

ಬೆಂಗಳೂರು: ವಾಟ್ಸ್ಆ್ಯಪ್ ಮೂಲಕ ಡಿಜಿಟಲ್ ಪೇಮೆಂಟ್ ಇದೀಗ ಭಾರತದಲ್ಲೂ ಆರಂಭವಾಗಿದೆ. ಇಷ್ಟು ದಿನ ಕೇವಲ ಸಂವಹನಕ್ಕೆ ಬಳಕೆಯಾಗುತ್ತಿದ್ದ ವಾಟ್ಸ್ಆ್ಯಪ್ ಇದೀಗ ಹಣ ಪಾವತಿಗೂ ಬಳಕೆಯಾಗಲಿದೆ. ಅಷ್ಟಕ್ಕೂ ಈ ವಾಟ್ಸ್ಆ್ಯಪ್ನಲ್ಲಿ ಹಣ ಕಳುಹಿಸುವುದು ಹೇಗೆ? ಈ ಪೇಮೆಂಟ್ ಮಾರ್ಗವನ್ನು ಬಳಸುವುದು ಹೇಗೆ ಎನ್ನುವ ನಿಮ್ಮ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ಬಳಕೆ ಹೇಗೆ?
– ಪ್ಲೇಸ್ಟೋರ್ನಲ್ಲಿ ವಾಟ್ಸ್ಆ್ಯಪ್ ಅನ್ನು ಅಪ್ಡೇಟ್ ಮಾಡಿಕೊಳ್ಳಿ
– ಚಾಟ್ ವಿಂಡೋನ ಬಡ ಮೇಲ್ಭಾಗದಲ್ಲಿ ಕಾಣುವ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ
– ಪೇಮೆಂಟ್ ವಿಂಡೋ ತೆರೆದುಕೊಳ್ಳುತ್ತದೆ. ಅದರಲ್ಲಿ ಆ್ಯಡ್ ಪೇಮೆಂಟ್ ಮೇಲೆ ಕ್ಲಿಕ್ಕಿಸಿ
– ಅಕ್ಸೆಪ್ಟ್ ಮೇಲೆ ಕ್ಲಿಕ್ಕಿಸಿ
– ಬ್ಯಾಂಕ್ಗಳ ಪಟ್ಟಿ ತೆರೆದುಕೊಳ್ಳುತ್ತದೆ. ನಿಮ್ಮ ಬ್ಯಾಂಕ್ ಆಯ್ಕೆ ಮಾಡಿ
– ಫೋನ್ ನಂಬರ್ ಮೂಲಕ ಬ್ಯಾಂಕ್ ಖಾತೆ ಖಾತರಿ ಪಡಿಸಿಕೊಳ್ಳಿ
– ನಿಮ್ಮ ಖಾತೆಯನ್ನು ದೃಢೀಕರಿಸಲು ವಾಟ್ಸ್ಆ್ಯಪ್ ಟೆಕ್ಸ್ ಮೆಸೇಜ್ ಕಳುಹಿಸಲು ಕೇಳುತ್ತದೆ. ಅದಕ್ಕೆ ಅನುಮತಿ ನೀಡಿ
– ಮತ್ತೊಮ್ಮೆ ಫೋನ್ ನಂಬರ್ ಕೇಳಲಾಗುತ್ತದೆ. ನಂಬರ್ ಹಾಕಿದ ನಂತರ ನಿಮ್ಮ ಖಾತೆ ದೃಢೀಕರಣವಾಗುತ್ತದೆ
– ಡನ್ ಮೇಲೆ ಕ್ಲಿಕ್ಕಿಸಿ, ನಂತರ ನೀವು ಪೇಮೆಂಟ್ ಪೇಜ್ಗೆ ಅಕ್ಸೆಸ್ ಪಡೆಯಬಹುದು
ಪಾವತಿ ಹೇಗೆ?
– ಯಾರಿಗೆ ಹಣ ಕಳುಹಿಸಬೇಕೋ ಅವರ ಚಾಟ್ ವಿಂಡೋ ತೆರೆಯಿರಿ
– ಕ್ಲಿಪ್ ಐಕಾನ್ ಮೇಲೆ ಕ್ಲಿಕ್ಕಿಸಿ
– ರೂಪಾಯಿ ಐಕಾನ್ ಮೇಲೆ ಕ್ಲಿಕ್ಕಿಸಿ
– ಎಷ್ಟು ಹಣ ಕಳುಹಿಸಬೇಕು ಎನ್ನುವುದನ್ನು ನಮೂದಿಸಿ
– ನಿಮ್ಮ ಯುಪಿಐ ಪಿನ್ ನಮೂದಿಸಿ
– ಹಣ ವರ್ಗಾವಣೆ ಸಂದೇಶದಿಂದ ಖಾತರಿ ಪಡಿಸಿಕೊಳ್ಳಿ