

ಅನ್ಸರ್ ಇನೋಳಿ ಉಳ್ಳಾಲ
ಆಧುನಿಕತೆಯ ಅಬ್ಬರದ ನಡುವೆ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಜನರು ಆಲೋಪಥಿಯಿಂದ ಆಯುರ್ವೇದದ ಕಡೆ ಮುಖ ವಾಡಿದ್ದಾರೆ. ಈ ಚಿಕಿತ್ಸೆ ದುಬಾರಿಯಾದರೂ ಶಾಶ್ವತ ಪರಿಹಾರ ಸಿಗುವ ಭರವಸೆ. ದುಬಾರಿಯ ನಡುವೆಯೂ ವೆನ್ಲಾಕ್ ಆಯುಷ್ ವಿಭಾಗದಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತಿದ್ದು, ಜನಸಾವಾನ್ಯರ ಪಾಲಿಗೆ ಆಶಾದಾಯಕ ಬೆಳವಣಿಗೆ.
ವೆನ್ಲಾಕ್ ಆಸ್ಪತ್ರೆಯಲ್ಲಿ ಹಿಂದಿನಿಂದಲೂ ಆಯುಷ್‌ಗೆ ಸಂಬಂಧಿಸಿದ ಸಿದ್ಧ ಚಿಕಿತ್ಸೆ ಹೊರತುಪಡಿಸಿ ಉಳಿದ ಚಿಕಿತ್ಸೆಗಳಾದ ಆಯುರ್ವೇದ, ಯೋಗ ಮತ್ತು ನ್ಯಾಚುರೋಪಥಿ, ಯುನಾನಿ, ಹೋಮಿಯೋಪಥಿಯನ್ನು ಉಚಿತವಾಗಿಯೇ ನೀಡುತ್ತಾ ಬರಲಾಗಿದೆ. ಆದರೆ ಈ ವಿಭಾಗ ಆಸ್ಪತ್ರೆಯ ಒಂದು ಮೂಲೆಯಲ್ಲಿ ಸಣ್ಣ ಕೊಠಡಿಯಲ್ಲಿ ಕಾರ್ಯಾಚರಿಸುತ್ತಿದ್ದ ಕಾರಣ ಈ ಬಗ್ಗೆ ಹೆಚ್ಚಿನವರಿಗೆ ವಾಹಿತಿಯೇ ಇರಲಿಲ್ಲ. ಇದ್ದರೂ ಈ ವಿಭಾಗವನ್ನು ಹುಡುಕಿಕೊಂಡು ಹೋಗುವುದೇ ಒಂದು ರೀತಿಯ ಸಾಹಸ ಆಗಿದ್ದರಿಂದ ಜನರಲ್ಲಿ ತಾತ್ಸಾರ ಭಾವನೆ ಮೂಡಿತ್ತು.
ಈ ಹಿನ್ನೆಲೆಯಲ್ಲಿ ಸರ್ಕಾರ ಆಯುಷ್‌ಗೆ ಪ್ರತ್ಯೇಕ ವಿಭಾಗ ಆರಂಭಿಸಲು ಮುಂದಾಗಿ ವೆನ್ಲಾಕ್ ಮಕ್ಕಳ ಆಸ್ಪತ್ರೆಯ ಸನಿಹದಲ್ಲಿ ರಾಷ್ಟ್ರೀಯ ಆಯುಷ್ ಮಿಷನ್ ಯೋಜನೆಯಡಿ ಹೊಸ ಕಟ್ಟಡ ನಿರ್ಮಿಸಿದ್ದು, 2021ರಲ್ಲೇ ಉದ್ಘಾಟನೆಗೊಂಡಿದೆ.
ಇಲ್ಲಿರುವ ಸೌಲಭ್ಯಗಳು: ಮೂರು ಅಂತಸ್ತಿನ ಕಟ್ಟಡ ಇದಾಗಿದ್ದು ಒಳ ಮತ್ತು ಹೊರರೋಗಿಗಳ ವಿಭಾಗ ಹೊಂದಿದೆ. ತಳ ಅಂತಸ್ತಿನಲ್ಲಿ ನೋಂದಣಿ, ಸಹಾಯವಾಣಿ, ಆಯುರ್ವೇದ, ಯೋಗ, ಯುನಾನಿ, ಹೋಮಿಯೋಪಥಿ ಹೊರರೋಗಿ ವಿಭಾಗ, ಹೈಡ್ರೋ ಥೆರಪಿ, ಔಷಧಾಲಯ ಮತ್ತು ಲ್ಯಾಬೊರೇಟರಿ ಇದೆ.
ಮೊದಲ ಅಂತಸ್ತಿನಲ್ಲಿ ವೈದ್ಯಕೀಯ ಅಧೀಕ್ಷಕರ ಕೊಠಡಿ, ಫಿಸಿಯೋಥೆರಪಿ, ಹಿಜಾಮ, ವಿಶೇಷ ಹೊರರೋಗಿ ವಿಭಾಗ, ಯೋಗ ಸಭಾಂಗಣ ಇದೆ. ಎರಡನೇ ಅಂತಸ್ತಿನಲ್ಲಿ ದಾದಿಯರ ವಿಭಾಗ, ಹೆಂಗಸರ ವಾರ್ಡ್, ವಿಶೇಷ ವಿಭಾಗ, ಹೆಂಗಸರಿಗೆ ಪಂಚಕರ್ಮ, ಫಿಸಿಯೋಥೆರಪಿ ವ್ಯವಸ್ಥೆ ಇದೆ.
