ಇಂದಿನ ಯುವ ಜನಾಂಗ ನಿಷ್ಪ್ರಯೋಜಕರಲ್ಲ

Mul_Youth
Published on

ಮೂಲ್ಕಿ: ಇಂದಿನ ಯುವ ಜನಾಂಗ ನಿಷ್ಪ್ರಯೋಜಕರಲ್ಲ, ಬದಲಾಗಿ ತಮ್ಮನ್ನು ಕಡಿಮೆ ತೊಡಗಿಸಿಕೊಳ್ಳುತ್ತಿದ್ದಾರೆ. ನಂಬಿಕೆ ಇಲ್ಲದವರಲ್ಲ ಬದಲಾಗಿ ತಮ್ಮ ಮೇಲೆ ಕಡಿಮೆ ನಂಬಿಕೆ ಹೊಂದಿದ್ದಾರೆ. ವಿದ್ಯಾರ್ಥಿಗಳು ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಾಗ ಮಾತ್ರ ಅವರ ಸಾಧನೆ ಹೊರಬರಲು ಸಾಧ್ಯ ಎಂದು ಶ್ರೀ ನಾರಾಯಣಗುರು ಶಿಕ್ಷಣ ಸಂಸ್ಥೆ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಉದ್ಯಮಿ ಶರತ್ ಹೇಳಿದರು.

ಶ್ರೀ ನಾರಾಯಣ ಗುರು ಶಿಕ್ಷಣ ಸಂಸ್ಥೆ ಆಶ್ರಯದಲ್ಲಿ ಮೂಲ್ಕಿಯಲ್ಲಿ ಮಕ್ಕಳ ದಿನಾಚರಣೆ, ಕಲಾ ಮತ್ತು ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ಹಳೇ ವಿದ್ಯಾರ್ಥಿನಿ, ಬಿಜಿನೆಸ್ ಎನಾಲಿಸ್ಟ್ ದಿಶಾ ಚಂದ್ರಶೇಖರ್ ಮಾತನಾಡಿ, ಶಾಲೆಗಳಲ್ಲಿ ವಿಜ್ಞಾನ ವಸ್ತು ಪ್ರದರ್ಶನ ನಡೆಸುವುದರಿಂದ ವಿದ್ಯಾರ್ಥಿಗಳಲ್ಲಿ ಪ್ರಾಯೋಗಿಕ, ವಾಸ್ತವ ಜ್ಞಾನ ಬರಲು ಸಾಧ್ಯ. ವಿದ್ಯಾರ್ಥಿಗಳ ಚಿಂತನ ಶಕ್ತಿ, ಹೊಸ ಯೋಚನೆ ಸೃಷ್ಟಿಯಾಗಲು ಸಾಧ್ಯ ಎಂದರು.

ಬಿರುವೆರ್ ಕುಡ್ಲ ಮೂಲ್ಕಿ ಘಟಕ ಅಧ್ಯಕ್ಷ ಕಿಶೋರ್ ಸಾಲಿಯಾನ್ ಮಾತನಾಡಿದರು. ಶಾಲೆ ಸಂಚಾಲಕ ಹರೀಂದ್ರ ಸುವರ್ಣ, ಆಡಳಿತ ಮಂಡಳಿ ಸದಸ್ಯರಾದ ಯೋಗೀಶ್ ಕೋಟ್ಯಾನ್, ಪ್ರಜ್ಞ ಎ.ಕೋಟ್ಯಾನ್, ಆಡಳಿತಾಧಿಕಾರಿ ಮಂಜುಳಾ, ಪ್ರಾಂಶುಪಾಲ ಯತೀಶ್ ಅಮೀನ್, ಮುಖ್ಯಶಿಕ್ಷಕಿ ಗೀತಾ, ವಿದ್ಯಾರ್ಥಿ ನಾಯಕ ಆರ್ಯನ್ ಪ್ರಣೀತ್, ಕಾರ್ತಿಕ್ ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ವೈಷ್ಣವಿ ಕೆ. ಸ್ವಾಗತಿಸಿದರು. ವಿದ್ಯಾರ್ಥಿನಿ ಪ್ರಜ್ಞಾ ರೈ ವಂದಿಸಿದರು. ವಿದ್ಯಾರ್ಥಿಗಳಾದ ಮೋಕ್ಷ, ಪ್ರಜ್ಞೇಶ್ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿನಿ ಪ್ರತಿಕ್ಞಾ ಪಿ.ಕಾಂಚನ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ಲೋಲಾಕ್ಷಿ ಪಿ.ಸಾಲಿಯಾನ್, ದೀಕ್ಷಿತಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net