ಮತ್ತಷ್ಟು ಬಿಕಿನಿ ಫೋಟೋಗಳನ್ನು ಹರಿಬಿಟ್ಟ ಅನಸೂಯ! ಸ್ಟಾರ್​ ನಿರೂಪಕಿಯ ಹಾಟ್​ ಅವತಾರಗಳು ವೈರಲ್​

Anasuya Bharadwaj in bikini Feature
Published on

ಹೈದರಾಬಾದ್​: ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸಿದ ನಟ ಅಲ್ಲು ಅರ್ಜುನ್​ ನಟನೆಯ ‘ಪುಷ್ಪ’ ಚಿತ್ರದಲ್ಲಿ ಗಮನಸೆಳೆದ ಕಲಾವಿದರ ಪೈಕಿ ದಾಕ್ಷಾಯಿಣಿ ಪಾತ್ರ ಮಾಡಿರುವ ಅನಸೂಯ ಭಾರದ್ವಾಜ್ ಸಹ ಒಬ್ಬರು. ಮೂಲತಃ ನಟಿ-ನಿರೂಪಕಿಯಾಗಿರುವ ಅನಸೂಯ ತಮ್ಮ ಗ್ಲಾಮರಸ್​ನಿಂದಲೇ ಟಾಲಿವುಡ್​ನಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗಿದ್ದಾರೆ.

Anasuya Bharadwaj in bikini 7

ಗ್ಲಾಮರ್​ ಮೂಲಕವೇ ಸಾಕಷ್ಟು ಸಿನಿಮಾಗಳಲ್ಲೂ ಅವಕಾಶಗಳನ್ನು ಗಿಟ್ಟಿಸಿಕೊಂಡಿದ್ದಾರೆ. ವಿವಾದಗಳನ್ನು ಹುಟ್ಟುಹಾಕುವುದರಲ್ಲೂ ಅನಸೂಯ ಹಿಂದೆ ಬಿದ್ದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಅನಸೂಯ, ತಮ್ಮ ಬೋಲ್ಡ್​ ಫೋಟೋಗಳನ್ನು ಹರಿಬಿಡುವ ಮೂಲಕ ಪಡ್ಡೆ ಹುಡುಗರ ಮೈ ಬಿಸಿಯೇರಿಸುತ್ತಿರುತ್ತಾರೆ.

Anasuya Bharadwaj in bikini 2

ಇನ್​ಸ್ಟಾಗ್ರಾಂ ಖಾತೆಯಲ್ಲಿ 1.3 ಮಿಲಿಯನ್​ ಫಾಲೋವರ್ಸ್​ ಹಾಗೂ ಫೇಸ್​ಬುಕ್​ನಲ್ಲಿ 5 ಮಿಲಿಯನ್ಸ್​ ಫಾಲೋವರ್ಸ್​ ಹೊಂದಿರುವ ಅನುಸೂಯ ಜಾಲತಾಣದಲ್ಲಿ ಅತ್ಯಂತ್ಯ ಸಕ್ರಿಯರಾಗಿರುವ ಟಾಲಿವುಡ್​ ಕಲಾವಿದೆಯರಲ್ಲಿ ಮುಂಚೂಣಿಯಲ್ಲಿದ್ದಾರೆ. ನಿತ್ಯವೂ ಒಂದಲ್ಲ ಒಂದು ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಕುಟುಂಬದ ಫೋಟೋಗಳು, ವಾಹುವಿಹಾರಕ್ಕೆಂದು ಹೋದಾಗ ತೆಗೆದಂತಹ ಚಿತ್ರಗಳು ಹಾಗೂ ಆಗಾಗ ಫೋಟೋಶೂಟ್​ ಮಾಡಿಸುವ ಅನಸೂಯ ಪ್ರತಿಯೊಂದನ್ನು ತಮ್ಮ ಜಾಲತಾಣದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ.

Anasuya Bharadwaj in bikini 3

ಇತ್ತೀಚೆಗಷ್ಟೆ ಅನಸೂಯ ಅವರು ತಮ್ಮ ಪತಿ ಸುಸಾಂಕ್​ ಭಾರದ್ವಜ್​ ಅವರೊಂದಿಗೆ ಥಾಯ್ಲೆಂಡ್​ ಪ್ರವಾಸಕ್ಕೆ ಹೋಗಿ ಬಂದಿದ್ದಾರೆ. ಥಾಯ್ಲೆಂಡ್​ನ ಕೋಹ ಸಮುಯಿ ದ್ವೀಪದ ಬೀಚ್​ನಲ್ಲಿ ಮಿಂದೆದ್ದಿದ್ದರು. ಈ ವೇಳೆ ಅನಸೂಯ ಅವರು ಬಿಳಿ ಬಣ್ಣದ ಬಿಕಿನಿ ಉಡುಪಿನಲ್ಲಿ ಕ್ಯಾಮೆರಾಗೆ ಪೋಸ್ಟ್​ ನೀಡಿದ್ದು, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಪ್ರವಾಸದ ವೇಳೆ ಕೆಲವೊಂದು ಫೋಟೋಗಳನ್ನು ಅನಸೂಯ ಹರಿಬಿಟ್ಟಿದ್ದರು. ಅವು ಜಾಲತಾಣದಲ್ಲಿ ವೈರಲ್​ ಆಗಿದ್ದವು. ಇದೀಗ ಪ್ರವಾಸದಿಂದ ಮರಳಿ ತವರಿಗೆ ಬಂದಿದ್ದು, ಮತ್ತಷ್ಟು ಹಾಟ್​ ಫೋಟೋಗಳನ್ನು ಹರಿಬಿಟ್ಟಿದ್ದಾರೆ.

Anasuya Bharadwaj in bikini 4

ನಾವು ಜೂನ್ ತಿಂಗಳ ಮಧ್ಯಭಾಗವನ್ನು ತಲುಪುತ್ತಿದ್ದಂತೆ ಫಿಲ್ಟರ್ ಮಾಡದೆ ಸೆರೆಹಿಡಿಯಲಾದ ಕೆಲವು ಕ್ಷಣಗಳನ್ನು ಕಳೆದುಕೊಳ್ಳಲು ನಾನು ಬಯಸುವುದಿಲ್ಲ. ಪ್ರಕೃತಿಯಿಂದ ಮತ್ತು ನನ್ನೊಳಗಿನಿಂದ ಸಂಪೂರ್ಣ ಹೊಳಪಿದೆ. ಈ ವರ್ಷದ ನನ್ನ ಅತ್ಯಂತ ಸ್ಮರಣೀಯ ಪ್ರವಾಸ ಇದಾಗಿದೆ ಎನ್ನುತ್ತಾ ಬಿಕಿನಿ ಫೋಟೋಗಳನ್ನು ಹಂಚಿಕೊಂಡು ಪ್ರವಾಸದ ಬಗ್ಗೆ ಅನಸೂಯ ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾರೆ.

Anasuya Bharadwaj in bikini 5

ಫೋಟೋ ಸೆರೆಹಿಡಿದ ಕ್ರೆಡಿಟ್​ ಅನ್ನು ತಮ್ಮ ಪತಿ ಸುಸಾಂಕ್​ ಭಾರದ್ವಜ್​ ಅವರಿಗೆ ನೀಡಿರುವ ಅನಸೂಯ, ಫೋಟೋ ಸೆರೆಹಿಡಿದಿದ್ದಕ್ಕೆ ತಮ್ಮ ಗಂಡನನ್ನು ತುಂಬಾ ಪ್ರತಿಭಾನ್ವಿತ ವ್ಯಕ್ತಿ ಎಂದು ಹೊಗಳಿದ್ದಾರೆ. ಸದ್ಯ ಅನಸೂಯ ಅವರ ಹಾಟ್​ ಅವತಾರಗಳು ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ಇದಕ್ಕೆ ನೆಟ್ಟಿಗರು ತರಹೇವಾರಿ ಕಾಮೆಂಟ್​ಗಳನ್ನು ಮಾಡುತ್ತಿದ್ದಾರೆ.

Anasuya Bharadwaj in bikini 6

ಸಿನಿಮಾ ವಿಚಾರಕ್ಕೆ ಬಂದರೆ, ಅನಸೂಯ ಅವರು ಪ್ರಸ್ತುತ ಅನೇಕ ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಪುಷ್ಪ-2 ಸಿನಿಮಾದ ಚಿತ್ರೀಕರಣಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ ಮತ್ತು ಕೃಷ್ಣ ವಂಶಿ ನಿರ್ದೇಶನದ ರಂಗ ಮಾರ್ತಾಂಡ ಸಿನಿಮಾದ ಪ್ರಮುಖ ಪಾತ್ರದಲ್ಲಿ ಅನಸೂಯ ನಟಿಸಿದ್ದಾರೆ. (ಏಜೆನ್ಸೀಸ್​)

Anasuya Bharadwaj in bikini 8
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net