ಮನೆಯಲ್ಲಿ ದಾಸ್ತಾನಿರಿಸಿದ್ದ ತಂಬಾಕು ಉತ್ಪನ್ನ ವಶ

New Project (3)
Published on

ಕಾಸರಗೋಡು: ವಿದ್ಯಾನಗರ ಹಾಗೂ ಕಾಸರಗೋಡು ನಗರ ಠಾಣಾ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಕೇರಳದಲ್ಲಿ ನಿಷೇಧಗೊಂಡಿರುವ ಭಾರಿ ಪ್ರವಾಣದ ತಂಬಾಕು ಉತ್ಪನ್ನ ವಶಪಡಿಸಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಿದ್ದಾರೆ. ವಿದ್ಯಾನಗರ ಠಾಣಾ ಪೊಲೀಸರು ಮಧೂರು ಹಿದಾಯತ್‌ನಗರದ ಮುಟ್ಟತ್ತೋಡಿ ನಿವಾಸಿ ಟಿ.ಎಂ.ಅಬೂಬಕ್ಕರ್ ಸಿದ್ದೀಕ್ ಹಾಗೂ ಚೆಟ್ಟುಂಗುಳಿ ನಿವಾಸಿ ಎಂ.ಸಿ. ಜಲೀಲ್ ಬಂಧಿತರು. ನಗರಠಾಣೆ ಪೊಲೀಸರು ಮೊಗ್ರಾಲ್ ಪುತ್ತೂರು ಬಳಿ ತಪಾಸಣೆ ನಡೆಸುತ್ತಿರುವ ವೇಳೆ ಆಗಮಿಸಿದ ಕಾರು ತಡೆದು ತಪಾಸಣೆ ನಡೆಸಿದಾಗ ಚೀಲದಲ್ಲಿ ತುಂಬಿಡಲಾಗಿದ್ದ 17,154 ಪ್ಯಾಕೆಟ್ ತಂಬಾಕು ಉತ್ಪನ್ನ ಪತ್ತೆಯಾಗಿತ್ತು. ಅವರನ್ನು ವಿಚಾರಣೆಗೊಳಪಡಿಸಿ ಚೆಟ್ಟುಂಗುಳಿ ನಿವಾಸಿ ಜಲೀಲ್ ಮನೆಯ ಶೆಡ್ಡಿನಲ್ಲಿ ದಾಸ್ತಾನಿರಿಸಿದ್ದ 73,664 ಪ್ಯಾಕೆಟ್ ತಂಬಾಕು ಉತ್ಪನ್ನ ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ವಿದ್ಯಾನಗರ ಠಾಣಾ ಇನ್‌ಸ್ಪೆಕ್ಟರ್ ಪಿ.ವಿ.ವಿಪಿನ್ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net