More

    ಫ್ರೆಂಡ್​ಗೆ ದುಡ್ಡು ಕಳುಹಿಸಬೇಕಾದ್ರೆ ಇನ್ನು ವಾಟ್ಸ್ಆ್ಯಪ್​ ಮಾಡಿ!

    ಬೆಂಗಳೂರು: ಡಿಜಿಟಲ್ ಪಾವತಿ ವ್ಯವಸ್ಥೆಯೊಳಗೆ ವಾಟ್ಸ್ಆ್ಯಪ್ ಪ್ರವೇಶವಾಗಿದ್ದು, ಭಾರತದಲ್ಲಿ ಅಪ್ಡೇಟ್ ಮಾಡಿದ ಅಪ್ಲಿಕೇಶನ್​ನಲ್ಲಿ ಇದು ಲಭ್ಯವಿದೆ. ಡಿಜಿಟಲ್ ಪಾವತಿ ಸೇವೆಯನ್ನು ಭಾರತದಲ್ಲಿ ಆರಂಭಿಸುವುದಕ್ಕಾಗಿ ಅದಕ್ಕೆ ನವೆಂಬರ್ ತಿಂಗಳಷ್ಟೇ ಅನುಮತಿ ಸಿಕ್ಕಿತ್ತು. ಆರಂಭಿಕ ಬ್ಯಾಂಕಿಂಗ್ ಪಾಲುದಾರರಾಗಿ ವಾಟ್ಸ್ಆ್ಯಪ್ ಪೇಮೆಂಟ್​ ಜತೆಗೆ ಸ್ಟೇಟ್​ಬ್ಯಾಂಕ್ ಆಫ್ ಇಂಡಿಯಾ, ಎಚ್​ಡಿಎಫ್​ಸಿ, ಐಸಿಐಸಿಐ ಮತ್ತು ಏಕ್ಸಿಸ್ ಬ್ಯಾಂಕುಗಳು ಕೈ ಜೋಡಿಸಿವೆ.

    ಈ ಸಂಬಂಧ ಪ್ರಕಟಣೆ ಹೊರಡಿಸಿರುವ ವಾಟ್ಸ್​ಆ್ಯಪ್, ಡಿಜಿಟಲ್ ಪಾವತಿ ಸೇವೆಗಾಗಿ ಕಂಪನಿ ಭಾರತದ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್​ಪಿಸಿಐ)ನ ಯುನಿಫೈಡ್ ಪೇಮೆಂಟ್ ಇಂಟರ್​ಫೇಸ್​ (ಯುಪಿಐ) ಅನ್ನು ಬಳಸಿಕೊಳ್ಳುತ್ತಿದೆ. ನವೆಂಬರ್ ತಿಂಗಳಲ್ಲಿ ಇದು ಪ್ರಾಯೋಗಿಕವಾಗಿ ಚಾಲ್ತಿಗೆ ಬಂದಿತ್ತು. ಈಗ ದೇಶವ್ಯಾಪಿ ಬಳಕೆದಾರರು ಡಿಜಿಟಲ್ ಪಾವತಿಯನ್ನು ವಾಟ್ಸ್​ಆ್ಯಪ್ ಮೂಲಕವೇ ಮಾಡಬಹುದಾಗಿದೆ ಎಂದು ಹೇಳಿದೆ.

    ಇದನ್ನೂ ಓದಿ: ಗ್ರಾ.ಪಂ.ಗೆ ಪತ್ನಿ ಅವಿರೋಧ ಆಯ್ಕೆ, ಸಂಭ್ರಮದಲ್ಲಿದ್ದ ಪತಿ ಮರುದಿನವೇ ಆತ್ಮಹತ್ಯೆ! ಕಾರಣ ಏನು?

    ವಾಟ್ಸ್​ಆ್ಯಪ್ ಬಳಕೆದಾರರು ಸರಳವಾಗಿ ಮತ್ತು ಸುರಕ್ಷಿತವಾಗಿ ಡಿಜಿಟಲ್ ಪಾವತಿ ಮಾಡುವುದಕ್ಕೆ ಈಗ ಸಾಧ್ಯವಾಗಿದೆ. ಗ್ರಾಹಕರ ಸುರಕ್ಷತೆಗಾಗಿ ನಾವು ಭಾರತ ಸರ್ಕಾರದ ಯುಪಿಐ ಅನ್ನೇ ಬಳಸುತ್ತಿದ್ದೇವೆ. ಇದು ಟ್ರಾನ್ಸ್​ಫರ್ಮೇಟಿವ್ ಸರ್ವೀಸ್ ಆಗಿದ್ದು, ಬಹಳಷ್ಟು ಬದಲಾವಣೆಯನ್ನು ತರಲಿದೆ ಎಂದು ವಾಟ್ಸ್​ಆ್ಯಪ್​ನ ಭಾರತದ ಮುಖ್ಯಸ್ಥ ಅಭಿಜಿತ್ ಬೋಸ್ ತಿಳಿಸಿದ್ದಾರೆ. (ಏಜೆನ್ಸೀಸ್)

    ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

    ಯುವಪ್ರತಿಭೆಗಳಿಗೆ ‘ನವರತನ್ ಜ್ಯುವೆಲರ್ಸ್’ ಉತ್ತೇಜನ – ಡಿ.18 ರಿಂದ 20 ‘ದಿ ಪ್ರಿನ್ಸೆಸ್’ ಫ್ಯಾಷನ್ ಶೋ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts