More

    ವಾಟ್ಸ್​ಆ್ಯಪ್​ ವೆಬ್​ನಲ್ಲಿ ಇದು ಸಿಕ್ಕಿದ್ದರೆ ನೀವು ಲಕ್ಕಿನೇ; ಸಿಗದಿದ್ದವರಿಗೆ ಚಿಂತೆ ಬೇಡ…

    ಬೆಂಗಳೂರು: ಫೇಸ್​ಬುಕ್​ ಮಾಲೀಕತ್ವದ ವಾಟ್ಸ್​ಆ್ಯಪ್​ ಮೇಲಿಂದ ಮೇಲೆ ಹೊಸ ಹೊಸ ಅಪ್​ಡೇಟ್ಸ್​ ಕೊಡುತ್ತಿದ್ದು, ಆ ಮೂಲಕ ಬಳಕೆದಾರರಿಗೆ ನೂತನ ಸೌಲಭ್ಯ ಒದಗಿಸಲು ಮತ್ತು ಹೆಚ್ಚು ಹೆಚ್ಚು ಜನರನ್ನು ತಲುಪಲು ಪ್ರಯತ್ನ ಮಾಡುತ್ತಿದೆ. ಇತ್ತೀಚೆಗಷ್ಟೇ ವಾಟ್ಸ್​ಆ್ಯಪ್​ ಮೂಲಕ ಹಣ ವರ್ಗಾವಣೆ ಅವಕಾಶವನ್ನೂ ಕಲ್ಪಿಸಿರುವ ಸಂಸ್ಥೆ ಸದ್ಯದಲ್ಲೇ ಸುಲಭದ ಹಾಗೂ ಕಡಿಮೆ ಕಂತಿನಲ್ಲಿ ತುರ್ತು ಆರ್ಥಿಕ ನೆರವು ಒದಗಿಸುವ ಆರೋಗ್ಯ ವಿಮೆಯನ್ನು ಒದಗಿಸುವ ಚಿಂತನೆಯಲ್ಲೂ ಇದೆ. ಇದೀಗ ಮತ್ತಷ್ಟು ಅಪ್​ಡೇಟ್​ ಆಗಿರುವ ವಾಟ್ಸ್ಆ್ಯಪ್​ ತನ್ನ ಗ್ರಾಹಕರಿಗೆ ಮತ್ತೊಂದು ವಿಶೇಷ ಸೌಕರ್ಯ ಒದಗಿಸುತ್ತಿದೆ.

    ಆದರೆ ಸದ್ಯ ಇದು ಕೆಲವು ಅದೃಷ್ಟವಂತರಿಗಷ್ಟೇ ಸಿಗುತ್ತಿದೆ. ಹಾಗಂತ ಕಂಪನಿಯೇ ಹೇಳಿಕೊಂಡಿದೆ. ಅದೇನೆಂದರೆ ವಾಟ್ಸ್​ಆ್ಯಪ್​ ವೆಬ್​ನಲ್ಲಿ ವಿಡಿಯೋ ಕಾಲ್ ವ್ಯವಸ್ಥೆ. ವಾಟ್ಸ್​ಆ್ಯಪ್​ ಮೂಲಕ ಡೆಸ್ಕ್​ಟಾಪ್​ನಿಂದಲೂ ವಿಡಿಯೋ ಕಾಲ್​ ಮಾಡುವ ವ್ಯವಸ್ಥೆಯನ್ನು ನೀಡುವುದಾಗಿ ಕಂಪನಿ ಹೇಳಿಕೊಂಡಿದ್ದು, ಅದು ಈಗಾಗಲೇ ಕೆಲವರಿಗೆ ಸಿಗುತ್ತಿದೆ. ಆದರೆ ಇನ್ನೂ ಹಲವರಿಗೆ ಸಿಗುತ್ತಿಲ್ಲ.

    ಇದನ್ನೂ ಓದಿ: ಡ್ರಗ್ಸ್​ ಕೇಸ್​ನಲ್ಲಿ ನಟರನ್ನೇಕೆ ಬಂಧಿಸಿಲ್ಲ? ಅಸಮಾಧಾನ ಹೊರಹಾಕಿದ ಇಂದ್ರಜಿತ್​ ಲಂಕೇಶ್​ 

    ಇಂಥದ್ದೊಂದು ವಿಶೇಷ ಆಪ್ಷನ್​ ವಾಟ್ಸ್​ಆ್ಯಪ್​ ತನ್ನ ಬೀಟಾ ಟೆಸ್ಟರ್ಸ್​ಗೆ ನೀಡುತ್ತಿದ್ದು, ಈಗಾಗಲೇ ಅಂಥ ಬಳಕೆದಾರರು ಅದನ್ನು ಪಡೆಯುತ್ತಿದ್ದಾರೆ. ನೀವು ಬೀಟಾ ಟೆಸ್ಟರ್​ ಆಗಿಯೂ ವಾಟ್ಸ್​ಆ್ಯಪ್​ ವೆಬ್​ ವಿಡಿಯೋ ಕಾಲ್​ ಫೀಚರ್ ಸಿಗದಿದ್ದರೆ ಚಿಂತೆ ಬೇಡ, ಮುಂದಿನ ದಿನಗಳಲ್ಲಿ ನಿಮಗದು ಸಿಗಲಿದೆ ಎಂದು ವಾಟ್ಸ್ಆ್ಯಪ್​ ಬೀಟಾ ಇನ್​ಫೋ ತಿಳಿಸಿದೆ.

