ಮಧುಮೇಹ ಇರುವವರಿಗೆ ಸ್ತನ ಕ್ಯಾನ್ಸರ್​ನ ಅಪಾಯ ಹೆಚ್ಚಂತೆ ಹೌದಾ? ಈ ಅಪಾಯಕಾರಿ ಅಂಶಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ! | health tips

Untitled design - 2025-08-28T174424.439
Published on

health tips : ಮಧುಮೇಹ ಇರುವವರಿಗೆ ಸ್ತನ ಕ್ಯಾನ್ಸರ್‌ನ ಅಪಾಯವು ಕೆಲವು ಆಘತಕಾರಿ ಕಾರಣಗಳಿಂದ ಹೆಚ್ಚಬಹುದು. ಈ ಎರಡು ಆರೋಗ್ಯ ಸ್ಥಿತಿಗಳು ದೇಹದ ಚಯಾಪಚಯ, ಹಾರ್ಮೋನ್‌ಗಳು ಮತ್ತು ಜೀವನಶೈಲಿಯ ಅಂಶಗಳಿಗೆ ಸಂಬಂಧಿಸಿದೆ. ಈ ಕುರಿತು ಕೆಲವು ಪ್ರಮುಖ ಕಾರಣಗಳನ್ನು ನೋಡಬಹುದಾಗಿದೆ.

ಮಧುಮೇಹ ಹಾಗೂ ಸ್ತನ ಕ್ಯಾನ್ಸರ್​ಗಿರುವ ಸಂಬಂಧ

ವಿಶೇಷವಾಗಿ ಟೈಪ್ 2 ಮಧುಮೇಹ, ದೇಹದ ಇನ್ಸುಲಿನ್ ಉತ್ಪಾದನೆ ಅಥವಾ ಬಳಕೆಯಲ್ಲಿ ಸಮಸ್ಯೆಯನ್ನು ಉಂಟುಮಾಡುತ್ತದೆ, ಇದು ರಕ್ತದ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಈ ದೀರ್ಘಕಾಲಿಕ ಸ್ಥಿತಿಯು ದೇಹದಲ್ಲಿ ಉರಿಯೂತ ಮತ್ತು ಆಕ್ಸಿಡೇಟಿವ್ ಒತ್ತಡವನ್ನು ಹೆಚ್ಚಿಸಿ, ಕ್ಯಾನ್ಸರ್‌ನಂತಹ ರೋಗಗಳಂತಹ ಅಪಾಯಗಳನ್ನು ಹೆಚ್ಚಿಸುತ್ತದೆ. ಹಾಗೇ ಸ್ತನ ಕ್ಯಾನ್ಸರ್‌ನ ಅಪಾಯವು ಮಧುಮೇಹಿಗಳಲ್ಲಿ ಶೇ. 20-30 ಪಟ್ಟು ಹೆಚ್ಚು ಎಂದು ಕೆಲವು ಅಧ್ಯಯನಗಳು ತಿಳಿಸಿವೆ.

ಮಧುಮೇಹಿ ಇರುವಂತರಿಗೆ ಸ್ತನ ಕ್ಯಾನ್ಸರ್​ ಬರುವುದು ಏಕೆ?

ಟೈಪ್ 2 ಮಧುಮೇಹದ ಇರುವವರಿಗೆ ಇನ್ಸುಲಿನ್ ರೆಸಿಸ್ಟೆನ್ಸ್ ದೇಹದಲ್ಲಿ ಇನ್ಸುಲಿನ್‌ನ ಮಟ್ಟವನ್ನು ಹೆಚ್ಚಿಸುತ್ತದೆ. ಇನ್ಸುಲಿನ್ ಒಂದು ಬೆಳವಣಿಗೆಯ ಅಂಶವಾಗಿದ್ದು, ಇದು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಇದು ವಿಶೇಷವಾಗಿ ಸ್ತನ ಕ್ಯಾನ್ಸರ್ ಕೋಶಗಳನ್ನು ದೇಹದಲ್ಲಿ ಬೆಳೆಸಲು ಪ್ರಾರಂಭಿಸುತ್ತದೆ.

