ಮುಂಬೈ: ಪ್ರಸಕ್ತ ವಾರದಲ್ಲಿ ಚಿನ್ನ 1,113 ರೂಪಾಯಿ ಏರಿಕೆಯಾಗಿ 73,044 ರೂಪಾಯಿಗೆ ತಲುಪಿದೆ. ಬೆಳ್ಳಿ 1 ಕೆಜಿಗೆ 86,100 ರೂಪಾಯಿಗೆ ಮಾರಾಟವಾಗುತ್ತಿದೆ.
ಇದನ್ನೂ ಓದಿ: ಕೋಲ್ಕತ್ತಾ ಅತ್ಯಾಚಾರ ಪ್ರಕರಣ: ಆರೋಪಿಗೆ ನಾರ್ಕೋಟೆಸ್ಟ್ ನಿರಾಕರಿಸಿದ ಕೋರ್ಟ್!
ಈ ವಾರ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಏರಿಕೆಯಾಗಿದೆ. ಇಂಡಿಯಾ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ (ಐಬಿಜಿಎ) ವೆಬ್‌ಸೈಟ್ ಪ್ರಕಾರ, ಕಳೆದ ಶನಿವಾರ ಅಂದರೆ ಸೆಪ್ಟೆಂಬರ್ 7 ರಂದು, 24 ಕ್ಯಾರೆಟ್ ಚಿನ್ನವು 71,931 ರೂ ಇತ್ತು, ಅದು ಈಗ(14 ಸೆಪ್ಟೆಂಬರ್) 10 ಗ್ರಾಂಗೆ 73,044 ರೂ ತಲುಪಿದೆ . ಅಂದರೆ ಈ ವಾರ ಅದರ ಬೆಲೆ 1,113 ರೂ.ಗಳಷ್ಟು ಹೆಚ್ಚಾಗಿದೆ.
ಬೆಳ್ಳಿಯ ಬಗ್ಗೆ ಹೇಳುವುದಾದರೆ, ಕಳೆದ ಶನಿವಾರ 83,338 ರೂ.ಗಳಷ್ಟಿತ್ತು. ಅದು ಈಗ ಕೆಜಿಗೆ 86,100 ರೂ.ಗೆ ತಲುಪಿದೆ. ಈ ವಾರ ಅದರ ಬೆಲೆ 2,762 ರೂ.ಗಳಷ್ಟು ಹೆಚ್ಚಾಗಿದೆ. ಈ ವರ್ಷ ಬೆಳ್ಳಿಯು ಮೇ 29 ರಂದು 1ಕೆಜಿಗೆ ಗೆ 94,280 ರೂ.ಗಳ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿತ್ತು. ಚಿನ್ನವು ಮೇ 21 ರಂದು ಸಾರ್ವಕಾಲಿಕ ಗರಿಷ್ಠ 74,222 ರೂ.ಗೆ ಮಾರಾಟವಾಗಿತ್ತು.
ಐಬಿಜೆಎ ಪ್ರಕಾರ ಈ ವರ್ಷ ಇಲ್ಲಿಯವರೆಗೆ ಚಿನ್ನದ ಬೆಲೆ 9,692 ರೂಪಾಯಿಗಳಷ್ಟು ಹೆಚ್ಚಾಗಿದೆ . ಜನವರಿ 1 ರಂದು 63,352 ರೂ.ಗಳಷ್ಟಿದ್ದ ಚಿನ್ನದ ಬೆಲೆ ಈಗ 10 ಗ್ರಾಂಗೆ 73,044 ರೂ.ಗೆ ತಲುಪಿದೆ. ಅದೇ ಸಮಯದಲ್ಲಿ ಒಂದು ಕೆಜಿ ಬೆಳ್ಳಿಯ ಬೆಲೆ 73,395 ರೂ.ನಿಂದ 86,100 ರೂ.ಗೆ ಏರಿಕೆಯಾಗಿದೆ.
ಬೆಂಗಳೂರಿನಲ್ಲಿ ಶನಿವಾರ (ಸೆ.14)ರಂದು 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 69,350 ರೂ. ಮತ್ತು 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 72,820 ರೂ. ದರವಿದೆ.