    ಅದು ಬೀಟಾ ಫೀಚರ್ ಆಗಿರುವುದರಿಂದ ಕೆಲವರಿಗಷ್ಟೇ ಈಗ ಸಿಗುತ್ತಿದೆ. ನಿಮಗೆ ಈಗಾಗಲೇ ಸಿಗುತ್ತಿದ್ದರೆ ನೀವು ಅದೃಷ್ಟವಂತರು. ಸಿಗದಿದ್ದರೂ ಚಿಂತೆ ಬೇಡ, ಸದ್ಯದಲ್ಲೇ ನಿಮಗೆ ಆ ಕುರಿತ ಅಪ್​ಡೇಟ್ಸ್​ ಬರಲಿದೆ, ಪ್ರತಿದಿನ ತುಂಬಾ ಜನ ಆ ಕುರಿತ ಆ್ಯಕ್ಟಿವೇಷನ್​ ಪಡೆದುಕೊಳ್ಳುತ್ತಿದ್ದಾರೆ. ವಿಡಿಯೋ ಕಾಲ್​ ಬಟನ್​ ಚಾಟ್​ ಹೆಡರ್​ನಲ್ಲಿ ಲಭ್ಯವಿರಲಿದ್ದು, ಕಾಲ್​ ಬರುತ್ತಿದ್ದಂತೆ ಹೊಸ ವಿಂಡೋ ಪಾಪಪ್​ ಆಗಲಿದೆ ಎಂದು ಸಂಸ್ಥೆ ಬೀಟಾ ಇನ್​ಫೋನಲ್ಲಿ ಹೇಳಿಕೊಂಡಿದೆ.

    ಇದನ್ನೂ ಓದಿ: ಸೊಂಟ ನೋವಿನಿಂದ ಬಳಲಿ ಬೆಂಡಾಗಿದ್ದೇನೆ- ಅಯುರ್ವೇದದಲ್ಲಿ ಪರಿಹಾರ ತಿಳಿಸಿ… 

    ಸದ್ಯ ವಾಟ್ಸ್​ಆ್ಯಪ್​ ಬಳಕೆದಾರರಿಗೆ ಮೊಬೈಲ್​ಫೋನ್​ ಆ್ಯಪ್​ನಲ್ಲಷ್ಟೇ ಆಡಿಯೋ/ವಿಡಿಯೋ ಕಾಲ್​ ಸೌಲಭ್ಯ ಸಿಗುತ್ತಿದೆ. ಶೀಘ್ರದಲ್ಲೇ ಎಲ್ಲ ವಾಟ್ಸ್​ಆ್ಯಪ್​ ಬಳಕೆದಾರರಿಗೂ ವಾಟ್ಸ್​ಆ್ಯಪ್​ ವೆಬ್​ನಲ್ಲೂ ಆಡಿಯೋ/ವಿಡಿಯೋ ಕಾಲ್​ ಸೌಲಭ್ಯ ಸಿಗಲಿದೆ. ಅಷ್ಟರವರೆಗೆ ಕಾಯಲು ಸಾಧ್ಯವಿರದಿದ್ದರೆ ಬಳಕೆದಾರರು ಅಲ್ಲಿರುವ ‘ರೂಮ್’ ಆಪ್ಷನ್​ ಮೂಲಕ ವಾಟ್ಸ್​ಆ್ಯಪ್​​ ಫ್ರೆಂಡ್ಸ್​ ಜತೆ ವಿಡಿಯೋ ಕಾಲ್ ಮಾಡಬಹುದು ಎಂದು ಕಂಪನಿ ತಿಳಿಸಿದೆ. (ಏಜೆನ್ಸೀಸ್​)

    ಅಂಗೈಯಲ್ಲೇ ಎಲ್ಲ: ಅನಾರೋಗ್ಯಗೊಂಡಾಗಲೂ ನೆರವಿಗೆ ಬರಲಿದೆ ವಾಟ್ಸ್​​ಆ್ಯಪ್!

    ಭಾರತಕ್ಕೆ ಬಂತು ವಾಟ್ಸ್​ಆ್ಯಪ್​ ಪೇ! ನಿಮ್ಮ ಮೊಬೈಲ್‌ನಲ್ಲಿ ವಾಟ್ಸಾಪ್ ಪೇ ಆ್ಯಕ್ಟಿವೇಟ್ ಮಾಡಿಕೊಳ್ಳುವುದು ಹೇಗೆ?

    ನೀವು ವಾಟ್ಸ್​ಆ್ಯಪ್​ ಬಳಸುತ್ತಿದ್ದೀರಾ?; ಹಾಗಿದ್ದರೆ ಇದನ್ನು ಓದಿ.. ಗಮನದಲ್ಲಿರಲಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts