More

    ಕಾಂತಾರ ಮತ್ತು ರಿ‍ಷಭ್ ಶೆಟ್ಟಿ ಬಗ್ಗೆ ನಟಿ ಅನಸೂಯ ಭಾರದ್ವಜ್​ ಮಾಡಿದ ಕಾಮೆಂಟ್​ ವೈರಲ್​!

    ಹೈದರಾಬಾದ್​: ಟಾಲಿವುಡ್​ನ ಜನಪ್ರಿಯ ನಟಿ ಮತ್ತು ನಿರೂಪಕಿ ಅನಸೂಯ ಭಾರದ್ವಾಜ್ (Anasuya Bharadwaj) ಅವರು ಕನ್ನಡ ಚಿತ್ರರಂಗದ ಪ್ಯಾನ್​ ಇಂಡಿಯಾ ಸಿನಿಮಾ “ಕಾಂತಾರ” ಹಾಗೂ ನಟ ಹಾಗೂ ನಿರ್ದೇಶಕ “ರಿ‍ಷಭ್ ಶೆಟ್ಟಿ” ಕುರಿತು ಇಂಟೆರೆಸ್ಟಿಂಗ್​ ಕಾಮೆಂಟ್​ ಮಾಡಿದ್ದು, ವೈರಲ್​ ಆಗಿದೆ.

    ನಿಮಗೆಲ್ಲರಿಗೂ ಗೊತ್ತೇ ಇದೆ. ಕಾಂತಾರ (Kantara) ಸಿನಿಮಾ ಸೆಪ್ಟೆಂಬರ್​ ಅಂತ್ಯದಲ್ಲಿ ಕನ್ನಡ ಭಾಷೆಯಲ್ಲಿ ಮಾತ್ರ ಬಿಡುಗಡೆಯಾಗಿತ್ತು. ಆದರೆ, ಅತ್ಯದ್ಭುತ ಪ್ರತಿಕ್ರಿಯೆ ಬಂದ ಬಳಿಕ ಕೇವಲ ಎರಡೇ ವಾರದಲ್ಲಿ ಪ್ಯಾನ್​ ಇಂಡಿಯಾ ಸಿನಿಮಾ ಆಗಿ ಬದಲಾಯಿತು. ಎಲ್ಲ ಭಾಷೆಗಳಲ್ಲೂ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಡಬ್​ ಮಾಡಿ ಬಿಡುಗಡೆ ಮಾಡಲಾಯಿತು. ಇದೀಗ ಎಲ್ಲ ಭಾಷೆಗಳಲ್ಲೂ ಕಾಂತಾರ ಬ್ಲಾಕ್​ಬಸ್ಟರ್​ ಸಿನಿಮಾ ಎನಿಸಿಕೊಂಡಿದೆ. ಕೇವಲ 15 ಕೋಟಿ ರೂ. ಬಜೆಟ್​ನಲ್ಲಿ ಸಿದ್ಧವಾದ ಈ ಸಿನಿಮಾ ಇದೀಗ 400 ಕೋಟಿ ರೂಪಾಯಿ ಗಳಿಕೆ ಮಾಡಿದೆ.

    ಸಿನಿಮಾದಲ್ಲಿ ರಿ‍ಷಭ್ (Rishab Shetty) ಅವರ ಅಮೋಘ ಅಭಿನಯವೇ ಪ್ರಮುಖ ಆಕರ್ಷಣೆ. ಅದರಲ್ಲೂ ಕೊನೆಯ 20 ನಿಮಿಷದ ಕ್ಲೈಮ್ಯಾಕ್ಸ್​ನಲ್ಲಿ ರಿ‍ಷಭ್ ತಮ್ಮ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿರುವ ರೀತಿಯಂತೂ ಸಿನಿಮಾವನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಿದೆ. ಇಡೀ ಚಿತ್ರವನ್ನು ಎಲ್ಲ ಭಾಷಿಗರು ತಮ್ಮದೆಂದು ಅಪ್ಪಿ, ಒಪ್ಪಿಕೊಂಡರು. ಸಿನಿಮಾ ನೋಡಿದ ಬಳಿಕ ಸೂಪರ್​ ಸ್ಟಾರ್​ ರಜಿನಿಕಾಂತ್​ ಸಹ ರಿ‍ಷಭ್​ ನಟನೆ ಫಿದಾ ಆಗಿ, ಅವರಿಗೆ ಕರೆ ಮಾಡಿ ಅಭಿನಂದನೆ ಸಲ್ಲಿಸಿದರು. ಅಲ್ಲದೆ, ಚಿನ್ನದ ಸರವನ್ನು ಉಡುಗೊರೆಯಾಗಿಯು ನೀಡಿದ್ದಾರೆ. ಅಂದಹಾಗೆ ಕಾಂತಾಂರ ಸಿನಿಮಾವನ್ನು ಒಂದು ಕೋಟಿಗೂ ಅಧಿಕ ಮಂದಿ ಚಿತ್ರಮಂದಿರದಲ್ಲಿ ವೀಕ್ಷಣೆ ಮಾಡಿರುವುದು ಹೊಸ ದಾಖಲೆಯಾಗಿದೆ. ಜನರ ಮಾತಿನ ಪ್ರಚಾರವೇ ಕಾಂತಾರದ ಪ್ರಚಂಡ ಯಶಸ್ಸಿಗೆ ಕಾರಣ ಎಂಬುದನ್ನು ಇಲ್ಲಿ ಮರೆಯುವಂತಿಲ್ಲ.

    ಇನ್ನು ಕಾಂತಾರ ಸಿನಿಮಾ ನೋಡಿರುವ ಅನಸೂಯ ಕೂಡ ಸಿನಿಮಾದ ಕತೆ ಮತ್ತು ರಿಷಬ್​ ನಟನೆಗೆ ಮಾರು ಹೋಗಿದ್ದಾರೆ. ಟ್ವೀಟ್​ ಮಾಡಿರುವ ಅನಸೂಯ, ರಿ‍ಷಭ್ ಅವರು ಈ ಸಿನಿಮಾದಲ್ಲಿ ನಂಬಲಾಗದ ರೀತಿಯಲ್ಲಿ ಅಭಿನಯಿಸಿದ್ದಾರೆ. ಸಿನಿಮಾ ನೋಡಿದ ಬಳಿಕ ಅದರ ಗುಂಗಿನಿಂದ ತಕ್ಷಣಕ್ಕೆ ಹೊರಬರಲು ಆಗುತ್ತಿಲ್ಲ. ಹೇಳಬೇಕೆಂದರೆ, ಬಹುತೇಕ ಪ್ರೇಕ್ಷಕರ ಅಭಿಪ್ರಾಯವೂ ಕೂಡ ಇದೇ ಆಗಿರುತ್ತದೆ. ಅದರಲ್ಲೂ ಸಿನಿಮಾದಲ್ಲಿರುವ “ಓ” ಶಬ್ದ ಮಾತ್ರ ಚಿತ್ರಮಂದಿರದಿಂದ ಹೊರಬಂದಾಗಲೂ ಪದೇಪದೆ ಕಾಡುತ್ತಿದೆ. ಆ ಪ್ರಮಾಣದ ಪ್ರಭಾವವನ್ನು ಅದು ಬೀರಿದೆ ಎಂದು ಹೇಳಿದ್ದಾರೆ. ಅನಸೂಯ ಮಾತ್ರವಲ್ಲ ಅನೇಕ ಸೆಲೆಬ್ರಿಟಿಗಳ ಅಭಿಪ್ರಾಯವೂ ಕೂಡ ಇದೇ ಆಗಿದೆ.

    ಸಿನಿಮಾ ವಿಚಾರಕ್ಕೆ ಬಂದರೆ, ಅನಸೂಯ ಅವರು ಪ್ರಸ್ತುತ ಅನೇಕ ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಪುಷ್ಪ-2 ಸಿನಿಮಾದ ಚಿತ್ರೀಕರಣಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ ಮತ್ತು ಕೃಷ್ಣ ವಂಶಿ ನಿರ್ದೇಶನದ ರಂಗ ಮಾರ್ತಾಂಡ ಸಿನಿಮಾದ ಪ್ರಮುಖ ಪಾತ್ರದಲ್ಲಿ ಅನಸೂಯ ನಟಿಸಿದ್ದಾರೆ. ಇದರೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಅನಸೂಯ ಸದಾ ಸಕ್ರಿಯರಾಗಿದ್ದು, ಅಭಿಮಾನಿಗಳ ಜತೆ ನಿರಂತರ ಸಂಪರ್ಕದಲ್ಲಿರುತ್ತಾರೆ. (ಏಜೆನ್ಸೀಸ್​)

    ಅವಳಿ ಸಹೋದರಿಯರನ್ನು ಮದ್ವೆಯಾದ ಬೆನ್ನಲ್ಲೇ ಯುವಕನಿಗೆ ಬಿಗ್​ ಶಾಕ್​! ವೈರಲ್​ ವಿಡಿಯೋದಿಂದ ಎದುರಾಯ್ತು ಸಂಕಷ್ಟ

    ಯುವಕನಿಂದ ಖಾಸಗಿ ಅಂಗಗಳ ಸ್ಪರ್ಶ! ಹಳದಿ ಬಣ್ಣದ ಬಟ್ಟೆಗೆ ಹೆದರುವ ನಟಿ ಐಶ್ವರ್ಯಾರ ನೋವಿನ ಕತೆಯಿದು

    ಬ್ರಿಟಿಷ್ ಚಕ್ರಾಧಿಪತ್ಯಕ್ಕೇ ನಡುಕ ಹುಟ್ಟಿಸಿದ್ದ ಭಾರತೀಯ ನೌಕಾವೀರರ ದಂಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts