More

    ಬ್ರಿಟಿಷ್ ಚಕ್ರಾಧಿಪತ್ಯಕ್ಕೇ ನಡುಕ ಹುಟ್ಟಿಸಿದ್ದ ಭಾರತೀಯ ನೌಕಾವೀರರ ದಂಗೆ

    | ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

    ಬ್ರಿಟಿಷ್ ಚಕ್ರಾಧಿಪತ್ಯಕ್ಕೇ ನಡುಕ ಹುಟ್ಟಿಸಿದ್ದ ಭಾರತೀಯ ನೌಕಾವೀರರ ದಂಗೆಅದು 1946ನೇ ಇಸವಿಯ ಫೆಬ್ರವರಿ 18ನೇ ತಾರೀಖು. ಚಳಿಗಾಲದ ತಣ್ಣಗಿನ ಮುಂಜಾನೆಯಂದು ಬ್ರಿಟಿಷ್ ಸೇನೆಯ ಸ್ವಾಮ್ಯದಲ್ಲಿದ್ದ ರಾಯಲ್ ಇಂಡಿಯನ್ ನೇವಿಯಲ್ಲಿ (Royal Indian Navy mutiny) ಒಂದು ಅನಿರೀಕ್ಷಿತ ದಂಗೆ ಆರಂಭಗೊಂಡಿತ್ತು. ಆ ದಂಗೆ ಬ್ರಿಟಿಷ್ ಚಕ್ರಾಧಿಪತ್ಯಕ್ಕೆ (British government) ನಡುಕ ಹುಟ್ಟಿಸುವಂತಹ ಭಯ ಮೂಡಿಸಿತ್ತು. ಹಲವು ಇತಿಹಾಸಕಾರರು ಬ್ರಿಟಿಷರು ಭಾರತ ಬಿಟ್ಟು ತೊಲಗಲು ಈ ದಂಗೆಯೇ ಪ್ರಮುಖ ಕಾರಣ ಎಂದು ಪರಿಗಣಿಸುತ್ತಾರೆ.

    ಈ ದಂಗೆ ನೌಕಾಪಡೆಯ ರೇಟಿಂಗ್‌ (Ratings) ಗಳ ಕುರಿತಾದ ನ್ಯಾಯ ರಹಿತ ಅನ್ಯಾಯಗಳ ವಿರುದ್ಧವಾಗಿ ಮೂಡಿ ಬಂದಿತ್ತು. (ರೇಟಿಂಗ್ ಎಂದರೆ ನೌಕಾಪಡೆಯ ನಾನ್ ಕಮಿಷನ್ಡ್ ನಾವಿಕರು ಹಾಗೂ ಅಧಿಕಾರಿಗಳು). ಈ ದಂಗೆ ರೇಟಿಂಗ್ಸ್ ತಾವು ಅನುಭವಿಸುತ್ತಿದ್ದ ಕನಿಷ್ಠ ಸಂಬಳ, ಆಹಾರದ ಕೊರತೆ ಹಾಗೂ ಜನಾಂಗೀಯ ತಾರತಮ್ಯಗಳ ವಿರುದ್ಧ ಪ್ರತಿಭಟನೆಯ ರೂಪದಲ್ಲಿ ಆರಂಭಗೊಂಡಿತ್ತು. ಬಳಿಕ ಈ ದಂಗೆ ಅತ್ಯಂತ ಕ್ಷಿಪ್ರಗತಿಯಲ್ಲಿ ಭಾರತದಾದ್ಯಂತ ಪಸರಿಸಿತು.

