ನಾಳೆ ಮಾಧ್ಯಮ ಕಾರ್ಯಾಗಾರ

Published on

ಕಾಸರಗೋಡು: ಜಿಲ್ಲಾ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಕಚೇರಿ, ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ವಾರ್ತಾ ಇಲಾಖೆ ಜಂಟಿಯಾಗಿ ಡಿ.10ರಂದು ಬೆಳಗ್ಗೆ 10ಕ್ಕೆ ಪರಿಶಿಷ್ಟ ಪಂಗಡದವರಿಗೆ ಮಾಧ್ಯಮ ಕಾರ್ಯಾಗಾರ ಸಿವಿಲ್ ಸ್ಟೇಷನ್‌ನ ವಾರ್ತಾ ಇಲಾಖೆ ಪಿ.ಆರ್ ಚೇಂಬರ್‌ನಲ್ಲಿ ಜರುಗಲಿದೆ.

ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಉದ್ಘಾಟಿಸುವರು. ಕಾಸರಗೋಡು ಪರಿಶಿಷ್ಟ ಪಂಗಡ ಅಭಿವೃದ್ಧಿ ಅಧಿಕಾರಿ ಮೋಹನ್ ದಾಸ್ ಅಧ್ಯಕ್ಷತೆ ವಹಿಸುವರು.

ಪತ್ರಿಕೋದ್ಯಮ, ಮಾಧ್ಯಮ ಕ್ಷೇತ್ರದಲ್ಲಿನ ವೃತ್ತಿ ಸಾಧ್ಯತೆಗಳು ಇತ್ಯಾದಿ ವಿಷಯಗಳ ಕುರಿತು ಪ್ರಮುಖ ಪತ್ರಕರ್ತರು ಮಾಹಿತಿ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net