

Kitchen; ಫ್ರಿಡ್ಜ್ನಲ್ಲಿ ಆಹಾರ ಪದಾರ್ಥಗಳನ್ನು ಸಂಗ್ರಹಿಸಲು ಬಳಸಲಾಗುತ್ತದೆ. ಉಳಿದ ಆಹಾರ ಪದಾರ್ಥಗಳಿಂದ ಹಿಡಿದು ಈಗಷ್ಟೇ ತಂದ ತಾಜಾ ತರಕಾರಿ, ಹಾಲು, ಮೊಟ್ಟೆಯನ್ನು ಫ್ರಿಜ್ನಲ್ಲಿ ಸಂಗ್ರಹಿಸಿಡಲಾಗುತ್ತದೆ. ತರಕಾರಿಗಳು ಬೇಗನೆ ಹಾಳಾಗುತ್ತವೆ ಎಂಬ ಮಾತುಗಳನ್ನು ಮನೆಗಳಲ್ಲಿ ಕೇಳುತ್ತಾ ಇರುತ್ತೀವಿ. ಹಾಗಾಗಿ ಫ್ರಿಡ್ಜ್ನಲ್ಲಿ ತರಕಾರಿಗಳು ಬೇಗ ಹಾಳಾಗದಂತೆ ಇರಲು ಕೆಲ ಸಲಹೆಗಳನ್ನು ಅನುಸರಿಸಬೇಕಾಗುತ್ತದೆ.
ಸರಿಯಾದ ತಾಪಮಾನ: ಫ್ರಿಡ್ಜ್ನ ತಾಪಮಾನವನ್ನು 1-5°C ನಡುವೆ ಇರಿಸಿ. ತರಕಾರಿಗಳಿಗೆ 3-4°C ಒಳ್ಳೆಯದು.
ತೇವಾಂಶ ನಿಯಂತ್ರಣ: ಸೊಪ್ಪು, ಕ್ಯಾರೆಟ್, ಬೀಟ್ರೂಟ್ನಂತಹವುಗಳನ್ನು ಫ್ರಿಡ್ಜ್ನ ಹೆಚ್ಚು ತೇವಾಂಶವಿರುವ ಡ್ರಾಯರ್ನಲ್ಲಿ ಇರಿಸಿ.
ಫ್ರೀಜಿಂಗ್: ತರಕಾರಿಗಳನ್ನು ದೀರ್ಘಕಾಲ ಇಡಲು ಬಯಸಿದರೆ, ಕತ್ತರಿಸಿ, ಬಿಸಿನೀರಿನಲ್ಲಿ ಕೆಲವು ಸೆಕೆಂಡ್ಗಳ ಕಾಲ ಇರಿಸಿ, ನಂತರ ತಣ್ಣೀರಿನಲ್ಲಿ ತಣ್ಣಗಾಗಿಸಿ, ಗಾಳಿಯಾಡದ ಚೀಲದಲ್ಲಿ ಫ್ರೀಜರ್ನಲ್ಲಿ ಇಡಿ.
ಕಡಿಮೆ ತೇವಾಂಶ: ಈರುಳ್ಳಿ, ಬೆಳ್ಳುಳ್ಳಿ, ಆಲೂಗಡ್ಡೆಯಂತಹವುಗಳನ್ನು ಫ್ರಿಡ್ಜ್ನ ಹೊರಗೆ ತಂಪಾದ, ಒಣ ಸ್ಥಳದಲ್ಲಿ ಇಡಿ.
ಗಾಳಿಯಾಡುವ ಚೀಲಗಳು: ತರಕಾರಿಗಳನ್ನು ರಂಧ್ರವಿರುವ ಪ್ಲಾಸ್ಟಿಕ್ ಚೀಲಗಳಲ್ಲಿ ಅಥವಾ ಗಾಳಿಯಾಡದ ಕಂಟೇನರ್ಗಳಲ್ಲಿ ಇಡಿ. ಇದು ತೇವಾಂಶವನ್ನು ಸಮತೋಲನದಲ್ಲಿ ಇಡುತ್ತದೆ.
ತರಕಾರಿ ತೊಳೆಯದಿರುವುದು: ಫ್ರಿಡ್ಜ್ಗೆ ಇಡುವ ಮೊದಲು ತರಕಾರಿಗಳನ್ನು ತೊಳೆಯಬೇಡಿ, ಏಕೆಂದರೆ ತೇವಾಂಶ ಕೊಳೆಯುವಿಕೆಯನ್ನು ಉತ್ತೇಜಿಸುತ್ತದೆ ಹಾಗಾಗಿ ಅವುಗಳನ್ನು ಬಳಸುವಾಗ ಮಾತ್ರ ತೊಳೆಯಿರಿ.
ಸರಿಯಾದ ತಪಾಸಣೆ: ಫ್ರಿಡ್ಜ್ನ ತರಕಾರಿಗಳನ್ನು ಆಗಾಗ್ಗೆ ಪರಿಶೀಲಿಸಿ. ಏಕೆಂದರೆ ಒಂದು ತರಕಾರಿ ಕೊಳೆತರೆ, ಇತರವುಗಳಿಗೂ ಹರಡುತ್ತದೆ.
(ಏಜೆನ್ಸೀಸ್)
ಟೊಮೇಟೊ: ಇದನ್ನು ಫ್ರಿಡ್ಜ್ನ ಮೇಲಿನ ಶೆಲ್ಫ್ನಲ್ಲಿ ಇಡಬೇಕು. ಆದರೆ ದೀರ್ಘಕಾಲ ಇಡುವುದನ್ನು ನಿಯಂತ್ರಿಸಬೇಕು. ಸೇಬು, ಬಾಳೆಹಣ್ಣು, ಟೊಮೇಟೊ ಮುಂತಾದವು ಎಥಿಲೀನ್ ಗ್ಯಾಸ್ ಬಿಡುಗಡೆ ಮಾಡುತ್ತವೆ. ಇದು ಇತರ ತರಕಾರಿಗಳನ್ನು ಬೇಗ ಕೊಳೆಯುವಂತೆ ಮಾಡುತ್ತದೆ.