

ಕಡಬ: ಪರಿಸರ ಸ್ವಚ್ಛತೆಯಿಂದ ಪರಿಸರದ ಜನತೆಯ ಆರೋಗ್ಯವೂ ವೃದ್ಧಿಯಾಗುತ್ತದೆ ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.
ಕಡಬ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಂಆರ್‌ಪಿಎಲ್‌ನ 7 ಲಕ್ಷ ರೂ. ಅನುದಾನದಲ್ಲಿ ನಿರ್ಮಾಣಗೊಂಡ ಶೌಚಗೃಹ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಹೇಶ್ ಅಧ್ಯಕ್ಷತೆ ವಹಿಸಿದ್ದರು. ಎಂಆರ್‌ಪಿಎಲ್ ಸಂಸ್ಥೆ ಪ್ರತಿನಿಧಿ ಪ್ರದೀಪ್‌ಕುಮಾರ್, ಜಿಲ್ಲಾ ಪರಿಷತ್ ಮಾಜಿ ಸದಸ್ಯ ಸೈಯದ್ ಮೀರಾ ಸಾಹೇಬ್, ನಿವೃತ್ತ ಶಿಕ್ಷಕ ಜನಾರ್ದನ ಗೌಡ ಪಣೆಮಜಲು, ಕ್ಲಸ್ಟರ್ ಮುಖ್ಯಸ್ಥ ಗಣೇಶ್ ನಡುವಾಲು, ಕಡಬ ಉಪತಹಸೀಲ್ದಾರ್ ಗೋಪಾಲ್ ಕೆ., ಗ್ರಾಪಂ ಮಾಜಿ ಸದಸ್ಯೆ ಶಾಲಿನಿ ಸತೀಶ್, ಜಿಪಂ ಮಾಜಿ ಸದಸ್ಯ ಪಿ.ಪಿ.ವರ್ಗೀಸ್, ಕೃಷ್ಣ ಶೆಟ್ಟಿ ಕಡಬ, ಪ್ರಮುಖ ಸತೀಶ್ ನಾಯಕ್, ಕಡಬ ಗ್ರಾಪಂ ಮಾಜಿ ಅಧ್ಯಕ್ಷ ಹನೀಫ್ ಕೆ.ಎಂ. ವಿದ್ಯಾರ್ಥಿ ಸಂಘದ ಪೂರ್ವ ಅಧ್ಯಕ್ಷ ದಿನೇಶ್ ಆಚಾರ್, ಗ್ರಾಪಂ ಮಾಜಿ ಸದಸ್ಯೆ ಸರೋಜಿನಿ ಆಚಾರ್ಯ, ಕಳಾರ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಹಂಝ ಕಳಾರ, ಶಿಕ್ಷಕ ಕಿಟ್ಟಣ್ಣ ರೈ, ಎಲ್‌ಕೆಜಿ, ಯುಕೆಜಿ ಸಮಿತಿ ಅಧ್ಯಕ್ಷ ಹಾರೀಸ್ ಕಳಾರ ಮೊದಲಾದವರು ಉಪಸ್ಥಿತರಿದ್ದರು.
ಎಂಆರ್‌ಪಿಎಲ್ ಸಂಸ್ಥೆ ಪ್ರತಿನಿಧಿ, ಇಂಜಿನಿಯರ್ ಪ್ರದೀಪ್‌ಕುಮಾರ್ ಹಾಗೂ ಇಂಜಿನಿಯರ್ ರಕ್ಷಿತ್ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಶಿಕ್ಷಕ ಆನಂದ ಅಜಿಲ ಸ್ವಾಗತಿಸಿದರು. ಹಿರಿಯ ಶಿಕ್ಷಕಿ ಶೋಭಾ ಬಿ. ವಂದಿಸಿದರು. ಶಿಕ್ಷಕಿ ಜಯಶ್ರೀ ಕಾರ್ಯಕ್ರಮ ನಿರೂಪಿಸಿದರು.
ಸ್ವಚ್ಛತೆಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ. ಶಾಲೆಯ ಮೂಲಸೌಕರ್ಯಗಳಿಗೆ ಅನುದಾನ ನೀಡಿದ ಎಂ ಆರ್‌ಪಿಎಲ್ ಸಂಸ್ಥೆ ಶಾಲೆಯ ಅಗತ್ಯತೆಗಳನ್ನು ಪೂರೈಸುವಲ್ಲಿ ಕೈ ಜೋಡಿಸಿದೆ. ಭಾಗೀರಥಿ ಮುರುಳ್ಯ ಶಾಸಕಿ