

ನವದೆಹಲಿ: ಐಪಿಎಲ್ 18ನೇ ಆವೃತ್ತಿ ಬಗ್ಗೆ ಮಾಹಿತಿ ಹೊರಬೀಳುತ್ತಿದ್ದಂತೆ ಈಗಾಗಲೇ ಹಲವು ವಿಷಯಗಳು ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಲು ಆರಂಭಿಸಿವೆ. ಮುಂಬರುವ ಸೀಸನ್ನಲ್ಲಿ ಮಹತ್ವದ ಬದಲಾವಣೆಗಳು ಆಗಲಿದೆ ಎಂಬ ನಿರೀಕ್ಷೆಗಳೇ ಸದ್ಯ ಜೋರಾಗಿದ್ದು, ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಆಯಾ ಫ್ರಾಂಚೈಸಿಗಳ ಕ್ಯಾಪ್ಟನ್ಗಳು ಸೇರಿದಂತೆ ಸ್ಟಾರ್ ಆಟಗಾರರು ಈಗಿರುವ ತಮ್ಮ ತಂಡ ಬಿಟ್ಟು ಬೇರೆ ತಂಡಗಳಿಗೆ ಸೇರುತ್ತಾರೆ ಎಂಬ ಸುದ್ದಿಗಳು ಐಪಿಎಲ್ ಅಭಿಮಾನಿಗಳಲ್ಲಿ ಭಾರೀ ಗೊಂದಲ ಹುಟ್ಟುಹಾಕಿದೆ. ಇನ್ನು ಇದೇ ಸಮಯವನ್ನು ಸರಿಯಾಗಿ ಉಪಯೋಗಿಸಿಕೊಳ್ಳಲು ಆಕ್ಷನ್ನತ್ತ ಎದುರುನೋಡುತ್ತಿರುವ ಐದು ಬಾರಿ ಚಾಂಪಿಯನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್, ಈ ಮೂವರು ಸ್ಪಿನ್ ಮಾಂತ್ರಿಕರನ್ನು ಖರೀದಿಸಲು ಹದ್ದಿನ ಕಣ್ಣಿಟ್ಟಿದೆ.
ಐಪಿಎಲ್ ಇತಿಹಾಸದಲ್ಲಿಯೇ ಅತ್ಯಂತ ಬಲಿಷ್ಠ ಹಾಗೂ ಚಾಂಪಿಯನ್ಸ್ ತಂಡ ಎಂದೇ ಗುರುತಿಸಿಕೊಂಡಿರುವ ಸಿಎಸ್ಕೆ ಫ್ರಾಂಚೈಸಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ನಂತರದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಎರಡನೇ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸದ್ಯ ಮುಂದಿನ ತಿಂಗಳಲ್ಲಿ ನಡೆಯಲಿರುವ ಐಪಿಎಲ್ 2025ರ ಹರಾಜು ಪ್ರಕ್ರಿಯೆಯಲ್ಲಿ ತಂಡದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರನ್ನು ಉಳಿಸಿಕೊಳ್ಳಲು ಚಿಂತನೆ ನಡೆಸುತ್ತಿರುವ ಫ್ರಾಂಚೈಸಿ, ಟೀಮ್ಗೆ ಸ್ಪಿನ್ನರ್ಗಳಿದ್ದರೆ ಮತ್ತಷ್ಟು ಬಲ ಎಂಬ ನಿರ್ಧಾರವನ್ನು ಮಾಡಿಕೊಂಡಿದೆ.
ಈ ಹಿಂದಿನಿಂದಲೂ ಟಿ20 ಕ್ರಿಕೆಟ್ನಲ್ಲಿ ಸ್ಪಿನ್ನರ್ಗಳ ಕೈಚಳಕ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದೆ. ಹೀಗಾಗಿ ಹಲವು ಫ್ರಾಂಚೈಸಿಗಳು ತಮ್ಮ ತಂಡಕ್ಕೆ ಯಾರನ್ನು ಕರೆದುಕೊಳ್ಳುವುದು ಒಳಿತು ಎಂಬ ಗೊಂದಲದಲ್ಲಿರುತ್ತದೆ. ಇಲ್ಲಿ ತಮ್ಮಿಷ್ಟದ ಬೌಲರ್ನನ್ನು ತಂಡಕ್ಕೆ ಖರೀದಿ ಮಾಡುವುದು ಎಷ್ಟು ಮುಖ್ಯವೋ, ಟೀಮ್ಗೆ ಸೂಕ್ತವಾದ ಬೌಲರ್ ಯಾರೆಂಬುದನ್ನು ಮೊದಲು ಸರಿಯಾಗಿ ನಿರ್ಧರಿಸುವುದು ಅಷ್ಟೇ ಮುಖ್ಯ. ಸದ್ಯ ಹೀಗಿರುವಾಗ ಮೊದಲಿನಿಂದಲೂ ಸ್ಪಿನ್ ಮಾಂತ್ರಿಕರನ್ನೇ ಹೆಚ್ಚು ಟಾರ್ಗೆಟ್ ಮಾಡುವ ಸಿಎಸ್ಕೆ, ಈ ಬಾರಿ ಕಣ್ಣಿಟ್ಟಿರುವ ಆ ಮೂವರು ಬೌಲರ್ಗಳು ಯಾರು ಎಂಬುದು ಈ ಕೆಳಕಂಡಂತಿದೆ ಗಮನಿಸಿ.