ರೇಣುಕಸ್ವಾಮಿ ಹತ್ಯೆ ಕೇಸ್​​; 'ಡಿ ಗ್ಯಾಂಗ್'​ ವಿರುದ್ಧ ಇರುವ ಸಾಕ್ಷಿಗಳು ಯಾರ್‍ಯಾರು ಗೊತ್ತಾ?

Darshan
Published on

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಪೂರ್ತಿಗೊಳಿಸಿದ್ದು, ನ್ಯಾಯಾಲಯಕ್ಕೆ ಚಾರ್ಜ್​ಶೀಟ್​ ಸಲ್ಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನ್ಯಾಯಾಲಯಕ್ಕೆ 3,991 ಪುಟಗಳ ಚಾರ್ಜ್‌ಶೀಟ್‌ಅನ್ನು 24ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶ ಮಾರುತೇಶ್ ಪರಸುರಾಮ್ ಮೋಹಿತ್ ಅವರಿಗೆ ಪೊಲೀಸರು ಸಲ್ಲಿಸಿದ್ದಾರೆ.

ಈ ಕುರಿತು ಮಾತನಾಡಿರುವ ನಗರ ಪೊಲೀಸ್​ ಆಯುಕ್ತ ಬಿ. ದಯಾನಂದ್​, ರೇಣುಕಸ್ವಾಮಿ ಕೊಲೆ ಪ್ರಕರಣದ ತನಿಖೆ ಸಂಪೂರ್ಣ ಮುಗಿದಿದೆ. 17 ಆರೋಪಿಗಳ ವಿರುದ್ಧ ಚಾರ್ಜ್​ಶೀಟ್ ಸಲ್ಲಿಕೆ ಆಗಿದೆ. 7 ಸಂಪುಟಗಳ, 10 ಕಡತ ಇದೆ. 3991 ಪುಟ ಇದೆ. ಕೊಲೆ ಪ್ರಕರಣದಲ್ಲಿ 17 ಆರೋಪಿಗಳು ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. 3 ಸಾಕ್ಷಿದಾರರು ಇದ್ದಾರೆ. ವೈದ್ಯರು, ಆರ್​ಟಿಒ ಅಧಿಕಾರಿಗಳು, 56 ಪೊಲೀಸ್ ಸಿಬ್ಬಂದಿ ಸಾಕ್ಷಿದಾರರಾಗಿದ್ದಾರೆ.

B Dayananda

ಚಾರ್ಜ್‌ಶೀಟ್‌ನಲ್ಲಿ ಒಟ್ಟಾರೆ 731 ಸಾಕ್ಷಿಗಳ ಉಲ್ಲೇಖ ಮಾಡಲಾಗಿದೆ. 27 ಜನ ಸಾಕ್ಷಿ, ನ್ಯಾಯಾಧೀಶರ ಮುಂದೆ 164, ಪ್ರತ್ಯೇಕ್ಷ ಸಾಕ್ಷಿದಾರರು 03, ಐ ವಿಟ್ನೆಸ್ 03, ಸಿಎಫ್‌ಎಸ್‌ಎಲ್ 08, 59 ಮಂದಿ ಪಂಚರ ಸಾಕ್ಷಿ, ಪೊಲೀಸರು 56, ಸರ್ಕಾರಿ ಅಧಿಕಾರಿಗಳು 8, ಎಫ್‌ಎಸ್‌ಎಲ್, ಸಿಎಫ್‌ಎಸ್‌ಎಲ್ 08, ಪ್ರತ್ಯಕ್ಷ ಸಾಕ್ಷಿಗಳು 03, ಪೊಲೀಸರ ಎದುರು ಸಿಆರ್‌ಪಿಸಿ 161 ಅಡಿ ಹೇಳಿಕೆ ದಾಖಲಿಸಿದ ವ್ಯಕ್ತಿಗಳು 97, ನ್ಯಾಯಾಧೀಶರ ಮುಂದೆ ಸೆಕ್ಷನ್​​ 164ರ ಅಡಿ ಹೇಳಿಕೆಯನ್ನು 27 ಮಂದಿ ದಾಖಲಿಸಿದ್ದಾರೆ ಎಂದು ಎಂದು ನಗರ ಪೊಲೀಸ್​ ಆಯುಕ್ತ ಬಿ. ದಯಾನಂದ್​ ತಿಳಿಸಿದ್ದಾರೆ.

ಚಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಿರುವ ಅಂಶಗಳು

ಚಾರ್ಜ್‌ಶೀಟ್‌ನಲ್ಲಿ ಆರೋಪಿಗಳನ್ನು ಯಥಾಸ್ಥಿತಿಯಲ್ಲಿ ಉಲ್ಲೇಖ ಮಾಡಲಾಗಿದೆ. ಪವಿತ್ರಗೌಡ -ಎ1, ದರ್ಶನ್ ಎ-2, 17 ಜನರ ಮೇಲೆ ಕೊಲೆ ಆರೋಪ, 17 ಜನರು ಮೇಲೂ ಅಪಹರಣ ಮತ್ತು ಕೊಲೆ ಆರೋಪ, ಮೂರು ಆರೋಪಿಗಳ ಮೇಲೆ ಮಾತ್ರ ಸಾಕ್ಷ್ಯ ನಾಶ ಕೇಸ್ ದಾಖಲಿಸಿರುವ ಬಗ್ಗೆ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ಕಾರ್ತಿಕ್ ಅಲಿಯಾಸ್ ಕಪ್ಪೆ, ಕೇಶವಮೂರ್ತಿ, ನಿಖಿಲ್ ನಾಯಕ್ ಈ ಮೂವರ ಮೇಲೆ ಮಾತ್ರ ಸಾಕ್ಷಿ ನಾಶ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net