ಮೂರನೇ ಅಂತಸ್ತಿನಲ್ಲಿ ಅಂತಸ್ತಿನಲ್ಲಿ ದಾದಿಯರ ವಿಭಾಗ, ಗಂಡಸರ ವಾರ್ಡ್, ವಿಶೇಷ ವಿಭಾಗ, ಗಂಡಸರಿಗೆ ಪಂಚಕರ್ಮ, ಶಸಚಿಕಿತ್ಸೆ, ಸೌನ ಬಾತ್, ಸರ್ಕುಲೇಶನ್ ಜೆಟ್ ಬಾತ್ ವಿಭಾಗ ಹಾಗೂ ಫಿಸಿಯೋಥೆರಪಿ ವ್ಯವಸ್ಥೆ ಇದೆ. ಸದ್ಯ 30 ಒಳ ರೋಗಿಗಳ ಚಿಕಿತ್ಸೆಗೆ ಬೇಕಾದ ಎಲ್ಲ ರೀತಿಯ ಸೌಲಭ್ಯಗಳೂ ಇಲ್ಲಿವೆ.
ಸುಸಜ್ಜಿತ ನ್ಯಾಚುರೋಪಥಿ, ಯುನಾನಿ, ತಜ್ಞ ಆಯುರ್ವೇದ ಪಂಚಕರ್ಮ, ಪ್ರತಿ ತಿಂಗಳ ಮೂರನೇ ಶುಕ್ರವಾರ ಕ್ಷಾರಸೂತ್ರ ಶಸಚಿಕಿತ್ಸೆ ವ್ಯವಸ್ಥೆ ಇದೆ. ಅಲ್ಲದೆ ಪೈಲ್ಸ್, ಪಿಸ್ತೂಲ, ಗಂಟುರೋಗ, ಸೊಂಟನೋವು, ಬೆನ್ನುನೋವು, ಮೊಣಕಾಲು ನೋವು ಪುನರ್ಭವ ಚಿಕಿತ್ಸೆ ವ್ಯವಸ್ಥೆಯೂ ಇಲ್ಲಿದೆ. ಒಳರೋಗಿಗಳಿಗೆ ಮಧ್ಯಾಹ್ನ ಸ್ನೇಹಾಲಯ ಸಂಸ್ಥೆಯಿಂದ ಹಾಗೂ ರಾತ್ರಿ ಎಂಫ್ರೆಂಡ್ಸ್ ವತಿಯಿಂದ ಉಚಿತ ಊಟದ ವ್ಯವಸ್ಥೆ ಇದೆ. ಎಂಟು ವಿಶೇಷ ಕೊಠಡಿಗಳಿದ್ದು, ಸರ್ಕಾರ ಇನ್ನೂ ದರ ನಿಗದಿಪಡಿಸಿಲ್ಲ.
ಸದ್ಯದ ಪರಿಸ್ಥಿತಿಯಲ್ಲಿ ಖಾಸಗಿ ಆಸ್ಪತ್ರೆಗಳು, ಕಿರಿಯ ವೈದ್ಯರು, ಫಿಸಿಯೋಥೆರಪಿ ಕಾಲೇಜು, ನರ್ಸಿಂಗ್ ಕಾಲೇಜಿನಿಂದ ಉಚಿತ ಸೇವೆ ಪಡೆಯಲಾಗುತ್ತಿದ್ದರೆ, ಸರ್ಕಾರದ ಇಲಾಖೆಯ ವಿವಿಧ ವಿಭಾಗದ ಸಿಬ್ಬಂದಿಯನ್ನು ಬಳಸಲಾಗುತ್ತಿದೆ. 20 ಥೆರಪಿಸ್ಟ್‌ಗಳ ಅವಶ್ಯಕತೆಯಿದೆ. ಪ್ರಸ್ತುತ ರೋಗಿಗಳ ಸೇವೆಗಾಗಿ ಉಳ್ಳಾಲ ಮತ್ತು ಜಿಲ್ಲಾಸ್ಪತ್ರೆಯ ನಾಲ್ವರು ಥೆರಪಿಸ್ಟ್‌ಗಳನ್ನು ಬಳಸಿಕೊಳ್ಳಲಾಗುತ್ತಿದೆ. ಆಹಾರ ತಯಾರಕರ ನೇಮಕ ಆದರೆ ಮುಂದಿನ ದಿನಗಳಲ್ಲಿ ಪಥ್ಯಹಾರ ವಿಭಾಗ ಆರಂಭಿಸುವ ಯೋಜನೆಯೂ ಇದೆ. ಇಲ್ಲಿರುವ ಸೌಲಭ್ಯಗಳು, ಚಿಕಿತ್ಸೆಯ ಅನುಭವ ಫಲಾನುಭವಿಗಳಿಗಷ್ಟೇ ಗೊತ್ತು.
