More

    ರಾಮ್​ ಚರಣ್​ ಮುಂದಿನ ಚಿತ್ರಕ್ಕೆ ಸ್ಟಾರ್​ ನಟಿಯ ಪುತ್ರಿ ನಾಯಕಿ!

    ಹೈದರಾಬಾದ್: ‘ಉಪ್ಪೇನ’ ಖ್ಯಾತಿಯ ನಿರ್ದೇಶಕ ಬುಚ್ಚಿಬಾಬು ಸನಾ ನಿರ್ದೇಶನದಲ್ಲಿ ಸೆಟ್ಟೇರಲು ಸಜ್ಜಾಗಿರುವ ಹೊಸ ಚಿತ್ರಕ್ಕೆ ಬಾಲಿವುಡ್​ನ ಸ್ಟಾರ್​ ನಟಿಯ ಮಗಳು ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಇದೀಗ ಟಾಲಿವುಡ್​ ಅಂಗಳದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

    ಇದನ್ನೂ ಓದಿ: ಟೆನಿಕಾಯ್ಟ್- ಕರಾಟೆ ಸ್ಪರ್ಧೆಯಲ್ಲಿ ಎಂ.ಬಿ.ಕಾಲೇಜು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

    ‘ಆರ್​ಆರ್​ಆರ್​’ ಸಿನಿಮಾ ಮೂಲಕ ಭಾರತೀಯ ಚಿತ್ರರಂಗದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದ ನಟ ರಾಮ್ ಚರಣ್​ ಅಭಿನಯಿಸಲಿರುವ ಮುಂದಿನ ಚಿತ್ರಕ್ಕೆ ಇದೀಗ ಬಾಲಿವುಡ್ ಚಿತ್ರರಂಗದ ಹಿರಿಯ ನಟಿ ರವಿನಾ ಟಂಡನ್​ ಅವರ ಪುತ್ರಿ ರಶಾ ಥಡಾನಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಸದ್ಯ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

    ಬಹಳ ಹಿಂದೆಯೇ ಘೋಷಿಸಲಾದ ಈ ಪ್ರಾಜೆಕ್ಟ್​ ಸದ್ಯ ಪೂರ್ವ-ನಿರ್ಮಾಣ ಹಂತದಲ್ಲಿದೆ. ರಾಮ್​ ಚರಣ್​ಗೆ ನಾಯಕಿಯಾಗಿ ರಶಾ ಥಡಾನಿ ಅವರನ್ನು ಆಯ್ಕೆ ಮಾಡುವ ಮುಖೇನ ಟಾಲಿವುಡ್​ ಚಿತ್ರರಂಗಕ್ಕೆ ಕರೆ ತರುವ ಪ್ರಯತ್ನದಲ್ಲಿ ನಿರ್ದೇಶಕ ಬುಚ್ಚಿ ಬಾಬು ಮುಂಚೂಣಿಯಲ್ಲಿದ್ದಾರೆ ಎಂದು ಇತ್ತೀಚಿನ ಸಿನಿ ವರದಿ ತಿಳಿಸಿದೆ,(ಏಜೆನ್ಸೀಸ್).

    ಶಿಕ್ಷಕಿಯರ ರೀಲ್ಸ್​ ಹುಚ್ಚು! Instagram ಫಾಲೋ ಮಾಡಿ, ಲೈಕ್, ಶೇರ್​ ಮಾಡುವಂತೆ ವಿದ್ಯಾರ್ಥಿಗಳಿಗೆ ಒತ್ತಡ

    ರಾಜ್ಯೋತ್ಸವ ರಸಪ್ರಶ್ನೆ - 20

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts