ನೈಋತ್ಯ ಚೀನಾದಲ್ಲಿ ಭೂಕುಸಿತ; ನಾಲ್ವರು ಸಾವು; ಅವಶೇಷಗಳಡಿ ಸಿಲುಕಿದ 17 ಮಂದಿ| landslides

china landslide
Published on

ಗುರುವಾರ (ಮೇ 22) ಚಾಂಗ್ಶಿ ಪಟ್ಟಣದಲ್ಲಿ ಎರಡು ಶವಗಳು ಪತ್ತೆಯಾಗಿದ್ದು, ಹತ್ತಿರದ ಕ್ವಿಂಗ್ಯಾಂಗ್ ಗ್ರಾಮದಲ್ಲಿ ಮತ್ತೆರಡು ಶವಗಳು ಪತ್ತೆಯಾಗಿವೆ. ಅಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಎಂಟು ಮನೆಗಳ 17 ಜನರು ನೆಲ ಸಮಾಧಿಯಾಗಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

guizhou | ಚೀನಾದ ನೈಋತ್ಯ ಪ್ರಾಂತ್ಯದ ಗುಯಿಝೌದಲ್ಲಿ ಭೂಕುಸಿತ ಸಂಭವಿಸಿದೆ. ಇನ್ನೂ ಈ ದುರಂತದಲ್ಲಿ ಕನಿಷ್ಠ ನಾಲ್ವರು ಸಾವನ್ನಪ್ಪಿದ್ದು, 17 ಮಂದಿ ಇನ್ನೂ ಅವಶೇಷಗಳಡಿಯಲ್ಲಿ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ.

ಭೂವೈಜ್ಞಾನಿಕ ವಿಪತ್ತುಗಳಿಗೆ ಗೈಝೌ ಎರಡನೇ ಹಂತದ ತುರ್ತು ಪ್ರತಿಕ್ರಿಯೆಯನ್ನು ಸಕ್ರಿಯಗೊಳಿಸಿತು ಮತ್ತು ಚೀನಾದ ನೈಸರ್ಗಿಕ ಸಂಪನ್ಮೂಲ ಸಚಿವಾಲಯವು ರಕ್ಷಣಾ ಕಾರ್ಯಾಚರಣೆಗಳಿಗೆ ಮಾರ್ಗದರ್ಶನ ನೀಡಲು ಆ ಪ್ರದೇಶಕ್ಕೆ ಒಂದು ತಂಡವನ್ನು ಕಳುಹಿಸಿದೆ.

ಭೂಕುಸಿತದಲ್ಲಿ ಗುಡ್ಡಗಾಡು ಪ್ರದೇಶದ ಹಸಿರು ಇಳಿಜಾರಿನಲ್ಲಿ ಕಂದು ಮಣ್ಣಿನ ದೊಡ್ಡ ಪದರ ಕುಸಿದು ಬಿದ್ದಿದೆ. ಭೂಕುಸಿತದ ಬಳಿಕ ಗುವಾ ಪಟ್ಟಣದಲ್ಲಿ ವಿದ್ಯುತ್ ಕಡಿತಗೊಳಿಸಲಾಗಿದೆ ಎಂದು ಹೇಳಲಾಗಿದೆ. ರಾತ್ರಿಯಿಡೀ ಈ ಪ್ರದೇಶದಲ್ಲಿ ಮಳೆಯಾಗಿದೆ ಎಂದು ನಿವಾಸಿಯೊಬ್ಬರು ತಿಳಿಸಿದ್ದಾರೆ.

(ಏಜೆನ್ಸೀಸ್)

ಕಾಣೆಯಾದ ಜನರನ್ನು ಮರಳಿ ಪಡೆಯಲು ಸಾಧ್ಯವಾದ ಎಲ್ಲಾ ಪ್ರಯತ್ನಗಳನ್ನು ಮಾಡುವಂತೆ ತುರ್ತು ನಿರ್ವಹಣಾ ಸಚಿವಾಲಯ ರಕ್ಷಣಾ ತಂಡಗಳನ್ನು ಒತ್ತಾಯಿಸಿದೆ.ಅಂದಹಾಗೆ, ದೂರದ ಪ್ರದೇಶವು "ಎತ್ತರ ಮತ್ತು ಕಡಿದಾದ" ಪ್ರದೇಶವಾಗಿದ್ದು, ರಕ್ಷಣಾ ಪ್ರಯತ್ನಗಳು ಕಷ್ಟಕರ ಎಂದು ಹೇಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net