

ಟೋಕಿಯೋ: ಕಂಚಿನ ಪದಕಕ್ಕಾಗಿ ಗ್ರೇಟ್ ಬ್ರಿಟನ್ ತಂಡದ ಎದುರು ಇಂದು ನಡೆದ ಪಂದ್ಯದಲ್ಲಿ ಭಾರತದ ಮಹಿಳಾ ಹಾಕಿ ತಂಡ 3-4 ಹಿನ್ನೆಡೆಯೊಂದಿಗೆ ವೀರೋಚಿತ ಸೋಲು ಅನುಭವಿಸಿದೆ.
ಟೋಕಿಯೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ನಲ್ಲಿ ಉತ್ತಮ ಪ್ರದರ್ಶನದೊಂದಿಗೆ ಮುನ್ನುಗ್ತುತ್ತಿದ್ದ ಭಾರತದ ಮಹಿಳಾ ಹಾಕಿ ತಂಡ ಸೆಮಿಫೈನಲ್ ಸುತ್ತಿಗೇರಿ ದಾಖಲೆ ಸೃಷ್ಟಿಸಿತು. ಆದರೆ, ಸೆಮಿಫೈನಲ್ಸ್ನಲ್ಲಿ ಅರ್ಜೆಂಟಿನಾ ತಂಡದ ವಿರುದ್ಧ ಮುಗ್ಗರಿಸಿತು. ನಿನ್ನೆ ನಡೆದ ಪಂದ್ಯದಲ್ಲಿ ರಾಣಿ ರಾಮಪಾಲ್ ನಾಯಕತ್ವದ ತಂಡ 1-2 ಸ್ಕೋರ್ನೊಂದಿಗೆ ಸೋಲನ್ನು ಅನುಭವಿಸಿತು.
ಮತ್ತೊಂದು ಸೆಮಿಫೈನಲ್ಸ್ನಲ್ಲಿ ಸೋತ ಗ್ರೇಟ್ ಬ್ರಿಟನ್ ತಂಡದ ವಿರುದ್ಧ ಇಂದು ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಭಾರತದ ಮಹಿಳಾ ತಂಡ ತೀವ್ರ ಪೈಪೋಟಿ ನೀಡಿತು. ಆರಂಭದಲ್ಲಿ 3-2 ರಿಂದ ಲೀಡ್ ಪಡೆದ ಕೊಂಡಿದ್ದ ಭಾರತ ಕೊನೆಯ ಹಂತದಲ್ಲಿ ಪಂದ್ಯವನ್ನು ಕೈಚೆಲ್ಲಿತು. ಕೊನೆಯಲ್ಲಿ ಬ್ರಿಟನ್ 4-3 ಮುನ್ನೆಡೆಯೊಂದಿಗೆ ಕಂಚಿನ ಪದಕ ಜಯಿಸಿತು. (ಏಜೆನ್ಸೀಸ್)