ನವದೆಹಲಿ: ಇಂಗ್ಲೆಂಡ್ ತಂಡದ ನೂತನ ಕೋಚ್ ಆಗಿ ನ್ಯೂಜಿಲೆಂಡ್ ತಂಡದ ಮಾಜಿ ನಾಯಕ, ಸ್ಪೋಟಕ ಬ್ಯಾಟ್ಸ್ಮನ್ ಬ್ರೆಂಡನ್ ಮೆಕಲಮ್ ನೇಮಕಗೊಂಡಿದ್ದಾರೆ. ಈ ಹಿಂದೆ ಇಂಗ್ಲೆಂಡ್ ಟೆಸ್ಟ್ ತಂಡದ ಕೋಚ್ ಆಗಿ ನೇಮಕಗೊಂಡಿದ್ದ ಅವರು ಇದೀಗ ಎಲ್ಲಾ ಮಾದರಿಗೂ ತಂಡಕ್ಕೆ ಮರ್ಗದರ್ಶನ ಮಾಡಲಿದ್ದಾರೆ.
2022ರಲ್ಲಿಇಂಗ್ಲೆಂಡ್ ಟೆಸ್ಟ್ ತಂಡ ಮುಖ್ಯ ಕೋಚ್ ಆಗಿ ಬ್ರೆಂಡನ್ ಮೆಕಲಮ್ ನೇಮಕಗೊಂಡಿದ್ದರು. ಕಳೆಗುಂದಿದ್ದ ಟೆಸ್ಟ್ ಕ್ರಿಕೆಟ್‌ಗೆ ಆಕ್ರಮಣಕಾರಿ ಆಟದ ಇಂಜೆಕ್ಷನ್ ಕೊಟ್ಟ ಬ್ರೆಂಡನ್, ಕ್ರಿಕೆಟ್ ಪ್ರಿಯರು ಮತ್ತೆ ಟೆಸ್ಟ್ ಕ್ರಿಕೆಟ್ ಕಡೆಗೆ ಮುಖಮಾಡುವಂತೆ ಮಾಡಿದ್ದರು. ಇದೀಗ ಇಂಗ್ಲೆಂಡ್‌ನ ವೈಟ್‌ಬಾಲ್ ಕ್ರಿಕೆಟ್ ತಂಡಗಳಿಗೂ ಅಂಥದ್ದೇ ಬಲ ತಂದುಕೊಡುವ ನಿಟ್ಟಿನಲ್ಲಿ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಅವರಿಗೆ ಹೆಚ್ಚಿನ ಜವಾಬ್ದಾರಿಯನ್ನು ಹೆಚ್ಚಿಸಿದೆ.
ಇದನ್ನೂ ಓದಿ: ಇನ್ಮುಂದೆ ಚಾಮುಂಡಿ ಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಮೊಬೈಲ್ ಬ್ಯಾನ್; ಪ್ರಾಧಿಕಾರದ ಮೊದಲ ಸಭೆಯಲ್ಲೇ ಕೊಟ್ಟ ಸೂಚನೆಗಳಿವು
ಮುಂಬರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ತಂಡಕ್ಕೆ ಸೂಕ್ತ ಮಾರ್ಗದರ್ಶನ ಸಿಗಬೇಕಾಗಿರುವ ಕಾರಣ ಇಸಿಬಿ ಮೆಕಲಮ್ ಅವರನ್ನು ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಕೋಚ್ ಆಗಿ ನೇಮಿಸಿದ್ದು, ಐಸಿಸಿ ಟೂರ್ನಿಗಳಾದ ಟಿ20 ವಿಶ್ವಕಪ್, ಏಕದಿನ ವಿಶ್ವಕಪ್ಗೂ ಮೆಕಲಮ್ ತಂಡವನ್ನು ಸಜ್ಜುಗೊಳಿಸಬೇಕಿದೆ.
ಈ ಬೆಳವಣಿಗೆಯೊಂದಿಗೆ ಇಸಿಬಿ ತನ್ನ ರಣನೀತಿ ಬದಲಾಯಿಸಿರುವುದು ಸ್ಪಷ್ಟವಾಗಿದೆ. ಈ ಮೊದಲು ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಪ್ರತ್ಯೇಕ ಕ್ಯಾಪ್ಟನ್ ಮತ್ತು ಕೋಚ್ ಆಯ್ಕೆಯ ಪ್ರಯೋಗ ಮಾಡಿ ಮಿಶ್ರ ಫಲ ಕಂಡಿತ್ತು. ಈಗ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಒಬ್ಬ ಕೋಚ್‌ನ ನೇಮಕ ಮಾಡಿ ತಂಡದ ಪ್ರದರ್ಶನ ಮಟ್ಟವನ್ನು ಮೇಲೆತ್ತುವ ಫಾರ್ಮುಲಾ ಹಾಕಿಕೊಂಡಿದೆ. ಬ್ರೆಂಡನ್ ಮೆಕಲಮ್ ಅವರನ್ನು ಎಲ್ಲಾ ಮಾದರಿಯ ಕೋಚ್ ಆಗಿ ನೇಮಕ ಮಾಡಿರುವುದಾಗಿ ಇಸಿಬಿ ಮಂಗಳವಾರ ಘೋಷಣೆ ಮಾಡಿದೆ ಎಂದು ವರದಿ ಮಾಡಿದೆ.