ರೈತರ ಆದಾಯ ಹೆಚ್ಚಿಸಲು ಕನ್ನಡದಲ್ಲಿ 'ಇಂಡಿಯನ್ ಮನಿ ಡಾಟ್ ಕಾಂ' ವಿಶೇಷ ಕೋರ್ಸ್ ಲೋಕಾರ್ಪಣೆ

Indian Money Dot Com
Published on

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು 'ಇಂಡಿಯನ್ ಮನಿ ಡಾಟ್ ಕಾಂ'ನ ಫೈನಾನ್ಸಿಯಲ್ ಫ್ರೀಡಂ ಆ್ಯಪ್​ನಲ್ಲಿ ರೈತರ ಆದಾಯ ಹೆಚ್ಚಳಕ್ಕೆ ಪೂರಕವಾಗಿ ವಿನ್ಯಾಸಗೊಳಿಸಿರುವ ವಿಶೇಷ ಕೋರ್ಸ್ ಇಂದು ಲೋಕಾರ್ಪಣೆ ಮಾಡಿದರು. ಬೆಂಗಳೂರಿನ

ಶಾಂತಿನಗರದಲ್ಲಿರುವ 'ಇಂಡಿಯನ್ ಮನಿ ಡಾಟ್ ಕಾಂ'ನ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರ ಆದಾಯ ಹೆಚ್ಚಳದ ದೃಷ್ಟಿಯಿಂದ ವಿನ್ಯಾಸಗೊಳಿಸಲಾಗಿರುವ “ಸಮಗ್ರ ಕೃಷಿಯಲ್ಲಿ 365 ದಿನಗಳೂ ಆದಾಯ ಗಳಿಸುವುದು ಹೇಗೆ?” ಎನ್ನುವ ಕೋರ್ಸ್ ಅರ್ಥಪೂರ್ಣವಾಗಿದೆ. ರೈತರ ಉನ್ನತಿಯಾದರೆ ಮಾತ್ರ ದೇಶದ ಪ್ರಗತಿ ಸಾಧ್ಯ. ಈ ನಿಟ್ಟಿನಲ್ಲಿ ರೈತರಿಗೆ ಬಲ ತುಂಬಲು ಮುಂದಾಗಿರುವ 'ಇಂಡಿಯನ್ ಮನಿ ಡಾಟ್ ಕಾಂ'ನ ಪ್ರಯತ್ನ ಶ್ಲಾಘನೀಯ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ 'ಇಂಡಿಯನ್ ಮನಿ ಡಾಟ್ ಕಾಂ' ಸಂಸ್ಥಾಪಕ- ಸಿಇಒ ಸಿ.ಎಸ್. ಸುಧೀರ್, ಯಾವುದೇ ಕ್ಷೇತ್ರದಲ್ಲಿ ಪ್ರಗತಿ ಕಾಣಬೇಕಾದರೆ ಕಲಿಕೆ ಬಹಳ ಮುಖ್ಯ. ಈ ಮಾತು ಕೃಷಿ ಕ್ಷೇತ್ರಕ್ಕೂ ಅನ್ವಯಿಸುತ್ತದೆ. ರೈತರಿಗೆ ಪ್ರಗತಿಪರ ರೈತರಿಂದಲೇ ಹೊಸ ವಿಚಾರಗಳನ್ನು ಕಲಿಸಲು ಮತ್ತು ತಿಳಿಸಲು ಫೈನಾನ್ಸಿಯಲ್ ಫ್ರೀಡಂ ಆ್ಯಪ್​ನಲ್ಲಿ ಹೊಸ ಕೋರ್ಸ್​​ಗಳನ್ನು ವಿನ್ಯಾಸಗೊಳಿಸಲಾಗಿದೆ. ರೈತರು ಇದರ ಸದುಪಯೋಗಪಡಿಸಿಕೊಂಡು ತಮ್ಮ ಆದಾಯ ಹೆಚ್ಚಿಸಿಕೊಳ್ಳಲು ಮುಂದಾಗಬೇಕು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net