    ದಂಗೆಯ ಹಿಂದಿನ ಕಾರಣಗಳು
    ಫೆಬ್ರವರಿ 16, 1946ರಂದು ವಿವಿಧ ವಿಭಾಗಗಳಿಗೆ ಸೇರಿದ 67 ರೇಟಿಂಗ್‌ಗಳ ತಂಡ ಫೋರ್ಟ್ ಮುಂಬೈ (Port mumbai) ಯಲ್ಲಿನ ಕ್ಯಾಸಲ್ ಬರಾಕ್ಸ್ ಮಿಂಟ್ ರೋಡ್‌ಗೆ ಆಗಮಿಸಿತು. ಅವರು ಬಾಂಬೆಯ ಥಾಣೆ ಪ್ರದೇಶದಲ್ಲಿದ್ದ ಎಚ್ಎಂಐಎಸ್ ಅಕ್ಬರ್ ನೌಕೆಯಿಂದ ಮೂಲಭೂತ ತರಬೇತಿ ಪಡೆದು, ಸಂಜೆ 4 ಗಂಟೆಯ ಸುಮಾರಿಗೆ ಬಂದಿದ್ದರು. ಅಡುಗೆ ಸಿಬ್ಬಂದಿಗಳಿಗೆ ರೇಟಿಂಗ್‌ಗಳು ಬರುವ ವಿಚಾರ ಅರಿವಿತ್ತು. ಆದರೂ ಅವರಿಗೆ ಸಾಕಷ್ಟು ಊಟದ ಪೂರೈಕೆ ಮಾಡಿರಲಿಲ್ಲ.

    ಆ ರೇಟಿಂಗ್‌ಗಳಿಗೆ ಕಳಪೆ ಗುಣಮಟ್ಟದ ಆಹಾರವನ್ನು ಒದಗಿಸಿದ ಕುರಿತು ಆರೋಪಗಳೂ ಕೇಳಿ ಬಂದವು. ಇನ್ನುಳಿದ ರೇಟಿಂಗ್‌ಗಳು ಸಮುದ್ರ ತೀರಕ್ಕೆ ತಮ್ಮ ಆಹಾರ ಸೇವಿಸಲು ತೆರಳಿದರು. ಇದು ಒಂದು ರೀತಿ ರೇಟಿಂಗ್‌ಗಳು ಕೈಗೊಂಡ ಬಹಿರಂಗ ಪ್ರತಿಭಟನಾ ಕ್ರಮವಾಗಿತ್ತು. ಇಂತಹ ಕೆಟ್ಟ ಉಪಚಾರ ನಡೆಯುತ್ತಿದ್ದರೂ, ಅದರ ಕುರಿತು ಬ್ರಿಟಿಷ್ ಅಧಿಕಾರಿಗಳು ಏನೂ ಮಾತನಾಡದೆ ಮೌನ ತಳೆದದ್ದು ನಾವಿಕರಿಗೆ ಇನ್ನಷ್ಟು ನೋವುಂಟು ಮಾಡಿತ್ತು.

    ಬಾಂಬೆಯಲ್ಲಿ ಆ ಒಂದು ಕ್ಷಣದಲ್ಲಿ ಆರಂಭಗೊಂಡ ಪ್ರತಿಭಟನೆ ಕ್ಷಿಪ್ರವಾಗಿ ಕರಾಚಿಯಿಂದ ಕಲ್ಕತ್ತಾದ ತನಕ ಹಬ್ಬಿತು. ಈ ದಂಗೆಯಲ್ಲಿ ಅಂತಿಮವಾಗಿ 78 ನೌಕೆಗಳು, 20 ತೀರ ಆಧಾರಿತ ಸ್ಥಾಪನೆಗಳು, ಹಾಗೂ 20,000 ನಾವಿಕರು ಭಾಗಿಯಾಗಿದ್ದರು.

    ಈ ದಂಗೆಯ ಸುದ್ದಿ ವೈರ್‌ಲೆಸ್ ಸೆಟ್‌ಗಳ ಮೂಲಕ ರವಾನೆಯಾಗುತ್ತಿತ್ತು. ಮಾಧ್ಯಮಗಳು ಪಸರಿಸಿದ ಅಸಮಾಧಾನ ಅಂತಿಮವಾಗಿ ರಾಷ್ಟ್ರಾದ್ಯಂತ ಇದ್ದ ನಾವಿಕರನ್ನು ದಂಗೆಗೆ ಪ್ರೇರೇಪಿಸಿತು. ಈ ದಂಗೆ ರಾಯಲ್ ಇಂಡಿಯನ್ ನೇವಿ ಶಿಪ್ ಎಚ್ಎಂಐಎಸ್ (ಹಿಂದುಸ್ತಾನ್ ಆಫ್ ದ ಮನೋರ್ಮಾ ಐಲ್ಯಾಂಡ್) ನೌಕೆಯಿಂದ ಆರಂಭಗೊಂಡಿತು.

    ದಂಗೆಕೋರರು ಆ ನೌಕೆ ಹಾಗೂ ತೀರದ ಸ್ಥಾಪನೆಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಬಳಿಕ ದಂಗೆ ಎಚ್ಎಂಐಎಸ್ ಬಹಾದೂರ್‌ಗೆ ಪಸರಿಸಿತು. ಬಳಿಕ ಫೆಬ್ರವರಿ 19, 1946ರಂದು ಸೆಂಟ್ರಲ್ ಸ್ಟ್ರೈಕ್ ಸಮಿತಿಯನ್ನು ಸ್ಥಾಪಿಸಲಾಯಿತು. ಇದರ ನಾಯಕತ್ವವನ್ನು ದಂಗೆಯ ಅಧ್ಯಕ್ಷರಾಗಿ ಎಂ ಎಸ್ ಖಾನ್ ಹಾಗೂ ಉಪಾಧ್ಯಕ್ಷರಾಗಿ ಮದನ್ ಸಿಂಗ್ ಅವರು ವಹಿಸಿಕೊಂಡಿದ್ದರು.

    ಈ ದಂಗೆಯ ಸಂದರ್ಭದಲ್ಲಿ ರೇಟಿಂಗ್‌ಗಳು ತಮ್ಮ ಕಾರ್ಯ ಸ್ಥಳವನ್ನು ಬಿಟ್ಟು, ಲಾರಿಗಳಲ್ಲಿ ಬಾಂಬೆಯಾದ್ಯಂತ ಸಂಚರಿಸತೊಡಗಿದರು. ಆಗ ಅವರು ಕೈಯಲ್ಲಿ ಸುಭಾಷ್ ಚಂದ್ರ ಬೋಸ್ ಅವರ ಚಿತ್ರಗಳಿದ್ದ ಧ್ವಜಗಳನ್ನೂ ಹಿಡಿದುಕೊಂಡಿದ್ದರು.

    ಸುಭಾಷ್ ಚಂದ್ರ ಬೋಸ್ ಅವರ ನೇತೃತ್ವದ ಇಂಡಿಯನ್ ನ್ಯಾಷನಲ್ ಆರ್ಮಿ ಭಾರತದ ಸ್ವಾತಂತ್ರ್ಯಕ್ಕಾಗಿ ನಡೆಸಿದ ರೋಮಾಂಚಕ ಹೋರಾಟದ ಕಥೆಗಳು ಆಗಲೇ ಅತ್ಯಂತ ಜನಪ್ರಿಯವಾಗಿದ್ದವು. ಅದರ ಜೊತೆಗೇ ರಾಯಲ್ ಇಂಡಿಯನ್ ನೇವಿ ಆರಂಭಿಸಿದ ದಂಗೆಯೂ ತಕ್ಷಣವೇ ಜನರ ಮನದಲ್ಲಿ ಕೂತಿತು. ಈ ಪ್ರತಿಭಟನಾ ದಂಗೆಗೆ ಭಾರತದ ಸಾಮಾನ್ಯ ನಾಗರಿಕರೂ ಅಪಾರ ಬೆಂಬಲ ಒದಗಿಸಿದರು. ಇದು ಬ್ರಿಟಿಷ್ ಸರ್ಕಾರಕ್ಕೆ ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿತು.

