ಇನ್ನೂ ಕೆಲವರು ಇಂಥವರಿಗೆ ಸರಿಯಾದ ಶಿಕ್ಷೆಯಾಗಬೇಕು ಎಂದಿದ್ದಾರೆ,(ಏಜೆನ್ಸೀಸ್).