ಇಂದು ವಿಶ್ವ ಆಮೆ ದಿನ; ಆಮೆಗಳು ವೇಗವಾಗಿ ಓಡುತ್ತವೆ ಎಂಬುದನ್ನು ತೋರಿಸುತ್ತದೆ ಈ ವೈರಲ್ ವಿಡಿಯೋ | World Turtle Day

turtle
Published on

World Turtle Day | ಆಮೆ ಮತ್ತು ಮೊಲದ ಕಥೆಯನ್ನು ನೀವು ಕೂಡ ಕೇಳಿದ್ದೀರಿ ಅಲ್ವಾ. ತುಂಬಾ ತಾಳ್ಮೆ ಹಾಗೂ ನಿಧಾನವಾಗಿ ಚಲಿಸುವ ಆಮೆಗಳು ಭೂಮಿಯ ಮೇಲಿನ ಅತಿ ಹೆಚ್ಚು ಕಾಲ ಬದುಕುವ ಜೀವಿಗಳಲ್ಲಿ ಒಂದಾಗಿದೆ. ಸರೀಸೃಪ ಗುಂಪಿಗೆ ಸೇರಿದ ಆಮೆಯ 150 ವರ್ಷಗಳಿಗಿಂತ ಹೆಚ್ಚು ಕಾಲ ಬದುಕಬಲ್ಲವು ಎಂದು ಊಹಿಸಲಾಗಿದೆ. ಪರಿಸರ ವ್ಯವಸ್ಥೆಯಲ್ಲಿ ಅವುಗಳು ವಹಿಸುವ ಪಾತ್ರದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿವರ್ಷ ಮೇ 23 ರಂದು ವಿಶ್ವ ಆಮೆ (World Turtle Day) ದಿನವನ್ನು ಆಚರಿಸಲಾಗುತ್ತದೆ.

ನಿಧಾನಗತಿಗೆ ಹೆಸರುವಾಸಿಯಾಗಿರುವ ಆಮೆಗಳು ಸಾಮಾನ್ಯವಾಗಿ ವೇಗವಾಗಿ ಓಡಲು ಸಾಧ್ಯವಿಲ್ಲ. ಅಂದಹಾಗೆ, ಕೆಲವೊಮ್ಮೆ ಅನಿರೀಕ್ಷಿತ ಸನ್ನಿವೇಶಗಳು ಆಶ್ಚರ್ಯಕರ ಫಲಿತಾಂಶಗಳಿಗೆ ಕಾರಣವಾಗಬಹುದು. ಅದರಂತೆ ಆಮೆಯೊಂದು ತುಂಬಾ ವೇಗವಾಗಿ ಓಡುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾದ್ಯಮಗಳಲ್ಲಿ ವೈರಲ್​ ಆಗಿದೆ.

ಆ ದೃಶ್ಯ ಎಲ್ಲೆಡೆ ವೈರಲ್ ಆಗಿದ್ದು, ಆನ್‌ಲೈನ್‌ನಲ್ಲಿ ವ್ಯಾಪಕ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. ಇದನ್ನೂ ನೋಡಿದ ನೆಟ್ಟಿಗರು ಕಮೆಂಟ್​ಗಳನ್ನು ಮಾಡಲು ಶುರು ಮಾಡಿದ್ದಾರೆ. ಆಮೆ ಯಾವಾಗಲೂ ಓಟದಲ್ಲಿ ಗೆಲ್ಲುತ್ತದೆ ಎಂದು ಒಬ್ಬರು ಹೇಳಿದರೆ, ಮತ್ತೊಬ್ಬರು ಗುರುತ್ವಾಕರ್ಷಣೆಯ ನಿಯಂತ್ರಣಕ್ಕೆ ಸಿಕ್ಕಾಗ ಅದು ಹೆದರಿದೆ ಎಂದು ಬರೆದಿದ್ದಾರೆ.

ಈ ವಿಡಿಯೋದಲ್ಲಿ ಆಮೆ ವೇಗದಲ್ಲಿ ಓಡುವುದು ಹಾಗೂ ಆಮೆ ಇಳಿಜಾರಾದ ಮೇಲ್ಮೈ ಮೇಲೆ ಎಚ್ಚರಿಕೆಯಿಂದ ಹೆಜ್ಜೆ ಹಾಕುವುದನ್ನು ಕಾಣಬಹುದು. ನುಣುಪಾದ ಇಳಿಜಾರಿನ ಕಾರಣ, ಆಮೆ ಆಶ್ಚರ್ಯಕರವಾಗಿ ವೇಗದಲ್ಲಿ ಮುಂದಕ್ಕೆ ಚಲಿಸುತ್ತದೆ.

(ಏಜೆನ್ಸೀಸ್)

ವಿಜ್ಞಾನಿಗಳು ಹೇಳುವ ಪ್ರಕಾರ ಅಮೆಗಳು ಈ ಭೂಮಿಯ ಮೇಲಿರುವ ಅತ್ಯಂತ ಹಳೆಯ ಪ್ರಾಣಿಗಳಾಗಿವೆ. ಆಮೆಗಳು ಭೂಮಿಯ ಮೇಲೆ ಸುಮಾರು 220 ಮಿಲಿಯನ್‌ ವರ್ಷಗಳಿಂದ ಅಸ್ತಿತ್ವದಲ್ಲಿವೆ.

ವಿಶ್ವ ಆಮೆ ದಿನದ ಆಚರಣೆಯನ್ನು 2000 ನೇ ಇಸವಿಯಲ್ಲಿ ಅಮೆರಿಕನ್‌ ಟಾರ್ಟಾಯಿಸ್‌ ರೆಸ್ಕ್ಯೂ ಎಂಬ ಲಾಭರಹಿತ ಸಂಸ್ಥೆ ಪ್ರಾರಂಭಿಸಿತು. ಇದು ಅಳಿವಿನಂಚಿನಲ್ಲಿರುವ ಮತ್ತು ಅಪಾಯದಲ್ಲಿರುವ ಆಮೆಗಳನ್ನು ರಕ್ಷಿಸುವ ಅವುಗಳಿಗೆ ಸುರಕ್ಷಿತ ಸ್ಥಳವನ್ನು ಒದಗಿಸಿ ಕೊಡುವ ಉದ್ದೇಶವನ್ನು ಹೊಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net