ಟಾಲಿವುಡ್​ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಸ್ಟಾರ್​ ನಟರು ಇವರೇ ನೋಡಿ

tollywood actors
Published on

ಆಂಧ್ರಪ್ರದೇಶ: 2024ರ ಮೊದಲ ಹಬ್ಬ ಸಂಕ್ರಾಂತಿ ವಾರದಲ್ಲಿ ಬಿಡುಗಡೆಯಾದ ಭಾರತೀಯ ಸಿನಿಮಾಗಳ ಪೈಕಿ ಅತಿ ಹೆಚ್ಚು ಚಿತ್ರಗಳು ರಿಲೀಸ್ ಆಗಿದ್ದು, ಟಾಲಿವುಡ್ ಅಂಗಳದಿಂದಲೇ. ಸ್ಟಾರ್​ ನಟರ ಹಲವಾರು ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ತೆರೆ ಕಾಣುವ ಮೂಲಕ ಸಿನಿಪ್ರೇಕ್ಷಕರಿಗೆ ಮನರಂಜನೆಯ ರಸದೌತಣವನ್ನೇ ನೀಡಿತು. ಸದ್ಯ ತೆಲುಗು ಚಿತ್ರರಂಗದಲ್ಲಿ ಸ್ಟಾರ್​ ನಟರ ಹಾವಳಿ ಹೆಚ್ಚಿದ್ದು, ಆಯಾ ನಟರಿಗೆ ಅವರದ್ದೇ ಆದ ದೊಡ್ಡ ಅಭಿಮಾನಿ ಬಳಗವಿದೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟರಿಗೆ ಸಂಬಂಧಿಸಿದ ಸಾಕಷ್ಟು ವಿಷಯಗಳನ್ನು ತಿಳಿದುಕೊಳ್ಳುವ ಕುತೂಹಲವನ್ನು ಆಗಾಗ್ಗೆ ವ್ಯಕ್ತಪಡಿಸುತ್ತಾರೆ. ಅದರಲ್ಲೂ ಆಯಾ ನಟರು ಒಂದು ಚಿತ್ರಕ್ಕೆ ಪಡೆಯುವ ಸಂಭಾವನೆ ಎಷ್ಟು ಎಂಬುದರ ಬಗ್ಗೆ ಕೌತುಕ ಹೆಚ್ಚಿರುತ್ತದೆ. ಅದಕ್ಕೆ ಸಂಬಂಧಿಸಿದಂತೆ ಇಲ್ಲೊಂದು ವರದಿ ಇದ್ದು, ಹೀಗಿದೆ ನೋಡಿ ಅದರ ವಿವರ.

ಯಾವ ನಟರು ಎಷ್ಟು ಸಂಭಾವನೆ ಪಡೆಯುತ್ತಾರೆ?

ಪ್ರಭಾಸ್​: ಟಾಲಿವುಡ್​ನ ಡಾರ್ಲಿಂಗ್​ ನಟ ಎಂದೇ ಕರೆಯಲ್ಪಡುವ ಪ್ರಭಾಸ್​ ಒಂದು ಚಿತ್ರಕ್ಕೆ 100ರಿಂದ 200 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ.

ಅಲ್ಲು ಅರ್ಜುನ್​: ಡ್ಯಾನ್ಸಿಂಗ್ ಸ್ಟಾರ್​, ರಾಷ್ಟ್ರಪ್ರಶಸ್ತಿ ವಿಜೇತ ನಟ ಅಲ್ಲು ಅರ್ಜುನ್ ಒಂದು ಚಿತ್ರಕ್ಕೆ 100ರಿಂದ 125 ಕೋಟಿ ರೂ. ಹಣವನ್ನು ಸಂಭಾವನೆಯಾಗಿ ಸ್ವೀಕರಿಸುತ್ತಾರೆ.

ಇದನ್ನೂ ಓದಿ: ವಿಶ್ವ ಸ್ಕೇಟ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದ ಹುಬ್ಬಳ್ಳಿ ಹುಡುಗಿ ತ್ರಿಶಾ ಪ್ರವೀಣ್ ಜಡಲಾಜೂ.ಎನ್​ಟಿಆರ್: 'ಆರ್​ಆರ್​ಆರ್'​ ಖ್ಯಾತಿಯ ನಟ ಜೂ. ಎನ್​ಟಿಆರ್​ ಕೂಡ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದು, ಒಂದು ಸಿನಿಮಾಗೆ ಬರೋಬ್ಬರಿ 100ರಿಂದ 200 ಕೋಟಿ ರೂ. ಪೇಮೆಂಟ್​ ಚಾರ್ಚ್​​ ಮಾಡ್ತಾರೆ.

ಪವನ್ ಕಲ್ಯಾಣ್: ಪ್ರಸ್ತುತ ಆಂಧ್ರಪ್ರದೇಶ ಡಿಸಿಎಂ ಆಗಿ ಕಾರ್ಯನಿರ್ವಹಿಸುತ್ತಿರುವ ನಟ ಪವನ್ ಕಲ್ಯಾಣ್​, ಸದ್ಯ ಚಿತ್ರರಂಗದಿಂದ ಕೊಂಚ ದೂರ ಉಳಿದಿದ್ದಾರೆ. ಒಂದು ಚಿತ್ರಕ್ಕೆ ಪವನ್ 60ರಿಂದ 100 ಕೋಟಿ ರೂ. ಪೇಮೆಂಟ್​ ಸ್ವೀಕರಿಸುತ್ತಾರೆ.

ಮಹೇಶ್​ ಬಾಬು: 'ಗುಂಟೂರು ಕಾರಂ' ನಂತರ ಕೊಂಚ ಬ್ರೇಕ್ ತೆಗೆದುಕೊಂಡಿರುವ ಟಾಲಿವುಡ್​ನ ಪ್ರಿನ್ಸ್​ ಮಹೇಶ್​ ಬಾಬು, ಒಂದು ಸಿನಿಮಾ ಒಪ್ಪಿಕೊಂಡರೆ 80ರಿಂದ 100 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ ಎಂದು ವರದಿಯಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net