Wats app New Feature: ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಜನಪ್ರಿಯ ಹಾಗೂ ಪರಿಣಾಮಕಾರಿ ಎನಿಸಿ ಕೊಂಡಿರುವ ವಾಟ್ಸಾಪ್ (WhatsApp) ಬಳಕೆದಾರರ ಸುರಕ್ಷತೆಗಾಗಿ ಹೆಚ್ಚಿನ ಮಹತ್ವವನ್ನು ನೀಡುತ್ತಿದೆ. ಹಾಗೆ ಬಳಕೆದಾರರಿಗೆ ಪ್ರಯೋಜನವಾಗುವಂತಹ ಹೊಸ ಹೊಸ ಫೀಚರ್ ಗಳನ್ನೂ ಜಾರಿಗೆ ತರುತ್ತಿದೆ. ಇದೀಗ ವಾಟ್ಸಾಪ್ ಅನ್ನು ಹೆಚ್ಚಿನ ಬಳಕೆದಾರರು ಬಳಸುತ್ತಿರುದರಿಂದ ಅತ್ಯಂತ ಕಟ್ಟುನಿಟ್ಟಿನ ಕ್ರಮವನ್ನು ಜಾರಿಗೆ ತರಲಾಗುತ್ತಿದೆ.
ಫಿಶಿಂಗ್ ಹಾಗೂ ಸ್ಕ್ಯಾಮಿಂಗ್ ಪ್ರಯತ್ನಗಳ ಹೆಚ್ಚಳವನ್ನು ನೋಡಿದರೆ, ಆನ್ಲೈನ್ ನಲ್ಲಿ ಸುರಕ್ಷಿತವಾಗಿರಿಸಲು ಪಾಸ್ವರ್ಡ್ ಗಳು ಸಾಲುದಿಲ್ಲ ಹಾಗಾಗಿ ಗೂಗಲ್ (Google) ಆಪಲ್ ಹಾಗು ಇತರ ಟೆಕ್ ಸಂಸ್ಥೆಗಳು ಪಾಸ್ವರ್ಡ್ ಗಳನ್ನೂ ಬದಲಾಯಿಸಲು ಮತ್ತು ಆನ್ಲೈನ್ ಖಾತೆ ಗಳನ್ನೂ ಸುರಕ್ಷಿತವಾಗಿರಿಸಲು ಪಾಸ್ ಕೀ ಗಳನ್ನೂ (Passkey) ಅಳವಡಿಸುದಾಗಿ ಚಿಂತನೆ ನೆಡೆಸುತ್ತಿವೆ.
ಗೂಗಲ್, ಆ್ಯಪಲ್ ಮತ್ತು ಇತರ ಟೆಕ್ ಸಂಸ್ಥೆಗಳು ಪಾಸ್‌ವರ್ಡ್‌ಗಳನ್ನು ಬದಲಾಯಿಸಲು ಮತ್ತು ನಿಮ್ಮ ಆನ್‌ಲೈನ್ ಖಾತೆಗಳನ್ನು ಹೆಚ್ಚು ಸುರಕ್ಷಿತವಾಗಿಸಲು ಪಾಸ್‌ಕೀಗಳನ್ನು ಅಳವಡಿಸುವತ್ತ ಚಿತ್ತ ನೆಟ್ಟಿವೆ.
ವಾಟ್ಸಾಪ್, ಪಾಸ್‌ಕೀಗಳ ಮೂಲಕ ಬಳಕೆದಾರರ ಲಾಗಿನ್‌ಗಳನ್ನು ಪರೀಕ್ಷಿಸುತ್ತಿದ್ದು, ಈ ಪರೀಕ್ಷೆಯನ್ನು ನಿಮ್ಮ ಫೋನ್‌ನ ಬಯೋಮೆಟ್ರಿಕ್ ಸುರಕ್ಷತೆಯನ್ನು ಬಳಸಿಕೊಂಡು ಮಾಡಲಾಗುತ್ತದೆ ಹಾಗೂ ಪಾಸ್‌ವರ್ಡ್‌ಗಳನ್ನು ನೆನಪಿಟ್ಟುಕೊಳ್ಳುವ ಅಗತ್ಯ ಇನ್ನುಮುಂದೆ ಇರುವುದಿಲ್ಲ.
ಗೂಗಲ್ ಹಾಗೂ ಆ್ಯಪಲ್ ತಮ್ಮ ವೆಬ್ ಬ್ರೌಸರ್‌ಗಳಿಗೆ ಪಾಸ್‌ಕೀಗಳನ್ನು ಅಳವಡಿಸಿಕೊಂಡಿದ್ದು ಮೆಟಾ ಸೇರಿದಂತೆ ಹೆಚ್ಚಿನ ಕಂಪನಿಗಳು ಕೂಡ ಪಾಸ್‌ಕೀಯನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿವೆ ಎಂಬುದೇ ವಿಶೇಷವಾಗಿದೆ.
ವಾಟ್ಸಾಪ್ನ ಲ್ಲಿನ ಪಾಸ್‌ಕೀ ವೈಶಿಷ್ಟ್ಯವು ಖಾತೆಯ ಭದ್ರತೆಗೆ ಹೆಚ್ಚುವರಿ ಲೇಯರ್ ಅನ್ನು ಸೇರಿಸುತ್ತದೆ. ನೀವು ಸಮ್ಮತಿಯನ್ನು ನೀಡಿದರೆ ಮಾತ್ರ ಇತರರಿಗೆ ನಿಮ್ಮ ಡಿವೈಸ್ ನೋಡಲು ಸಾಧ್ಯ.
ಫೋನ್ ಬಳಕೆದಾರರಿಗೆ ಇರುವ ಏಕೈಕ ಬಯೋಮೆಟ್ರಿಕ್ ಆಯ್ಕೆಯಾಗಿರುವ ಫೇಸ್ ಐಡಿ ಮೂಲಕ ಪಾಸ್‌ಕೀಗಳು ಕಾರ್ಯನಿರ್ವಹಿಸುತ್ತವೆ. ಪಾಸ್‌ಕೀ ಬಳಸಿಕೊಂಡು ನಿಮ್ಮ ಫಿಂಗರ್‌ಪ್ರಿಂಟ್, ಮುಖ ಅಥವಾ ಸ್ಕ್ರೀನ್ ಲಾಕ್ ಪಿನ್/ಪ್ಯಾಟರ್ನ್ ಬಳಸಿ ನಿಮ್ಮ ಖಾತೆಗೆ ಸೈನ್ ಇನ್ ಮಾಡಬಹುದು.
ಪಾಸ್‌ಕೀ ಸದ್ಯಕ್ಕೆ ಬೀಟಾ ಆವೃತ್ತಿಯಲ್ಲಿ ಮಾತ್ರ ಲಭ್ಯವಿದೆ ಮತ್ತು ಈ ವರದಿಯಲ್ಲಿ WABetainfo ಉಲ್ಲೇಖಿಸಿದಂತೆ ಸೀಮಿತ ಸಂಖ್ಯೆಯ ಬೀಟಾ ಪರೀಕ್ಷಕರಿಗೆ ಫೀಚರ್ ಲಭ್ಯವಾಗುವಂತೆ ಮಾಡಲಾಗಿದೆ.
ಇನ್ಮುಂದೆ ಗೂಗಲ್ ರೀತಿಯಲ್ಲೇ ವಾಟ್ಸ್ ಆ್ಯಪ್ ಕೂಡ ಅದೇ ಪಾಸ್‌ಕೀ ರಚನೆಯನ್ನು ಹೊಂದಿರುತ್ತದೆ ಮತ್ತು ಸಂದೇಶ ಕಳುಹಿಸುವ ಆ್ಯಪ್‌ನೊಂದಿಗೆ ಲಿಂಕ್ ಮಾಡಲಾದ ಡಿವೈಸ್‌ಗಳಂತಹ ವೈಶಿಷ್ಟ್ಯಗಳೊಂದಿಗೆ ಬಹು ಸಾಧನಗಳಲ್ಲಿ ವಾಟ್ಸ್ ಆ್ಯಪ್ ಖಾತೆಯನ್ನು ಚಲಾಯಿಸಲು, ಎಲ್ಲಾ ಸಾಧನಗಳಲ್ಲಿ ಖಾತೆಗಳನ್ನು ನಿರ್ವಹಿಸಲು ಮತ್ತು ಸುರಕ್ಷಿತಗೊಳಿಸಲು ಪಾಸ್‌ಕೀ ಅತ್ಯುತ್ತಮ ಆಯ್ಕೆಯಾಗಿದೆ.