ಅನುದಿನ ವೈದ್ಯರ ಸ್ಮರಣೆ : ತಾಳಿಪಾಡಿಯಲ್ಲಿ ಬಾಸ್ಕರ ಶೆಟ್ಟಿ ತಾಳಿಗುತ್ತು ಹೇಳಿಕೆ

New Project (26)
Published on

ಕಿನ್ನಿಗೋಳಿ: ದಿನದ ಹೆಚ್ಚಿನ ಸಮಯವನ್ನು ಜನರೊಂದಿಗೆ ಕಳೆದು ಅವರ ಸಮಸ್ಯೆ ಆಲಿಸಿ, ಅದಕ್ಕೆ ಪರಿಹಾರ ನೀಡುವ ವೈದ್ಯರ ಕಾರ್ಯ ಅಭಿನಂದನೀಯ, ವೈದ್ಯರನ್ನು ಸ್ಮರಿಸುವ ಕಾರ್ಯ ಒಂದು ದಿನಕ್ಕೆ ಮಾತ್ರ ಸೀಮಿತವಾಗದೆ ಅದು ನಿರಂತರ ನಡೆಯಬೇಕು ಎಂದು ಬಾಸ್ಕರ ಶೆಟ್ಟಿ ತಾಳಿಗುತ್ತು ಹೇಳಿದರು.

ತಾಳಿಪಾಡಿಗುತ್ತು ಜನಕಲ್ಯಾಣ ಸಮಿತಿ ಉಚಿತ ವೈದ್ಯಕೀಯ ಚಿಕಿತ್ಸಾಲಯ, ಕೆ.ಎಸ್.ಹೆಗ್ಡೆ ಮೆಡಿಕಲ್ ಕಾಲೇಜು ದೇರಳಕಟ್ಟೆ, ಎ.ಬಿ.ಶೆಟ್ಟಿ ಸ್ಮಾರಕ ದಂತ ವಿದ್ಯಾಲಯ ನಿಟ್ಟೆ ಸಹಯೋಗದಲ್ಲಿ ಕೀರ್ತಿ ಶೇಷ ತಾಳಿಪಾಡಿಗುತ್ತು ದಿನೇಶ್ ಭಂಡ್ರಿಯಾಲ್ ಸ್ಮರಣಾರ್ಥ ತಾಳಿಪಾಡಿ ಜಾರಂದಾಯ ದೈವಸ್ಥಾನದ ರಾಜಗೋಪುರದಲ್ಲಿ ನಡೆದ ವೈದ್ಯರ ದಿನಾಚರಣೆಯಲ್ಲಿ ಮಾತನಾಡಿದರು.

ಡಾ.ಅರುಣ್ ಶೆಟ್ಟಿ, ಡಾ.ಮೇಘ, ಡಾ.ರೋಸಿ ಅವರನ್ನು ಸನ್ಮಾನಿಸಲಾಯಿತು. ಸಹಾಯಕರಾದ ಮೋಹಿನಿ, ಪ್ರತಿಭಾ ಸಂದೀಪ್ ಸಹನಾ, ಹರ್ಷ ಮೋಹನ್ ಅವರನ್ನು ಗೌರವಿಸಲಾಯಿತು.

ಕೊರ್ದಬ್ಬು ದೈವಸ್ಥಾನದ ಅಧ್ಯಕ್ಷ ಧನಪಾಲ ಶೆಟ್ಟಿ ತಾಳಿಪಾಡಿಗುತ್ತು, ಜನಕಲ್ಯಾಣ ಸಮಿತಿ ಟ್ರಸ್ಟಿ ಚಿತ್ರಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ದಾಮೋದರ ಶೆಟ್ಟಿ ಸ್ವಾಗತಿಸಿದರು. ಕುಶಲ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಉದಯ ಪೂಂಜ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net