More

    ಬಿಗ್​ಬಾಸ್​ ಟ್ರೋಫಿ ಗೆಲ್ಲದಿರುವುದೇ ದಿವ್ಯಾ ಉರುಡುಗಗೆ ಅದೃಷ್ಟವಂತೆ: ಫ್ಯಾನ್ಸ್​ ಕೊಟ್ಟ ಅಚ್ಚರಿಯ ಕಾರಣ ಇಲ್ಲಿದೆ..!

    ಬೆಂಗಳೂರು: ಬಿಗ್​​ಬಾಸ್​ ಸೀಸನ್​ 8ರ ಗ್ರ್ಯಾಂಡ್​ ಫಿನಾಲೆಗೆ ವೇದಿಕೆ ಸಜ್ಜಾಗುತ್ತಿದೆ. ಇನ್ನೂ ಮೂರೇ ದಿನಗಳಲ್ಲಿ ಈ ಬಾರಿ ಬಿಗ್​ಬಾಸ್​ ವಿನ್ನರ್​ ಯಾರೆಂಬುದು ಅಧಿಕೃತವಾಗಿ ಬಹಿರಂಗವಾಗಲಿದೆ. ಇದರ ನಡುವೆ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿ ಯಾರಿರಲಿದ್ದಾರೆ ಎಂಬ ಚರ್ಚೆಗಳು ಸಹ ಆರಂಭವಾಗಿದೆ.

    ಫೈನಲ್​ನಲ್ಲಿ ಅರವಿಂದ್​ ಕೆ.ಪಿ., ದಿವ್ಯಾ ಉರುಡುಗ, ವೈಷ್ಣವಿ ಗೌಡ, ಮಂಜು ಪಾವಗಡ ಮತ್ತು ಪ್ರಶಾಂತ್​ ಸಂಬರಗಿ ಇರಲಿದ್ದಾರೆ. ಇದು ಅಧಿಕೃತವೂ ಹೌದು. ಗ್ರ್ಯಾಂಡ್​ ಫಿನಾಲೆ ವೇಳೆ ಕೊನೆಯ ಸುತ್ತಿನ ಎಲಿಮಿನೇಶನ್​ ರೌಂಡ್​ ಸಹ ನಡೆಯಲಿದೆ. ಈ ಬಾರಿಯ ಟ್ರೋಫಿ ಮತ್ತು ನಗದು ಬಹುಮಾನಕ್ಕೆ ಅರವಿಂದ್​ ಮತ್ತು ಮಂಜು ಪಾವಗಡ ನಡುವೆ ತೀವ್ರ ಪೈಪೋಟಿ ನಡೆಯಲಿದೆ ಎಂಬ ಚರ್ಚೆ ಶುರುವಾಗಿದೆ.

    ಇನ್ನೊಂದೆಡೆ ದಿವ್ಯಾ ಉರುಡುಗ ಸಹ ಟ್ರೋಫಿ ಗೆದ್ದರೆ ಅಚ್ಚರಿ ಪಡಬೇಕಾಗಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಏಕೆಂದರೆ ಸಾಮಾಜಿಕ ಜಾಲತಾಣಗಳಲ್ಲಿ ದಿವ್ಯಾ ಉರುಡುಗ ಸಖತ್​ ಟ್ರೆಂಡ್​ ಆಗುತ್ತಿದ್ದಾರೆ. ಹೀಗಾಗಿ ಟ್ರೋಫಿ ಗೆಲ್ಲುವ ಸಾಲಿನಲ್ಲಿ ದಿವ್ಯಾ ಉರುಡುಗ ಸಹ ನಿಂತಿದ್ದಾರೆ. ಆದರೆ, ದಿವ್ಯಾಗೆ ಟ್ರೋಫಿ ಗೆಲ್ಲುವ ಅವಕಾಶ ತೀರಾ ಕಡಿಮೆ ಅಂತಾನೇ ಅಂದಾಜಿಸಬಹುದು.

    ಬಿಗ್​ಬಾಸ್​ ಮನೆಯಲ್ಲಿ ಒಳ್ಳೆಯ ಪ್ರದರ್ಶನ ಮತ್ತು ಸುಲಭವಾಗಿ ಬಿಟ್ಟುಕೊಡದ ಆ್ಯಟಿಟ್ಯೂಡ್​ನಿಂದಾಗಿ ಬಹುದೊಡ್ಡ ಅಭಿಮಾನಿ ಬಳಗ ಹೊಂದಿರುವ ದಿವ್ಯಾ ಉರುಡುಗ ತುಂಬಾ ಖ್ಯಾತಿಯನ್ನು ಪಡೆದುಕೊಂಡಿದ್ದಾರೆ. ದಿವ್ಯಾಗೆ ವೋಟ್​ ಮಾಡುವಂತೆ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಕೊಳ್ಳುತ್ತಿದ್ದಾರೆ.

    ಒಂದು ವೇಳೆ ದಿವ್ಯಾ ಗೆಲ್ಲದಿದ್ದರೂ ಯೋಚನೆ ಮಾಡಬೇಡಿ ಎಂದಿದ್ದಾರೆ. ಏಕೆಂದರೆ, ವೀಕ್ಷಕರು ಕೆಲವು ದಿನಗಳವರೆಗೆ ಮಾತ್ರ ವಿನ್ನರ್​ ಹೆಸರನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತಾರಂತೆ. ಹೊಸ ಶೋ ಆರಂಭವಾದಾಗ ಹಳೆಯ ಸೀಸನ್​ ವಿನ್ನರ್​ ಹೆಸರು ಮರೆತುಬಿಡುತ್ತಾರೆ. ಅಲ್ಲದೆ, ಬಿಗ್​ಬಾಸ್​ ಇತಿಹಾಸ ಹೇಳುವ ಪ್ರಕಾರ ವಿನ್ನಿಂಗ್​ ಸ್ಪರ್ಧಿ ಅವರ ವೃತ್ತಿ ಜೀವನದಲ್ಲಿ ಏಳಿಗೆ ಕಂಡಿಲ್ಲವಂತೆ. ಅರವಿಂದ್​ ಹಿಂದಿಕ್ಕುವುದು ದಿವ್ಯಾಗೆ ತುಂಬಾ ಕಷ್ಟ ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.

    ಆಗಸ್ಟ್​ 8ರ ಭಾನುವಾರ ಬಿಗ್​ಬಾಸ್​ ಸೀಸನ್​ 8ರ ಗ್ರ್ಯಾಂಡ್​ ಫಿನಾಲೆ ನಡೆಯಲಿದೆ. (ಏಜೆನ್ಸೀಸ್​)

    ಕೊನೆಯ ಹಂತದಲ್ಲಿ ತಲೆಕೆಳಗಾಗುತ್ತಾ ಎಲ್ಲರ ಲೆಕ್ಕಾಚಾರ? ದಿವ್ಯಾ ಉರುಡುಗಗೆ ವೈಷ್ಣವಿ ಗೌಡ ಶಾಕ್​..!

    ನೋಡಲಾಗದ ಸಂದೇಶಗಳು! ನಟಿಯರು ಎದುರಿಸೋ ದಿನನಿತ್ಯದ ಸಮಸ್ಯೆ ಬಿಚ್ಚಿಟ್ಟ ಗಾಯಕಿ ಚಿನ್ಮಯಿ

    ಗಂಡನ ಅಕ್ರಮ ಸಂಬಂಧ ಬಿಚ್ಚಿಟ್ಟ ಬೆನ್ನಲ್ಲೇ ಮಾವನ ಕಾಮದ ಮುಖವಾಡ ಕಳಚಿದ ಹನಿ ಸಿಂಗ್​ ಪತ್ನಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts