ರಾವಲ್ಪಿಂಡಿ: ಆತಿಥೇಯ ಪಾಕಿಸ್ತಾನ ವಿರುದ್ಧ ನಡೆದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಬಾಂಗ್ಲಾದೇಶ ತಂಡವು ಪ್ರವಾಸಿ ಬಾಂಗ್ಲಾದೇಶ ತಂಡವು ಕ್ಲೀನ್ ಸ್ವೀಪ್ ಸಾಧಿಸಿದ್ದು, ಎದುರಾಳಿಗಳಿಗೆ ತವರು ನೆಲದಲ್ಲೇ ಭಾರೀ ಮುಖಭಂಗ ಅನುಭವಿಸುವಂತೆ ಮಾಡಿದ್ದಾರೆ. ಈ ಗೆಲುವಿನ ಬೆನ್ನಲ್ಲೇ ಬಾಂಗ್ಲಾದೇಶ ತಂಡದ ಆಟಗಾರ ನೀಡಿರುವ ಹೇಳಿಕೆ ಹೊಸ ಚರ್ಚೆಗೆ ನಾಂದಿ ಹಾಡಿದ್ದು, ವ್ಯಾಪಕವಾಗಿ ಪರ-ವಿರೋಧದ ಮಾತುಕತೆ ನಡೆಯುತ್ತಿದೆ.
ಪಾಕಿಸ್ತಾನ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಬಾಂಗ್ಲಾದೇಶದ ಪರ ಉತ್ತಮ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆಲ್ರೌಂಡರ್ ಮೆಹಿದಿ ಹಸನ್ ಮಿರಾಜ್ ಪ್ರವಾಸಿ ತಂಡದ 10 ವಿಕೆಟ್, 155 ರನ್ ಗಳಿಸುವ ಮೂಲಕ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಮೂಲಕ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಇದನ್ನೂ ಓದಿ: ನಮ್ಮ ದೇಶದ ಕ್ರಿಕೆಟ್ ತಂಡ ಈ ಹಂತಕ್ಕೆ ಬಂದಿರುವುದು ನೋವುಂಟು ಮಾಡಿದೆ; ಪಾಕ್ ಪ್ರದರ್ಶನದ ಕುರಿತು ಕಿಡಿಕಾರಿದ ಮಾಜಿ ನಾಯಕ
ಸರಣಿಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ ಬಳಿಕ ಈ ಕುರಿತು ಮಾತನಾಡಿದ ಮೆಹಿದಿ, ಬಾಂಗ್ಲಾದೇಶದಲ್ಲಿನ ಪ್ರಸ್ತುತ ವಿದ್ಯಮಾನವು ನಿಮ್ಮೆಲ್ಲರಿಗೂ ತಿಳಿದಿದೆ. ನಾನು ಈ ಸರಣಿಶ್ರೇಷ್ಠ ಪ್ರಶಸ್ತಿಯನ್ನು ಹುತಾತ್ಮರಾದ ವಿದ್ಯಾರ್ಥಿ ಪ್ರತಿಭಟನಾಕಾರರಿಗೆ ಅರ್ಪಿಸುತ್ತೇನೆ. ಹಿಂಸಾಚಾರದಲ್ಲಿ ರಿಕ್ಷಾ ಎಳೆಯುವವರೊಬ್ಬರು ಗಾಯಗೊಂಡರು ಮತ್ತು ಅಂತಿಮವಾಗಿ ಅವರು ಮೃತಪಟ್ಟರು. ನಾನು ಈ ಪ್ರಶಸ್ತಿ ಹಾಗೂ ಇದರಿಂದ ಬಂದ ಹಣವನ್ನು ಅವರ ಕುಟುಂಬಕ್ಕೆ ನೀಡಲು ಬಯಸುತ್ತೇನೆ.
ಗಲಭೆ ನಡೆದ ಸಮಯದಲ್ಲಿ ನಾವು ಅಲ್ಲಿದ್ದೆವು ಮತ್ತು ಅದು ತುಂಬಾ ಭಯಾನಕವಾಗಿತ್ತು. ಆದರೆ, ಇದೀಗ ದೇಶವು ಸಹಜ ಸ್ಥಿತಿಗೆ ಮರಳುತ್ತಿರುವುದು ಸಂತಸದ ವಿಚಾರವಾಗಿದ್ದು, ಇದು ನಮಗೆ ಖುಷಿ ವಿಚಾರವಾಗಿದೆ ಎಂದು ಬಾಂಗ್ಲಾದೇಶದ ಆಲ್ರೌಂಡರ್ ಮೆಹಿದಿ ಹಸನ್ ಮಿರಾಜ್ ಪೋಸ್ಟ್ ಮ್ಯಾಚ್ ಪ್ರಸೆಂಟೇಷನ್ನಲ್ಲಿ ಹೇಳಿದ್ದಾರೆ.