

ಮೂಡುಬಿದಿರೆ: ಎಂಸಿಎಫ್‌ನ ಸಿಎಸ್‌ಆರ್ ಫಂಡ್‌ನಿಂದ ಬಾಬು ರಾಜೇಂದ್ರ ಪ್ರೌಢಶಾಲೆಯಲ್ಲಿ ನಿರ್ಮಿಸಿರುವ ಹೆಣ್ಣು ಮಕ್ಕಳ ಸುಸಜ್ಜಿತ ಶೌಚಗೃಹವನ್ನು ಎಂಸಿಎಫ್ ಪ್ರಾಜೆಕ್ಟ್ ಜಿ.ಎಂ.ರಾಘವೇಂದ್ರ ಉದ್ಘಾಟಿಸಿದರು.
ಮಾಜಿ ಸಚಿವ, ಆಡಳಿತ ಮಂಡಳಿ ಅಧ್ಯಕ್ಷ ಕೆ.ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿಂದುಳಿದ ವರ್ಗದ ಮಕ್ಕಳನ್ನು ಕಳುಹಿಸಿ, ಕನ್ನಡ ಮಾಧ್ಯಮದ ಉಳಿವಿಗೆ ಸಹಕರಿಸುತ್ತಿರುವ ಪಾಲಕರಿಗೆ ಕೃತಜ್ಞತೆಗಳು. ಮಕ್ಕಳು ಉತ್ತಮವಾಗಿ ಕಲಿತು ಡಿಸ್ಟಿಂಕ್ಷನ್ ಪಡೆಯಬೇಕು. ನಾವು ಸೌಲಭ್ಯ ಒದಗಿಸುತ್ತೇವೆ ಎಂದರು.
ಪುರಸಭಾ ಸದಸ್ಯ ಸುರೇಶ್ ಪ್ರಭು, ಎಂಸಿಎಫ್ ಅಧಿಕಾರಿಗಳಾದ ಡಾ.ಯೋಗೀಶ್, ಅಶೋಕ್ ಪ್ರಭು, ವಿವೇಕ್ ಕೋಟ್ಯಾನ್, ಧರ್ಮವೀರ, ಉದ್ಯಮಿ ಅಬುಲ್ ಆಲಾ, ಮುಖ್ಯಶಿಕ್ಷಕಿ ತೆರೆಸಾ ಉಪಸ್ಥಿತರಿದ್ದರು.
ಶಾಲಾ ಸಂಚಾಲಕ ರಾಮನಾಥ ಭಟ್ ಸ್ವಾಗತಿಸಿದರು. ಶಿಕ್ಷಕ ಕಿರಣ್ ನಿರೂಪಿಸಿದರು.