'ಟೋಬಿ' ಬರುತ್ತಿದ್ದಾನೆ ಟ್ರೇಲರ್​​ನೊಂದಿಗೆ; ಈ ದಿನ ರಿಲೀಸ್​ ಆಗಲಿದೆ ರಾಜ್​​ ಬಿ.ಶೆಟ್ಟಿ ನಟನೆಯ ಚಿತ್ರ!

Untitled design - 2023-07-30T174841.469
Published on

ಬೆಂಗಳೂರು: ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ, ಬರಹಗಾರ, ನಿರ್ದೇಶಕ ರಾಜ್​ ಬಿ.ಶೆಟ್ಟಿ ನಟನೆಯ ಬಹುನಿರೀಕ್ಷಿತ 'ಟೋಬಿ' ಚಿತ್ರದ ಟ್ರೇಲರ್​ ಬಿಡುಗಡೆ ದಿನಾಂಕ ಮತ್ತು ಸಮಯವನ್ನು ಇದೀಗ ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ.

ರಾಜ್​ ಬಿ.ಶೆಟ್ಟಿ ಅಭಿಮಾನಿಗಳು ಬೆಂಬಿಡದೆ ಕೇಳುತ್ತಿದ್ದ ಪ್ರಶ್ನೆಗೆ ಇದೀಗ ಚಿತ್ರತಂಡ ಉತ್ತರಿಸಿದ್ದು, "ಟೋಬಿ ಚಿತ್ರದ ಟ್ರೇಲರ್​ ಇದೇ ಆಗಸ್ಟ್​​ 04 ರಂದು ಸಂಜೆ 4:15ಕ್ಕೆ ಬಿಡುಗಡೆಗೊಳಿಸಲಿದ್ದೇವೆ. ಆರ್​ ಯು ರೆಡಿ" ಎಂದು ಪೋಸ್ಟರ್​ನಲ್ಲಿ ಪ್ರಶ್ನಾರ್ಥಕ ಚಿಹ್ನೆ ಬಳಸಿ ತಿಳಿಸಿದೆ. ಸದ್ಯ ಈ ಬಗ್ಗೆ ಫ್ಯಾನ್ಸ್​ ಸಂತಸ ವ್ಯಕ್ತಪಡಿಸಿದ್ದು, ಟ್ರೇಲರ್​ ವೀಕ್ಷಿಸಿದ ಬಳಿಕ ಏನು ಹೇಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net