    ಈ ಪ್ರತಿಭಟನಾ ಸಂದರ್ಭದಲ್ಲಿ ನೌಕಾಪಡೆಯ ಅಧಿಕಾರಿಗಳು ಹಾಗೂ ನಾವಿಕರು ತಮ್ಮನ್ನು ತಾವು ಇಂಡಿಯನ್ ನ್ಯಾಷನಲ್ ನೇವಿ ಎಂದು ಕರೆದುಕೊಂಡರು. ಬ್ರಿಟಿಷ್‌ ಅಧಿಕಾರಿಗಳಿಗೆ ಎಡಗೈಯಲ್ಲಿ ಸೆಲ್ಯೂಟ್ ಸಲ್ಲಿಸಿದರು. ಹಲವು ಕಡೆಗಳಲ್ಲಿ ಬ್ರಿಟಿಷ್ ಇಂಡಿಯನ್ ಆರ್ಮಿಯ ಎನ್‌ಸಿಓಗಳು ಬ್ರಿಟಿಷ್ ಮೇಲಧಿಕಾರಿಗಳ ಆದೇಶಗಳನ್ನು ತಿರಸ್ಕರಿಸಿದರು. ಮದ್ರಾಸ್, ಪೂನಾಗಳಲ್ಲಿ ಬ್ರಿಟಿಷ್ ಅಧಿಕಾರಿಗಳು ಇಂಡಿಯನ್ ಆರ್ಮಿಯಲ್ಲಿ ದಂಗೆಯನ್ನು ಎದುರಿಸಬೇಕಾಯಿತು. ಪ್ರತಿಭಟನಾ ನಿರತ ನೌಕೆಗಳಲ್ಲಿ ಕಾಂಗ್ರೆಸ್, ಸಿಪಿಐ(ಎಂ), ಮುಸ್ಲಿಂ ಲೀಗ್ ಗಳ ಧ್ವಜಗಳನ್ನು ಒಟ್ಟಾಗಿ ಹಾರಿಸಿ, ಪ್ರತಿಭಟನಾ ನಿರತರಲ್ಲಿದ್ದ ಒಗ್ಗಟ್ಟು ಹಾಗೂ ಮತೀಯ ಸಾಮರಸ್ಯವನ್ನು ಪ್ರದರ್ಶಿಸಲಾಯಿತು.

    ದಂಗೆಯ ಪರಿಣಾಮಗಳು
    ಈ ದಂಗೆಯನ್ನು ಬ್ರಿಟಿಷ್ ರಾಯಲ್ ನೇವಿ ಬಲಪ್ರಯೋಗ ಮಾಡಿ ಹೇಗೋ ದಮನಿಸಲು ಸಾಧ್ಯವಾಯಿತು. ಈ ದಂಗೆಯ ಪರಿಣಾಮವಾಗಿ 7 ಜನ ನಾವಿಕರು, ಒಬ್ಬ ಅಧಿಕಾರಿ ಮೃತಪಟ್ಟರು. 33 ಜನ ರಾಯಲ್ ಇಂಡಿಯನ್ ನೇವಿ ಸದಸ್ಯರು ಹಾಗೂ ಬ್ರಿಟಿಷ್ ಅಧಿಕಾರಿಗಳು ಗಾಯಗೊಂಡರು.

    ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ನೇವಲ್ ಸೆಂಟ್ರಲ್ ಕಮಿಟಿ ಅಧ್ಯಕ್ಷರಾದ ಎಂ ಎಸ್ ಖಾನ್ ಅವರ ಜೊತೆ ಮಾತುಕತೆ ನಡೆಸಿದ ಬಳಿಕವೇ ಈ ಸಮಸ್ಯೆ ಸಂಪೂರ್ಣವಾಗಿ ಪರಿಹಾರವಾಯಿತು. ಸರ್ದಾರ್ ಪಟೇಲ್ ಅವರು ಹೇಳಿದಂತೆಯೇ ಮುಸ್ಲಿಂ ಲೀಗ್ ಪರವಾಗಿ ಮಹಮ್ಮದ್ ಅಲಿ ಜಿನ್ನಾ ಸಹ ದಂಗೆಯನ್ನು ಕೈಬಿಡುವಂತೆ ಕರೆ ನೀಡಿದರು.