ಸಿಬ್ಬಂದಿ ಕೊರತೆ
ಆಸ್ಪತ್ರೆಯಲ್ಲಿ ಅನುಭವಿ ವೈದ್ಯರ ತಂಡ ಇರುವುದರಿಂದ ಚಿಕಿತ್ಸೆಗಾಗಿ ಪ್ರತಿದಿನ 150ರಿಂದ 200ರಷ್ಟು ಹೊರರೋಗಿಗಳು ಬರುತ್ತಾರೆ. ಇಎನ್‌ಟಿ, ಸೀ ರೋಗ ತಜ್ಞರೂ ಇಲ್ಲಿದ್ದಾರೆ. ಸಿಬ್ಬಂದಿ ಕೊರತೆ ನಡುವೆಯೂ ಉತ್ತಮ ಸೇವೆ ನೀಡಲಾಗುತ್ತಿದೆ. ಥೆರಪಿಸ್ಟ್, ಪ್ಯಾರಮೆಡಿಕಲ್ ಸಿಬ್ಬಂದಿ ನೇಮಕ ಆಗಬೇಕಿದೆ. ಇದಾದಲ್ಲಿ ಒಳರೋಗಿಗಳ ವಿಭಾಗವನ್ನು 30ರ ಬದಲು 75ಕ್ಕೆ ವಿಸ್ತರಿಸುವ ಅವಕಾಶ ಇದೆ.
ಜನರ ಆರೋಗ್ಯ ಕಾಪಾಡುವ ದಷ್ಟಿಯಿಂದ ವೆನ್ಲಾಕ್ ಆಯುಷ್ ವಿಭಾಗದಲ್ಲಿರುವ ಸಮಸ್ಯೆಗಳ ಬಗ್ಗೆ ರಾಜ್ಯ ಮತ್ತು ಕೇಂದ್ರ ಸಚಿವರಿಗೆ ಮನವಿ ಸಲ್ಲಿಸುವ ಮೂಲಕ ಆಸ್ಪತ್ರೆ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ ನೀಡುತ್ತೇನೆ. ಈಗಾಗಲೇ ಸ್ಮಾರ್ಟ್ ಸಿಟಿ ಯೋಜನೆಯಡಿ 60 ಕೋಟಿ ರೂ. ಅನುದಾನದಲ್ಲಿ ವೆನ್ಲಾಕ್ ಆಸ್ಪತ್ರೆಗೆ ಹೊಸ ಕಟ್ಟಡ, 8 ಕೋಟಿ ರೂ. ಅನುದಾನದಲ್ಲಿ ಅಗತ್ಯ ವ್ಯವಸ್ಥೆಗಳನ್ನು ನಮ್ಮ ಸರ್ಕಾರ ಇರುವಾಗ ವಾಡಲಾಗಿತ್ತು. ಪ್ರಧಾನಿಯವರು ಮತ್ತೆ 24 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿದ್ದು, ಶ್ರೀ ಕಾಮಗಾರಿ ಆರಂಭಿಸಲಾಗುವುದು. - ವೇದವ್ಯಾಸ ಕಾಮತ್, ಶಾಸಕರು, ಮಂಗಳೂರು ದಕ್ಷಿಣ ಕರ್ನಾಟಕದಲ್ಲೇ ಉತ್ತಮ ಕಟ್ಟಡ, ಪರಿಕರ ಹೊಂದಿರುವ ಅತ್ಯುತ್ತಮ ಆಯರ್ವೇದ ಆಸ್ಪತ್ರೆ ಇದಾಗಿದೆ. ಸಿದ್ಧ ಚಿಕಿತ್ಸೆ ಕರ್ನಾಟಕದಲ್ಲಿಲ್ಲದ ಕಾರಣ ಅದರ ಹೊರತು ಆಯುಷ್‌ಗೆ ಸಂಬಂಧಿಸಿದ ಎಲ್ಲ ಚಿಕಿತ್ಸೆಗಳು ಇಲ್ಲಿವೆ. ಚಿಕಿತ್ಸೆ ಪಡೆದ ರೋಗಿಗಳು ಸಂತುಷ್ಟರಾಗಿದ್ದಾರೆ. ಸದ್ಯಕ್ಕೆ ಔಷಧ ಕೊರತೆ ಇಲ್ಲ, ಆದರೆ ಬೇಡಿಕೆ ಹೆಚ್ಚಾಗಿದೆ. ಮುಂದಕ್ಕೆ ಪಥ್ಯಹಾರ ವಿಭಾಗ ಆರಂಭಿಸುವ ಯೋಜನೆ ಹೊಂದಲಾಗಿದೆ. - ಡಾ.ಇಕ್ಬಾಲ್, ಜಿಲ್ಲಾ ಅಧಿಕಾರಿ, ವೆನ್ಲಾಕ್ ಆಯುಷ್ ವಿಭಾಗ https://www.vijayavani.net/choose-a-field-of-interest-instead-of-succumbing-to-pressure https://www.vijayavani.net/teachers-role-is-critical-in-shaping-childrens-future