ಚಲಿಸುವ ಕಾರಿನ ಮೇಲೆ ಮಲಗಿದ ಮಕ್ಕಳು.. ವಿಡಿಯೋ ವೈರಲ್

car
Published on

Tourist In Goa Drives Xuv With Kids Sleeping On Its Roof

Tourist Goa Drives Kids Sleeping Roof

ಪಣಜಿ: ಚಲಿಸುತ್ತಿದ್ದ ಕಾರಿನ ಛಾವಣಿಯ ಮೇಲೆ ಇಬ್ಬರು ಮಕ್ಕಳು ಮಲಗಿರುವ ವಿಡಿಯೋ ವೈರಲ್ ಆಗಿದೆ. ಜನಪ್ರಿಯ ಪ್ರವಾಸಿ ತಾಣವಾದ ಗೋವಾದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.

ಗೋವಾದ ಮಾಪುಸಾ ಪಟ್ಟಣದ ಬಳಿ ಚಲಿಸುತ್ತಿರುವ ಎಕ್ಸ್ ಯುವಿ ಕಾರಿನ ಮೇಲೆ ಇಬ್ಬರು ಹೆಣ್ಣುಮಕ್ಕಳು ಮಲಗಿದ್ದು, ಕಾರು ವೇಗವಾಗಿ ಚಲಿಸುತ್ತಿದೆ. ಇದು ಸಂಚಾರಿ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ.

ಕಾರಿನ ಮೇಲೆ ಮಕ್ಕಳು ಮಲಗಿದ್ದನ್ನು ಗಮನಿಸಿದ ವ್ಯಕ್ತಿಯೊಬ್ಬರು ಆಘಾತಕ್ಕೊಳಗಾದರು. ಕೂಡಲೇ ತನ್ನ ಫೋನ್‌ನಲ್ಲಿ ವಿಡಿಯೋ ತೆಗೆದು ಕಾರು ಚಾಲಕನನ್ನು ಈ ವಿಚಾರಿಸಿದ್ದಾರೆ. ಮಕ್ಕಳು ಆಯತಪ್ಪಿ ಕೆಳಗೆ ಬೀಳುವುದಿಲ್ಲವೇ ಎಂದು ಪ್ರಶ್ನಿಸಿದ್ದಾನೆ. ಆದರೆ, ಚಾಲಕ ಉತ್ತರಿಸದೆ ತೆರಳಿದ್ದಾನೆ. ಈ ವಿಡಿಯೋವನ್ನು ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ವೈರಲ್ ಆಗಿದೆ.

ಈ ವಿಡಿಯೋ ನೋಡಿದ ನೆಟ್ಟಿಗರು ಚಾಲಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ, ಘಟನೆಯ ಬಗ್ಗೆ ಮಾಪುಸಾ ಪೊಲೀಸರು ಪ್ರತಿಕ್ರಿಯಿಸಿದ್ದಾರೆ. ವಿಡಿಯೋ ಆಧರಿಸಿ ಪ್ರಕರಣ ದಾಖಲಾಗಿದೆ. ಕಾರು ಮತ್ತು ಚಾಲಕನ ಪತ್ತೆಗೆ ಬಲೆ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net