    ಕಾಂಗ್ರೆಸ್ ಹಾಗೂ ಮುಸ್ಲಿಂ ಲೀಗ್ ಇನ್ನು ಮುಂದೆ ಇಂತಹ ಪರಿಸ್ಥಿತಿ ಬರುವುದಿಲ್ಲ ಎಂದು ಭರವಸೆ ನೀಡಿದರೂ ದೇಶಾದ್ಯಂತ ಹಲವರನ್ನು ಬಂಧಿಸಲಾಯಿತು. ಅವರನ್ನು ಕೋರ್ಟ್ ಮಾರ್ಷಲ್‌ಗೆ ಒಳಪಡಿಸಿ, ದೊಡ್ಡ ಪ್ರಮಾಣದಲ್ಲಿ ಕೆಲಸದಿಂದ ವಜಾಗೊಳಿಸಲಾಯಿತು. ಒಟ್ಟು 476 ಜನ ನಾವಿಕರನ್ನು ರಾಯಲ್ ಇಂಡಿಯನ್ ನೇವಿಯಿಂದ ಈ ದಂಗೆಯ ಕಾರಣದಿಂದ ವಜಾಗೊಳಿಸಲಾಯಿತು.

    ರಾಯಲ್ ಇಂಡಿಯನ್ ನೇವಿಯ ದಂಗೆ ಬ್ರಿಟಿಷ್ ಸಾಮ್ರಾಜ್ಯಕ್ಕೆ ಒಂದು ಬಹುದೊಡ್ಡ ಅಪಾಯವಾಗಿ ಪರಿಣಮಿಸಿತು. ಈ ದಂಗೆಯಿಂದಾಗಿ ಭಾರತದಾದ್ಯಂತ ದೇಶಭಕ್ತಿಯ ಕೂಗು ಪಸರಿಸಿತು. ಬ್ರಿಟಿಷ್ ಪ್ರಧಾನಿ ಕ್ಲೆಮೆಂಟ್ ಆ್ಯಟ್ಲಿಯವರ ಅಧಿಕಾರಾವಧಿಯಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಘೋಷಣೆಯಾಯಿತು. ಅವರು ಒಂದು ಪತ್ರದಲ್ಲಿ ಸುಭಾಷ್ ಚಂದ್ರ ಬೋಸ್ ಅವರ ಇಂಡಿಯನ್ ನ್ಯಾಷನಲ್ ಆರ್ಮಿ ಹಾಗೂ ರಾಯಲ್ ಇಂಡಿಯನ್ ನೇವಿಗಳು ಬ್ರಿಟಿಷರಿಗೆ ಭಾರತದಲ್ಲಿ ನಮ್ಮ ಸಮಯ ಮುಗಿಯಿತು ಎಂಬ ಸಂದೇಶ ನೀಡಿತು ಎಂದು ಬರೆದಿದ್ದರು.

    ಅವಳಿ ಸಹೋದರಿಯರನ್ನು ಮದ್ವೆಯಾದ ಬೆನ್ನಲ್ಲೇ ಯುವಕನಿಗೆ ಬಿಗ್​ ಶಾಕ್​! ವೈರಲ್​ ವಿಡಿಯೋದಿಂದ ಎದುರಾಯ್ತು ಸಂಕಷ್ಟ

    ಯುವಕನಿಂದ ಖಾಸಗಿ ಅಂಗಗಳ ಸ್ಪರ್ಶ! ಹಳದಿ ಬಣ್ಣದ ಬಟ್ಟೆಗೆ ಹೆದರುವ ನಟಿ ಐಶ್ವರ್ಯಾರ ನೋವಿನ ಕತೆಯಿದು

    ಗುಜರಾತ್ ಅಖಾಡದಲ್ಲಿ ಕಂಡಿದ್ದು, ಕೇಳಿದ್ದು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts