ನಿಮ್ಮ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಚಾಣಕ್ಯನ ಈ ನೀತಿಗಳನ್ನು ಅನುಸರಿಸಿ ಸಾಕು|Chanakya Niti

chanakya
Published on

Chanakya Niti: ಭಾರತದ ಉತ್ತಮ ವಿದ್ವಾಂಸರಲ್ಲಿ ಚಾಣಕ್ಯರು ಒಬ್ಬರು. ಪ್ರತಿಯೊಂದು ವಿಷಯದ ಮೇಲೂ ಚಾಣಕ್ಯರ ದೃಷ್ಟಿಕೋನ ತುಂಬಾ ವಿಶಾಲವಾಗಿದೆ. ಈ ಕಾರಣದಿಂದಲೇ ಮಾನವ ಜೀವನದ ಮೇಲೆ ಪರಿಣಾಮ ಬೀರುವ ಸಣ್ಣ ಮತ್ತು ದೊಡ್ಡ ವಿಚಾರಗಳ ಮೇಲೆ ಬಹಳ ಸೂಕ್ಷ್ಮವಾಗಿ ಬೆಳಕು ಚೆಲ್ಲುತ್ತಾರೆ. ಚಾಣಕ್ಯನ ನೀತಿಯು ಒಬ್ಬ ವ್ಯಕ್ತಿಯನ್ನು ಯಶಸ್ವಿಯಾಗಲು ಪ್ರೇರೇಪಿಸುತ್ತದೆ. ಚಾಣಕ್ಯರು ಅರ್ಥಶಾಸ್ತ್ರ, ಸಮಾಜ ವಿಜ್ಞಾನ, ರಾಜಕೀಯ, ರಾಜತಾಂತ್ರಿಕತೆ ಮತ್ತು ಮಿಲಿಟರಿ ಸೈನ್ಸ್ ಸೇರಿದಂತೆ ಅನೇಕ ವಿಷಯಗಳ ಮೇಲೆ ಅಗಾಧ ಜ್ಞಾನವನ್ನು ಹೊಂದಿದ್ದಾರೆ.

ಚಾಣಕ್ಯ ನೀತಿಯಲ್ಲಿ ಮನಸ್ಸಿನ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಹಲವಾರು ಶ್ಲೋಕಗಳು ಮತ್ತು ತತ್ವಗಳು ಇವೆ. ಇವು ಜೀವನದಲ್ಲಿ ಶಿಸ್ತು, ನಿಯಂತ್ರಣ ಮತ್ತು ಬುದ್ಧಿವಂತಿಕೆಯನ್ನು ಒತ್ತಿಹೇಳುತ್ತವೆ. ಚಾಣಕ್ಯನ ದೃಷ್ಟಿಯಲ್ಲಿ, ಮನಸ್ಸಿನ ನಿಯಂತ್ರಣವು ಯಶಸ್ಸು, ಶಾಂತಿ ಮತ್ತು ಸಮತೋಲನದ ಜೀವನಕ್ಕೆ ಸಹಕಾರಿಯಾಗಿದೆ. ಹಾಗಿದ್ರೆ ಪ್ರಸ್ತುತ ಜೀವನದಲ್ಲಿ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಲು ಚಾಣಕ್ಯನ ಕೆಲವು ತತ್ವಗಳನ್ನು ತಿಳಿಯೋಣ.

ಮನಸ್ಸಿನ ಶಕ್ತಿಯನ್ನು ಅರಿತುಕೊಳ್ಳುವುದು:

ಚಾಣಕ್ಯನ ಪ್ರಕಾರ ಮನಸ್ಸು ಒಂದು ಶಕ್ತಿಶಾಲಿ ಸಾಧನವಾಗಿದ್ದು, ಅದನ್ನು ಸರಿಯಾಗಿ ನಿಯಂತ್ರಿಸದಿದ್ದರೆ ಅದು ವ್ಯಕ್ತಿಯ ವಿನಾಶಕ್ಕೆ ಕಾರಣವಾಗಬಹುದು. ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯ ಎಂಬ ತತ್ವವನ್ನು ಒತ್ತಿಹೇಳುತ್ತಾರೆ. ಮನಸ್ಸನ್ನು ಸಕಾರಾತ್ಮಕ ಚಿಂತನೆ ಮತ್ತು ಗುರಿಗಳತ್ತ ತೊಡಗಿಸಿಕೊಳ್ಳುವುದು ಅತ್ಯಗತ್ಯ.