ಹಾರ್ಮೋನ್​ಗಳ ವ್ಯತ್ಯಾಸ

ಮಧುಮೇಹವು ಈಸ್ಟ್ರೊಜೆನ್‌ನಂತಹ ಹಾರ್ಮೋನ್‌ಗಳ ಮಟ್ಟವನ್ನು ಬದಲಾಯಿಸಬಹುದು. ಇದರಲ್ಲಿರುವ ಹೆಚ್ಚಿನ ಈಸ್ಟ್ರೊಜೆನ್ ಮಟ್ಟವು ಸ್ತನ ಕ್ಯಾನ್ಸರ್‌ಗೆ ಒಂದು ಪ್ರಮುಖ ಅಪಾಯಕಾರಿ ಅಂಶವಾಗಿದ್ದು, ವಿಶೇಷವಾಗಿ ಋತುಬಂಧದ ನಂತರದ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

ಕೊಬ್ಬಿನ ಕಾಯಿಲೆ

ಟೈಪ್ 2 ಮಧುಮೇಹದೊಂದಿಗೆ ಕೊಬ್ಬಿನ ಕಾಯಿಲೆ ಸಾಮಾನ್ಯವಾಗಿ ಇರುತ್ತದೆ. ಇದು ಕೊಬ್ಬಿನ ಕೋಶಗಳಿಂದ ಈಸ್ಟ್ರೊಜೆನ್ ಉತ್ಪಾದನೆಯನ್ನು ಹೆಚ್ಚಿಸಿ, ಸ್ತನ ಕ್ಯಾನ್ಸರ್‌ ಬರಲು ಕಾರಣವಾಗುತ್ತದೆ. ಇದು ಉರಿಯೂತವನ್ನು ಹೆಚ್ಚಿಸುತ್ತದೆ.

ದೀರ್ಘಕಾಲಿಕ ಉರಿಯೂತ

ಮಧುಮೇಹವು ದೇಹದಲ್ಲಿ ದೀರ್ಘಕಾಲಿಕ ಉರಿಯೂತವನ್ನು ಉಂಟುಮಾಡುತ್ತದೆ. ಇದು ಕೋಶಗಳ ಡಿಎನ್‌ಎ ಯನ್ನು ಹಾನಿಗೊಳಿಸಿ ಕ್ಯಾನ್ಸರ್‌ನಂತಹ ಅಪಾಯಕಾರಿ ಅಪಾಯವನ್ನು ಹೆಚ್ಚಿಸುತ್ತದೆ.

ಜೀವನಶೈಲಿ ಅಂಶಗಳು

ಮಧುಮೇಹಿಗಳು ಸಾಮಾನ್ಯವಾಗಿ ದೈಹಿಕ ಚಟುವಟಿಕೆಗಳನ್ನು ಮಾಡುವುದು, ಧೂಮಪಾನ, ಮದ್ಯಪಾನದಂತಹ ಜೀವನಶೈಲಿ ಅಂಶಗಳಿಂದ ಸ್ತನ ಕ್ಯಾನ್ಸರ್​ ಬರುವ ಅಪಾಯ ಹೆಚ್ಚಿಸುತ್ತದೆ.

ತಡೆಗಟ್ಟುವಿಕೆಯ ಕ್ರಮಗಳು

* ಸ್ತನ ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳು ಕಂಡುಬಂದಲ್ಲಿ ಸ್ವಯಂ ಪರೀಕ್ಷೆ ಹಾಗೂ ವೈದ್ಯರ ಬಳಿ ಹೋಗಿ ಪರೀಕ್ಷಿಸಿ. ಆಹಾರ ಶೈಲಿಯಲ್ಲಿ ಸೇಬು, ಬೆರಿಗಳು, ವ್ಯಾಯಾಮ, ಮತ್ತು ತೂಕ ನಿರ್ವಹಣೆಯಿಂದ ಮಧುಮೇಹ ಮತ್ತು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಿಕೊಳ್ಳಬಹುದು.

* ಯೋಗ ಮತ್ತು ಧ್ಯಾನದಿಂದ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ. ಏಕೆಂದರೆ ಇದು ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತವೆ.

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net