

ಕೊಲ್ಹಾಪುರ: ಮಹಾರಾಷ್ಟ್ರ-ಕರ್ನಾಟಕ ಗಡಿಭಾಗದಲ್ಲಿ ಗುರುವಾರ ಸಂಜೆ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಗೆ ಜಿಲ್ಲೆಯ ಕಡೆಯ ಕೀಣೆ ಟೋಲ್ ನಾಕಾ ಸಂಪೂರ್ಣ ಧ್ವಂಸವಾಗಿದೆ. ಟೋಲ್ನಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ಕರೊನಾ ವಾರಿಯರ್ಸ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಳೆ ಗಾಳಿಯ ರಭಸಕ್ಕೆ ಟೋಲ್ ನಾಕಾ, ಶೀಟ್ಗಳು ತಗರೆಲೆಯಂತೆ ಹಾರಿವೆ. ಅಲ್ಲಿದ್ದ ಕಂಪ್ಯೂಟರ್ ಪರಿಕರ ಹಾನಿಯಾದವು. ಪರಿಣಾಮ ತಾಂತ್ರಿಕ ಸಮಸ್ಯೆ ಉಂಟಾಗಿ ಆನ್ಲೈನ್ ಸೇವೆ ಸ್ಥಗಿತಗೊಂಡಿತ್ತು. ಸೇವಾ ಸಿಂಧು ಆನ್ಲೈನ್ ಪಾಸ್ ಹಿಡಿದು ಬಂದವರು ಕೀಣೆ ಟೋಲ್ ಬಳಿ ಕೆಲ ಸಮಯ ಪರದಾಡುವಂತಾಯಿತು.
ಇದನ್ನೂ ಓದಿ ಭೂಗತ ಲೋಕದ ಮಾಜಿ ಡಾನ್ಗೆ ಮರುಜನ್ಮ ನೀಡಿದ ಬಿಡದಿ
ಮಳೆ ಆರ್ಭಟಕ್ಕೆ ಬೆಚ್ಚಿದ ಟೋಲ್ನಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ಕರೊನಾ ವಾರಿಯರ್ಸ್ ಟೆಂಟ್ ಬಿಟ್ಟು ಓಡಿ ಹೋಗಿ ಜೀವ ಉಳಿಸಿಕೊಂಡರು. ಕರ್ನಾಟಕ ಗಡಿ ಭಾಗದಲ್ಲಿರುವ ಮಹಾರಾಷ್ಟ್ರದ ಕಟ್ಟ ಕಡೆಯ ಟೋಲ್ ಇದಾಗಿದ್ದು, ಪಾಸ್ ಹಿಡಿದು ರಾಜ್ಯ ಪ್ರವೇಶಿಸಲು ಬಂದ ಜನರು ಕೆಲ ಗಂಟೆಗಳ ಕಾಲ ಅಲ್ಲೇ ಲಾಕ್ ಆಗಿದ್ದರು. ಗಾಳಿ ಸಹಿತ ಮಳೆ ಸೃಷ್ಟಿಸಿದ ಅವಾಂತರವನ್ನು ಟೋಲ್ ಬಳಿ ಕಾರಿನಲ್ಲಿದ್ದ ಪ್ರಯಾಣಿಕರೊಬ್ಬರು ಮೊಬೈಲ್ನಲ್ಲಿ ಸೆರೆಹಿಡಿದ ವಿಡಿಯೋ ವೈರಲ್ ಆಗಿದೆ.
ಇದನ್ನೂ ನೋಡಿ