ಕಾಮ, ಕ್ರೋಧ, ಲೋಭವನ್ನು ಜಯಿಸುವುದು:

ಚಾಣಕ್ಯನ ನೀತಿಶಾಸ್ತ್ರದಲ್ಲಿ ಕಾಮ (ಆಸೆ), ಕ್ರೋಧ (ಕೋಪ) ಮತ್ತು ಲೋಭ ಮನಸ್ಸಿನ ಶತ್ರುಗಳೆಂದು ಕರೆಯಲಾಗಿದೆ. ಇವುಗಳನ್ನು ಜಯಿಸಲು ಧ್ಯಾನ ಮತ್ತು ಶಿಸ್ತಿನ ಜೀವನವನ್ನು ಅನುಸರಿಸಬೇಕು.

ಧ್ಯಾನ ಮತ್ತು ಚಿಂತನೆ:

ಚಾಣಕ್ಯ ಮನಸ್ಸನ್ನು ಶುದ್ಧಗೊಳಿಸಲು ಧ್ಯಾನ ಮತ್ತು ಆತ್ಮಚಿಂತನೆಯನ್ನು ಸೂಚಿಸುತ್ತಾರೆ. ಶಾಂತವಾದ ನಮ್ಮ ಮನಸ್ಸು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ.

ಶಿಸ್ತಿನ ಜೀವನ:

ಚಾಣಕ್ಯನ ಪ್ರಕಾರ ನಿತ್ಯದ ದಿನಚರಿಯಲ್ಲಿ ಶಿಸ್ತು, ಸಮಯದ ಸದ್ಬಳಕೆ ಮತ್ತು ಸಕಾರಾತ್ಮಕ ಚಟುವಟಿಕೆಗಳು ಮನಸ್ಸನ್ನು ಒಂದು ಕಡೆ ಕೇಂದ್ರೀಕರಿಸಲು ಸಹಾಯ ಮಾಡುತ್ತವೆ. ಸಕಾಲದಲ್ಲಿ ಎದ್ದೇಳುವುದು, ಕೆಲಸಕ್ಕೆ ಆದ್ಯತೆ ನೀಡುವುದು ಮತ್ತು ಅನಗತ್ಯ ಚಿಂತೆಗಳಿಂದ ದೂರವಿರುವುದು ಬಹಳ ಮುಖ್ಯ

ವಿವೇಕ ಮತ್ತು ಬುದ್ಧಿಯ ಬಳಕೆ:

(ಏಜೆನ್ಸೀಸ್)

ಚಾಣಕ್ಯನ ಈ ತತ್ವಗಳನ್ನು ಅನುಸರಿಸುವುದರಿಂದ ಮನಸ್ಸನ್ನು ನಿಯಂತ್ರಿಸಿ, ಜೀವನದಲ್ಲಿ ಶಾಂತಿ ಮತ್ತು ಯಶಸ್ಸನ್ನು ಸಾಧಿಸಬಹುದು.

ಚಾಣಕ್ಯನ ನೀತಿಯ ಪ್ರಮುಖ ಸಂದೇಶವೆಂದರೆ ಬುದ್ಧಿ ಬಲವಾಗಿರುವವನಿಗೆ ಎಲ್ಲವೂ ಸಾಧ್ಯ. ಆದ್ದರಿಂದ ಮನಸ್ಸಿನಲ್ಲಿ ಜ್ಞಾನವನ್ನು ತುಂಬಿಕೊಂಡು, ಭಾವನಾತ್ಮಕ ನಿರ್ಧಾರಗಳನ್ನು ತಪ್ಪಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net